CHITRADURGA NEWS | 20 MAY 2024
ಚಿತ್ರದುರ್ಗ: ಮೇ.20 ಸೋಮವಾರ ಬೆಳಗ್ಗೆ 10.30ರ ವೇಳೆಗೆ ಮಗನನ್ನು ಕೂರಿಸಿಕೊಂಡು ಬೈಕಿನಲ್ಲಿ ಹೊರಟಿದ್ದ ತಂದೆ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್‍ಗೆ ದಾರಿ ಬಿಡುವಂತೆ ಹಾರನ್ ಮಾಡಿದ್ದಾರೆ.
ಹಾರನ್ ಕೇಳಿದ ಟ್ರ್ಯಾಕ್ಟರ್ ಚಾಲಕ ದಾರಿ ಬಿಟ್ಟಿದ್ದಾನೆ. ಆದರೆ, ಬೈಕ್ ಟ್ರೈಲರ್ ದಾಟಿ ಇಂಜಿನಿ ಬಳಿ ಬರುತ್ತಿದ್ದಂತೆ ಬಲಕ್ಕೆ ಎಳೆದುಕೊಂಡಿದ್ದಾನೆ. ಇದರಿಂದ ಬೈಕಿನಿಲ್ಲಿದ್ದ ತಂದೆ ಮಗ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಟ್ರ್ಯಾಕ್ಟರ್ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಒಂದೇ ವಾರದಲ್ಲಿ 1399 ರೂ. ಇಳಿಕೆ ಕಂಡ ರಾಶಿ ಅಡಿಕೆ ಧಾರಣೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ದೊಡ್ಡಮ್ಮನಘಟ್ಟ ಗ್ರಾಮದ ತಿಪ್ಪೇಸ್ವಾಮಿ ಹಾಗೂ ಅವರ ಪುತ್ರ ಆಕಾಶ್ ಅಪಘಾತದಲ್ಲಿ ಗಾಯಗೊಂಡವರು.
ನಾಲ್ಕು ದಿನಗಳ ಹಿಂದೆ ಸೊಂಡೆಕೊಳದಲ್ಲಿರುವ ತನ್ನ ಅಕ್ಕನ ಮನೆಗೆ ಜಾತ್ರೆಗೆಂದು ತಿಪ್ಪೇಸ್ವಾಮಿ ಬಂದಿದ್ದಾರೆ.
ಇದನ್ನೂ ಓದಿ: ಜಿಲ್ಲೆಯಾದ್ಯಂತ ಉತ್ತಮ ಮಳೆ | ಮನೆಗಳಿಗೆ ಹಾನಿ
ಇಂದು ಕುರುಮರಡಿಕೆರೆ ಗ್ರಾಮದಲ್ಲಿರುವ ತನ್ನ ಮತ್ತೊಬ್ಬ ಅಕ್ಕನ ಮನೆಗೆ ಹೋಗಲು ಕಕ್ಕೆಹರವು ಮೂಲಕ ತಂದೆ ಮಗ ಹೋಗುತ್ತಿದ್ದಾಗ ಹೊಸೂರು ಬಳ ಅಪಘಾತ ನಡೆದಿದೆ.
ಅಪಘಾತದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ತಿಪ್ಪೇಸ್ವಾಮಿ ಅವರ ಕೈ, ಕಾಲು, ಸೊಂಟಕ್ಕೆ ಪೆಟ್ಟು ಬಿದ್ದಿದೆ. ಪುತ್ರ ಆಕಾಶನಿಗೂ ಎಡ ಕಣ್ಣು, ಎಡಭುಜ, ಕೈ, ಕಾಲು, ಬೆನ್ನಿಗೆ ಪೆಟ್ಟು ಬಿದ್ದು ಗಾಯಗಳಾಗಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇದನ್ನೂ ಓದಿ: ಹೋಟೆಲಿಗೆ ನುಗ್ಗಿದ ನೀರು | ಭರ್ಜರಿ ಮಳೆಗೆ ಕೆರೆಯಂತಾದ ಜಮೀನು
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
