ಮುಖ್ಯ ಸುದ್ದಿ
ವೀರಶೈವ ಲಿಂಗಾಯತ ಸಮಾಜಕ್ಕೆ ಎಚ್.ಎನ್.ತಿಪ್ಪೇಸ್ವಾಮಿ ಅಧ್ಯಕ್ಷ | ಕೆ.ಸಿ.ನಾಗರಾಜ್ ಉಪಾಧ್ಯಕ್ಷ

ಚಿತ್ರದುರ್ಗ ನ್ಯೂಸ್.ಕಾಂ: ನಗರದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾಗಿ ಎಚ್.ಎನ್.ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶಾಸಕ ಕೆ.ಸಿ.ವಿರೇಂದ್ರ ಅವರ ಸಹೋಧರ ಕೆ.ಸಿ.ನಾಗರಾಜ್, ಕಾರ್ಯದರ್ಶಿಯಾಗಿ ಪಿ.ವೀರೇಂದ್ರಕುಮಾರ್ ಜಂಟಿ ಕಾರ್ಯದರ್ಶಿಯಾಗಿ ಜಿತೇಂದ್ರ ಎನ್.ಹುಲಿಕುಂಟೆ ಹಾಗೂ ಖಜಾಂಚಿಯಾಗಿ ಚಳ್ಳಕೆರೆಯ ತಿಪ್ಪೇಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಅಯೋಧ್ಯೆಯ ಮಂತ್ರಾಕ್ಷತೆ ದುರ್ಗದ ಮನೆ ಮನೆಗೆ | ಗಣ್ಯರ ಪ್ರತಿಕ್ರಿಯೆ ಹೇಗಿತ್ತು.

ಸಮಾಜದ ನಿರ್ದೇಶಕರಾಗಿ ಹಿರಿಯ ನ್ಯಾಯವಾದಿ ಕೆ.ಎನ್.ವಿಶ್ವನಾಥಯ್ಯ, ಸಿದ್ದಾಪುರದ ಎಸ್.ವಿ.ನಾಗರಾಜ್, ಎಸ್.ಷಡಾಕ್ಷರಯ್ಯ, ಡಿ.ಎಸ್. ಮಲ್ಲಿಕಾರ್ಜುನ್, ಪ್ರಕಾಶ್ ಗುತ್ತಿನಾಡು, ಎಸ್.ಪರಮೇಶ್, ಹೊಳಲ್ಕೆರೆಯ ಎಚ್.ಪಿ.ಮುರುಘೇಶ್, ಎಸ್.ವಿ.ಸಿದ್ದೇಶ್, ಶ್ರೀಮತಿ ವೀಣಾ ಸುರೇಶ್‍ಬಾಬು, ಕೆ.ಬಿ.ಬಸವರಾಜಯ್ಯ, ಮಂಜುನಾಥ (ದಾಳಿಂಬೆ), ಡಿ.ವಿ.ಎಸ್. ಪ್ರದೀಪ್, ಶ್ರೀಮತಿ ತ್ರಿವೇಣಿ ಕುಮಾರ್, ಸಾಹಿತಿ ನಿರಂಜನ ದೇವರಮನೆ, ಎಸ್.ವಿ.ಕೊಟ್ರೇಶ್, ಟಿ.ಜಯಪ್ಪ, ಸಿದ್ದಪ್ಪ ಮಲ್ಲಾಪುರ, ಶ್ರೀಮತಿ ಟಿ.ಕೆ.ಲತಾ ಉಮೇಶ್, ಸಿ.ಟಿ. ಜಯಣ್ಣ, ಎಂ.ಯಶವಂತ ನೇಮಕವಾಗಿದ್ದಾರೆ.
ವೀರಶೈವ ಲಿಂಗಾಯತ ಸಮಾಜದ ಮಹಾಪೋಷಕರಾದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಎಲ್ಲರೂ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಕಚೇರಿಯಲ್ಲಿ ಶುಕ್ರವಾರ ನೂತನ ಜವಾಬ್ದಾರಿ ಪದಗ್ರಹಣ ಮಾಡಿದರು.
ಈ ಹಿಂದೆ ಎಲ್.ಬಿ.ರಾಜಶೇಖರಪ್ಪ ಸಮಾಜದ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದರು.
