
CHITRADURGA NEWS | 28 OCTOBER 2025
ಚಿತ್ರದುರ್ಗ: ಆಧುನಿಕ ಭಾರತದಲ್ಲಿ ಶಿಕ್ಷಣ ಆಯ್ಕೆಯಲ್ಲ, ಅವಕಾಶವಾಗಿದೆ. ಇದನ್ನು ಬಳಸಿಕೊಂಡವರಿಗೆ ಮಾತ್ರ ಜ್ಞಾನ ಲಭಿಸುತ್ತದೆ. ಹಿಂದಿನ ಶಿಕ್ಷಣ ವ್ಯವಸ್ಥೆಗಿಂತ ಇಂದಿನ ಶಿಕ್ಷಣ ವ್ಯವಸ್ಥೆ ಕಾಲಕ್ಕೆ ತಕ್ಕಂತೆ ಬದಲಾಗಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಎಸ್.ಆರ್.ನಿರಂಜನ ಹೇಳಿದರು.
ಇದನ್ನೂ ಓದಿ: ನವೆಂಬರ್ 12 ರಿಂದ ಚಿತ್ರದುರ್ಗದಲ್ಲಿ ಸ್ವದೇಶಿ ಮೇಳ | ಪೋಸ್ಟರ್ ಬಿಡುಗಡೆ

ಸರ್ಕಾರಿ ಕಲಾ ಕಾಲೇಜಿನ ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಉನ್ನತ ಶಿಕ್ಷಣದಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತು ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು,
ಅಂದು ಅಭಿವೃದ್ಧಿ ಹೊಂದಿದ ದೇಶಗಳಿಂದ ಭಾರತದಲ್ಲಿ ಶಿಕ್ಷಣ ಪಡೆಯಲು ತಕ್ಷಶಿಲಾ, ನಳಂದಾ ವಿದ್ಯಾಕೇಂದ್ರಗಳಿಗೆ ಬರುತ್ತಿದ್ದರು. ಈ ಶಿಕ್ಷಣ ಕೇಂದ್ರಗಳಲ್ಲಿ ಬಹುಶಿಸ್ತೀಯ ಅಧ್ಯಯನ ನಡೆಯುತ್ತಿದ್ದವು. ಶಿಕ್ಷಣದ ವ್ಯಾಖ್ಯಾನವೇ ಭಿನ್ನವಾಗಿತ್ತು ಎಂದು ತಿಳಿಸಿದರು.
ತಂತ್ರಜ್ಞಾನ ಸದ್ಬಳಕೆ ಮೂಲಕ ಕೌಶಲ ವೃದ್ಧಿಸಿಕೊಳ್ಳಬೇಕು. ಇಲ್ಲವಾದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ನಿಲುಕದ ನಕ್ಷತ್ರವಾಗುತ್ತದೆ. ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಮಹತ್ವದ ಗುರಿ ಇರಬೇಕು. ಶಿಸ್ತು ಮತ್ತು ಉತ್ತಮ ವ್ಯಕ್ತಿತ್ವ ಬಹಳ ಮುಖ್ಯ ಎಂದರು.
ವಿದ್ಯಾರ್ಥಿಗಳ ಯಶಸ್ಸಿಗೆ ಕೌಶಲ ಆಧಾರಿತ ಶಿಕ್ಷಣ ಮತ್ತು ಬಹುಶಿಸ್ತೀಯ ನೆಲೆಯ ಜ್ಞಾನ ಅವಶ್ಯಕತೆ ಇದೆ. ಯಾವ ರೀತಿಯ ಜ್ಞಾನಬೇಕೆಂಬ ಅರಿವು ಮುಖ್ಯ. ಅವಶ್ಯ ಮತ್ತು ಅವಶ್ಯವಿಲ್ಲದ ಜ್ಞಾನ ಯಾವುದು ಎಂಬ ತಿಳವಳಿಕೆ ಮತ್ತು ಸ್ವವಿಮರ್ಶಾ ಪ್ರಜ್ಞೆ ಇರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: BSC ನರ್ಸಿಂಗ್ ಸೀಟುಗಳಿಗೆ ಅರ್ಜಿ ಅಹ್ವಾನ
ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕ್ಷೇತ್ರದ ಎಲ್ಲಾ ವಿಷಯಗಳು ಬಹುಮುಖ್ಯ. ಇವುಗಳ ಅಂತರಶಿಸ್ತೀಯ ಅಧ್ಯಯನದ ಮಹತ್ವ ಅರಿಯಬೇಕು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಕೊರತೆ ಏನು ಎಂಬುದನ್ನು ಅರಿಯಬೇಕು. ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಮೂಲಕ ಕೊರತೆಯನ್ನು ಜಯಿಸಬೇಕು ಎಂದರು.
ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನವೂ ಬದಲಾಗುತ್ತಿದ್ದು, ಸಹಯೋಗ, ಸಹಕಾರದೊಂದಿಗೆ ಸಂಶೋಧನೆಗಳು ಹೆಚ್ಚಬೇಕು. ಕಲಿಕೆಯಲ್ಲಿಯೂ ಬದಲಾವಣೆಯಾಗಬೇಕು. ಹುದ್ದೆಗಳಿಗೆ ಅಗತ್ಯವಾದ ಅಧ್ಯಯನ ನಡೆಸಬೇಕು. ಅಂದಿನ ಶಿಕ್ಷಣದ ವ್ಯಾಖ್ಯಾನವೇ ಭಿನ್ನವಾಗಿದ್ದು, ಯಶಸ್ಸಿಗೆ ಕೌಶಲ ಆಧಾರಿತ ಶಿಕ್ಷಣ ಮುಖ್ಯವಾಗಿದೆ. ನಿರಂತರ ಕಲಿಕೆ ಮೂಲಕ ಪೋಷಕರ ಮತ್ತು ಸಮಾಜದ ಆಶಯ ಸಾಕಾರಗೊಳಿಸಿ ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸೇರಬಯಸುವ ವಿಧ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಆತಂಕದ ವಿಷಯ. ಕೌಶಲ ಆಧಾರಿತ ಶಿಕ್ಷಣ ಕಲಿತು ಬದುಕನ್ನು ಕಟ್ಟಿಕೊಳ್ಳಬೇಕಿದೆ. ಆಗುತ್ತಿರುವ ಬದಲಾವಣೆಗೆ ಅನುಗುಣವಾಗಿ ನಾವುಗಳು ಮುಖಾಮುಖಿ ಆಗಬೇಕು ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ಇದನ್ನೂ ಓದಿ: ನವೆಂಬರ್ 11 ರಂದು ಒನಕೆ ಓಬವ್ವ ಜಯಂತಿ | ADC ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ನಮ್ಮಲ್ಲಿರುವ ಅನುಭವವನ್ನು ಜ್ಞಾನವನ್ನಾಗಿ ಮಾಡಿಕೊಂಡು ನಮ್ಮ ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿಕೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು. ಕೇಳಿದ ಓದಿದ ವಿಷಯಗಳನ್ನು ಪ್ರಶ್ನಿಸುವುದು ಸಹ ಒಂದು ಜ್ಞಾನ ಎಂದರು.
ಐಕ್ಯೂಎಸಿ ಸಂಚಾಲಕಿ ಪ್ರೊ.ಆರ್.ತಾರಿಣಿ ಶುಭದಾಯಿನಿ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಬಿ.ಸುರೇಶ, ಕಾಲೇಜು ಅಧ್ಯಾಪಕರ ಸಂಘದ ಕಾರ್ಯದರ್ಶಿ ಹನುಮಂತಪ್ಪ, ಪತ್ರಾಂಕಿತ ವ್ಯವಸ್ಥಾಪಕ ಮಾರ್ಟಿನ್ ಸ್ಯಾಮುಯಲ್ ಡಬ್ಲ್ಯೂ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
