ಮುಖ್ಯ ಸುದ್ದಿ
1.57 ಕೋಟಿ ಮೊತ್ತದ ಸ್ವತ್ತು ಮಾಲಿಕರಿಗೆ ಹಸ್ತಾಂತರ | 52 ಮೊಬೈಲ್ ಪತ್ತೆ ಮಾಡಿಕೊಟ್ಟ ಪೊಲೀಸರು

ಚಿತ್ರದುರ್ಗ ನ್ಯೂಸ್. ಕಾಂ: ಜಿಲ್ಲೆಯಲ್ಲಿ 68 ಪ್ರಕರಣಗಳಲ್ಲಿ ಕಳುವಾಗಿದ್ದ 1.57,57299 ರೂ.ಮೌಲ್ಯದ ಚಿನ್ನಾಭರಣ ನಗದು, ವಾಹನಗಳು, ಮೊಬೈಲ್ ಮತ್ತಿತರ ವಸ್ತುಗಳ ಪೊಲೀಸರು ಮಾಲಿಕರಿಗೆ ಹಿಂತಿರುಗಿಸಿದ್ದಾರೆ.
6.24 ಲಕ್ಷ ರೂ.ಮೌಲ್ಯದ 52 ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡು ಪೊಲೀಸರು ಹಿಂತಿರುಗಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮೂಲ ಮಾಲಿಕರಿಗೆ ಹಸ್ತಾಂತರ ಮಾಡಿದರು.
ಇದನ್ನೂ ಓದಿ: ಊರ ಹಬ್ಬದ ದಿನವೇ ಕೊಲೆ
ಸದರಿ ಪ್ರಕರಣಗಳಲ್ಲಿ ಚಿತ್ರದುರ್ಗ ಉಪವಿಭಾಗದಿಂದ 22 ಪ್ರಕರಣದಲ್ಲಿ 1.08,48,299 ರೂ.ಮೌಲ್ಯದ ಸ್ವತ್ತುಗಳು, ಹಿರಿಯೂರು ಉಪವಿಭಾಗದಿಂದ 16 ಪ್ರಕರಣಗಳಲ್ಲಿ 24,95 ಲಕ್ಷ ಹಾಗೂ ಚಳ್ಳಕೆರೆ ಉಪವಿಭಾಗದಿಂದ 30 ಪ್ರಕರಣಗಳಲ್ಲಿ 24,14 ಲಕ್ಷ ರೂ. ಮೌಲ್ಯದ ಮಾಲುಗಳನ್ನು ಹಿಂತಿರುಗಿಸಿದ್ದಾರೆ.
ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಪತ್ತೆಹಚ್ಚಿ 6.24 ಲಕ್ಷ ರೂ.ಮೌಲ್ಯದ 52 ಮೊಬೈಲ್ ಮಾಲಿಕರಿಗೆ ಕೊಟ್ಟಿದ್ದಾರೆ.
ಈ ಪ್ರಕರಣಗಳಲ್ಲಿ 1 ಕೆ.ಜಿ. ಬಂಗಾರ, 2 ಕೆಜಿ ಬೆಳ್ಳೆ,ಯನ್ನೂ ವಶಪಡಿಸಿಕೊಂಡು ಮಾಲಿಕರಿಗೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಚ್.ಜೆ.ಕುಮಾರಸ್ವಾಮಿ, ಅಬ್ದುಲ್ ಖಾದರ್, ಡಿಎಸ್ಪಿಗಳಾದ ಎಚ್.ಆರ್.ಅನಿಲ್ ಕುಮಾರ್, ರಾಜಣ್ಣ, ಎಸ್.ಚೈತ್ರಾ, ಗಣೇಶ್ ಉಪಸ್ಥಿತರಿದ್ದರು.
