ಮುಖ್ಯ ಸುದ್ದಿ
ಹೋಟೆಲಿಗೆ ನುಗ್ಗಿದ ನೀರು | ಭರ್ಜರಿ ಮಳೆಗೆ ಕೆರೆಯಂತಾದ ಜಮೀನು

CHITRADURGA NEWS | 20 MAY 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಆರ್ಭಟಿಸುತ್ತಿರುವ ಮಳೆರಾಯ, ಬಿಸಿಲ ಬೇಗೆಯಿಂದ ಬಾಯಿ ಬಿಟ್ಟಿದ್ದ ಭೂಮಿಗೆ ತಂಪೆರದಿದ್ದಾನೆ.
ಸಮೃದ್ಧ ಎನ್ನುವಷ್ಟು ಮಳೆಯಾಗಿದ್ದು, ಬರದ ದವಡೆಗೆ ಸಿಲುಕಿ ತತ್ತರಿಸಿದ್ದ ರೈತರು ನಿಟ್ಟುಸಿರುವ ಬಿಟ್ಟಿದ್ದಾರೆ.

ಇದನ್ನೂ ಓದಿ: ವಿವಿಸಾಗರ ತಲುಪಿದ ವೇದಾವತಿ | ಒಂದೇ ದಿನಕ್ಕೆ ಡ್ಯಾಂ ಸೇರಿದ ನೀರೆಷ್ಟು ಗೊತ್ತಾ
ಭಾನುವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಭರ್ಜರಿ ಮಳೆಯಾಗಿದೆ. ಸಂಜೆ ವೇಳೆಗೆ ಸುಮಾರು 20 ನಿಮಿಷ ಚಿತ್ರದುರ್ಗ ನಗರದಲ್ಲೂ ಬಿರುಸಿನ ಮಳೆ ಸುರಿಯಿತು.
ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಭಾಗದ ಬೆನಕನಹಳ್ಳಿಯಲ್ಲಿ ಮಳೆಯ ಆರ್ಭಟವನ್ನು ರೈತರು ವೀಡಿಯೋ ಚಿತ್ರಿಕರಿಸಿ ಚಿತ್ರದುರ್ಗ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.
ರೈತರೊಬ್ಬರ ಜಮೀನಿನಲ್ಲಿ ಬೋರ್ಗರೆದು ಹರಿಯುವ ನೀರು ಮುಂದೆ ಅಡಿಕೆ ಗಿಡಗಳಲ್ಲಿ ಕೆರೆಯಂತೆ ಭಾಸವಾಗುವ ದೃಶ್ಯ ಅದ್ಬುತವಾಗಿದೆ.

ಜಾನುಕೊಂಡದಲ್ಲಿ ಹೋಟೆಲಿಗೆ ಬಂದ ನೀರು
ಜಾನುಕೊಂಡದಲ್ಲಿ ಹೋಟೆಲಿಗೆ ಬಂದ ನೀರು:
ಜಾನುಕೊಂಡ ಗೇಟ್‍ನಲಿ ಹೋಟೆಲೊಂದರ ಒಳಗೆ ನುಗ್ಗಿರುವ ಮಳೆ ನೀರು ಅವಾಂತರವೇ ಸೃಷ್ಟಿಯಾಗುವಂತೆ ಮಾಡಿತ್ತು.
ಇದನ್ನೂ ಓದಿ: ರಾತ್ರಿ ಮಳೆಗೆ ಕೊಚ್ಚಿ ಹೋದ ರಸ್ತೆ | ಒಂದೇ ಮಳೆಗೆ ತುಂಬಿ ಕೋಡಿ ಹರಿದ ಕೆರೆ
ತಗ್ಗು ಪ್ರದೇಶದಲ್ಲಿ ಹೋಟೆಲ್ ಇರುವುದರಿಂದ ಮಳೆ ನೀರು ಆ ಮಾರ್ಗದಲ್ಲಿ ಹರಿಯುವಾಗ ಹೋಟೆಲ್ ಒಳ ಭಾಗಕ್ಕೆ ನುಗ್ಗಿ ಮುಂದೆ ಸಾಗುವ ವೀಡಿಡೋ ವೈರಲ್ ಆಗಿದೆ.
