ಮುಖ್ಯ ಸುದ್ದಿ
ಸೇವೆ ಪ್ರಾಮಾಣಿಕವಾಗಿರಲಿ | ಡಾ.ಬಸವಕುಮಾರ ಸ್ವಾಮೀಜಿ

CHITRADURGA NEWS | 20 MAY 2024
ಚಿತ್ರದುರ್ಗ: ರೋಗಿ ಮತ್ತು ವೈದ್ಯರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವವರು ದಾದಿಯರು. ಕಲಿತ ವಿದ್ಯೆಯನ್ನು ಸಂತೋಷದಿಂದ ಸೇವೆ ಮಾಡುವ ಮೂಲಕ ಆನಂದಿಸಬೇಕು ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ಎಸ್‌ಜೆಎಂ ನರ್ಸಿಂಗ್ ಕಾಲೇಜು ವತಿಯಿಂದ ಬಿಚ್ಚುಗತ್ತಿ ಭರಮಣ್ಣನಾಯಕ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಹಾಗು ಪ್ರಥಮವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಲ್ಲಿ ದಾದಿಯರದು ಬಹುಮುಖ್ಯ ಪಾತ್ರವಿದೆ. ಕಾಯಿಲೆಯಿಂದ ಬಳಲುವ ಇನ್ನೊಬ್ಬರ ಸೇವೆ ಮಾಡುವ ಅವಕಾಶ ನರ್ಸ್‌ಗಳಿಗೆ ಮಾತ್ರ ಸಿಗುತ್ತದೆ’ ಎಂದರು.

ಕ್ಲಿಕ್ ಮಾಡಿ ಓದಿ: ವಿವಿ ಸಾಗರ ತಲುಪಿದ ವೇದಾವತಿ | ಒಂದೇ ದಿನಕ್ಕೆ ಡ್ಯಾಂ ಸೇರಿದ ನೀರೆಷ್ಟು ಗೊತ್ತಾ
‘ಸರ್ವಸಂಗ ಪರಿತ್ಯಾಗಿ ಮಾಡಲಾರದ ಸೇವೆಯನ್ನು ದಾದಿಯರು ಮಾಡುತ್ತಾರೆ. ನರ್ಸಿಂಗ್ ಶಿಕ್ಷಣ ಸೇವೆಯನ್ನು ಕಲಿಸುತ್ತದೆ. ನೈಟಿಂಗೆಲ್, ಮದರ್ ಥೆರೆಸಾ ದೊಡ್ಡವರಾದದ್ದು ಅವರ ಮಾಡಿದ ಸೇವೆಯಿಂದ. ಮನುಷ್ಯನನ್ನು ಮನುಷ್ಯನನ್ನಾಗಿ ಪ್ರೀತಿಸಬೇಕು. ಆಯುಷ್ಯ ಚಿಕ್ಕದು ಆದರೆ ಸೇವೆ ಮುಖ್ಯವಾದದ್ದು’ ಎಂದು ತಿಳಿಸಿದರು.
‘ಅಧ್ಯಯನ ಮುಗಿದ ಮೇಲೆ ಆಸ್ಪತ್ರೆಗಳಿಗೆ ಹೋಗುತ್ತೀರಿ. ಅಲ್ಲಿನ ಸೇವೆ ಪ್ರಾಮಾಣಿಕವಾಗಿರಲಿ. ಉತ್ತಮ ಸೇವೆಯಿಂದ ಆ ಕ್ಷೇತ್ರದಲ್ಲಿ ಬೆಳೆಯಲು ಅವಕಾಶಗಳಿರುತ್ತವೆ. ನೀವು ಇಲ್ಲಿ ಪಡೆದಿರುವ ಜ್ಞಾನ ಮತ್ತು ನಿಮ್ಮಲ್ಲಿರುವ ಪ್ರತಿಭೆಯನ್ನು ವ್ಯಯ ಮಾಡದೆ ಒಳ್ಳೆಯ ಸಾಧನೆಗೆ ಬಳಸಿಕೊಳ್ಳಿರಿ’ ಎಂದರು.
ಕ್ಲಿಕ್ ಮಾಡಿ ಓದಿ: ತೆರೆದಿದೆ ಉದ್ಯೋಗಾವಕಾಶದ ಬಾಗಿಲು | 22ರಂದು ನೇರ ನೇಮಕಾತಿ ಸಂದರ್ಶನ
ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಗಳಲ್ಲಿ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ನಾಗಲಕ್ಷ್ಮಿ 7ನೇ ರ‍್ಯಾಂಕ್, ಸೈಕಾಲಜಿ ವಿಷಯದಲ್ಲಿ ಅಫಿಯಾ ಜೋಶಿ 10ನೇ ರ‍್ಯಾಂಕ್ ಮತ್ತು ಸಿಇಟಿ ವಿಷಯದಲ್ಲಿ ಎಸ್.ಸುಮಯಬಾನು10ನೇ ರ‍್ಯಾಂಕ್‌ಗಳಿಸಿದ ಅವರನ್ನು ಗೌರವಿಸಲಾಯಿತು.
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ನಾರಾಯಣಮೂರ್ತಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ, ಸಹಪ್ರಾಧ್ಯಾಪಕಿ ಕೋಮಲ, ಮೌನೇಶ್, ಭರತ್, ಶೃತಿ ಇದ್ದರು.
