
CHITRADURGA NEWS | 18 JULY 2024
ಚಿತ್ರದುರ್ಗ: ಹಿಂದೂ-ಮುಸಲ್ಮಾನರು ಕೂಡಿಕೊಂಡು ಭಾವೈಕ್ಯತೆಯ ಸಂಕೇತವಾಗಿ ಆಚರಿಸುವ ಮೊಹರಂ(MUHARRAM) ಮೆರವಣಿಗೆ ನಗರದಲ್ಲಿ ಬುಧವಾರ ಜರುಗಿತು.

ದುಃಖ, ಬಲಿದಾನ, ಶೋಕಾಚರಣೆಯ ದಿನವನ್ನಾಗಿ ಆಚರಿಸುವ ಮೊಹರಂ ಹಬ್ಬದಲ್ಲಿ ದೇಹಕ್ಕೆ ಗಾಯ ಮಾಡಿಕೊಳ್ಳುವ ಸಂಪ್ರದಾಯ ಕೆಲವೆಡೆ ಈಗಲೂ ಇದೆ.
ಅದಕ್ಕಾಗಿಯೇ ಮೊಹರಂ ಹಬ್ಬಕ್ಕೆ ತನ್ನದೆ ಆದ ಮಹತ್ವವಿದೆ. ಒಂಬತ್ತು ದಿನಗಳ ಕಾಲ ಆಚರಿಸುವ ಮೊಹರಂ ಹಬ್ಬದ ಕೊನೆ ಹತ್ತನೆ ದಿನವೇ ಪಂಜ ಮೆರವಣಿಗೆ ಹೊರಡುತ್ತದೆ.
ಉಪವಾಸ ಆಚರಿಸುವ ಸಂಕಲ್ಪ ಮಾಡುವುದು ಹಬ್ಬದ ವಿಶೇಷ. ಚೇಳುಗುಡ್ಡ, ಬುರುಜನಹಟ್ಟಿ, ಮಠದ ಕುರುಬರಹಟ್ಟಿಯಿಂದ ಮೆರವಣಿಗೆ ಮೂಲಕ ಬಂದ ಪಂಜಗಳು ಸೈಯದ್ ನಾ ಹಜರತ್ ಇಮಾಂ ಹಸ ಸೈಯದಾನಾ, ಹಜರತ್ ಇಮಾಂ ಹುಸೇನ್ ಅಶೋರಖಾನ ಇವರುಗಳ ದರ್ಗಾ ಬಳಿ ತೆರಳಿ ಪೂಜೆ ಸಲ್ಲಿಸಿದವು.
ಗಾಂಧಿವೃತ್ತದಿಂದ ಹಿಡಿದು ದೊಡ್ಡಪೇಟೆಯವರೆಗೆ ರಸ್ತೆಯ ಎರಡು ಬದಿಯಲ್ಲಿ ಹಿಂದೂ-ಮುಸಲ್ಮಾನರು ಜಮಾಯಿಸಿ ಮೆರವಣಿಗೆ ವೀಕ್ಷಿಸಿದರು.
ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಗುಂಪು ಗುಂಪಾಗಿ ಜಮಾಯಿಸಿದ್ದ ಯುವಕರು ಡೊಳ್ಳು ತಮಟೆಗಳನ್ನು ಬಾರಿಸಿ ಕುಣಿದು ಕುಪ್ಪಳಿಸಿ ಮೊಹರಂ ಆಚರಿಸಿದರು.
ಬೃಹದಾಕಾರವಾದ ಹಾರ, ಹೂವು ಮತ್ತು ಸುನೇರಿಗಳಿಂದ ಅಲಂಕರಿಸಿದ್ದ ಪಂಜಗಳ ಮೇಲೆ ಜನ ಮಂಡಕ್ಕಿ ತೂರಿ ಭಕ್ತಿ ಸಮರ್ಪಿಸುತ್ತಿದ್ದರೆ, ಇನ್ನು ಕೆಲವರು ಕೆಳಗೆ ಬಿದ್ದ ಮಂಡಕ್ಕಿಗಳನ್ನು ಆಯ್ದುಕೊಳ್ಳುತ್ತಿದ್ದಿದ್ದು ಮೊಹರಂ ಹಬ್ಬದ ವಿಶೇಷವಾಗಿತ್ತು.
ದೊಡ್ಡಪೇಟೆ ಹಾಗೂ ಗಾಂಧಿವೃತ್ತದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
