ಮುಖ್ಯ ಸುದ್ದಿ
ಡಿ.ಟಿ.ಶ್ರೀನಿವಾಸ್ ಪರವಾಗಿ ಸಚಿವ ರಾಮಲಿಂಗಾ ರೆಡ್ಡಿ ಮತ ಬೇಟೆ

CHITRADURGA NEWS | 20 MAY 2024
ಚಿತ್ರದುರ್ಗ: ಜೂನ್ 3 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ನಗರದ ಎಸ್ಆರ್ ಎಸ್ ಕಾಲೇಜಿನಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಪರ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮತಯಾಚನೆ ಮಾಡಿದರು.
ಇದನ್ನೂ ಓದಿ: ಹೋಟೆಲಿಗೆ ನುಗ್ಗಿದ ನೀರು | ಭರ್ಜರಿ ಮಳೆಗೆ ಕೆರೆಯಂತಾದ ಜಮೀನು
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಅವರಿಗೆ ಮತ ಹಾಕಿ ಎಂದು ಮನವಿ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಒಂದು ವರ್ಷ ಆಗಿದ್ದು, ನುಡಿದಂತೆ ನಡೆದುಕೊಂಡಿದೆ, ವಿಶೇಷವಾಗಿ ಶಿಕ್ಷಕರ ಸಂಘಗಳಿಗೆ ಕಾಂಗ್ರೆಸ್ ಸರ್ಕಾರ ಇದ್ದಾಗ ಹೆಚ್ಚಾಗಿ ಅನುಕೂಲಗಳನ್ನು ಮಾಡಿದೆ. ವಿದ್ಯಾ ಕ್ಷೇತ್ರಕ್ಕೂ ಕೂಡ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆಯನ್ನು ನೀಡಿದೆ.
ಶ್ರೀನಿವಾಸ್ ಅವರಿಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಹರಿವಿದೆ, ಆದ್ದರಿಂದ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಂತಿದ್ದಾರೆ ಅವರಿಗೆ ಬೆಂಬಲ ನೀಡಿ ಎಂದು ಹೇಳಿದ್ದೇನೆ ಎಂದರು.
ಇದನ್ನೂ ಓದಿ: ವಿವಿಸಾಗರ ತಲುಪಿದ ವೇದಾವತಿ | ಒಂದೇ ದಿನಕ್ಕೆ ಡ್ಯಾಂ ಸೇರಿದ ನೀರೆಷ್ಟು ಗೊತ್ತಾ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ, ಬಿಜೆಪಿ ನಾಯಕರು ಸುಮ್ನೆ ಆ ರೀತಿ ಹೇಳುತ್ತಿದ್ದಾರೆ. ಕಳೆದ ವರ್ಷ ಅವರ ಸರ್ಕಾರ ಇದ್ದಾಗ 1350ಕ್ಕೂ ಹೆಚ್ಚು ಕೊಲೆಗಳು ಆಗಿವೆ, ಮೊನ್ನೆ ನಾಲ್ಕು ತಿಂಗಳಲ್ಲಿ 400 ಕೊಲೆ ಆಗಿವೆ.
ಬಿಜೆಪಿಯವರು ಲೆಕ್ಕ ತಿಳಿಯದೆ ಸುಮ್ನೆ ಮಾತಾಡ್ತಾರೆ, ಯಾರ ಅವಧಿಯಲ್ಲಿ ಕೊಲೆಗಳು ಜಾಸ್ತಿ ಆಗಿವೆ ಅಂಕಿ ಅಂಶ ನೋಡ್ಬೇಕು, ಅಂಕಿ ಅಂಶ ನೋಡದೆ ಸುಮ್ನೆ ಮಾತಾಡ್ತಾರೆ ಎಂದು ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ಪ್ರಾರಂಭೋತ್ಸವ | ಉತ್ಸಾಹ ಇಮ್ಮಡಿಗೊಳಿಸಿದ ವೀರಗಾಸೆ ನೃತ್ಯ
ರೇವಣ್ಣ, ಶಿವರಾಮೇಗೌಡ, ದೇವಾರಾಜೇಗೌಡ ಅವರ ವೈಯಕ್ತಿಕ ಕಿತ್ತಾಟ, ದೇವಾರಜೆಗೌಡ ವಕೀಲರು, ಬಿಜೆಪಿ ಮುಖಂಡರು ಆಗಿದ್ದಾರೆ, ನಾನು ಕೂಡ ಆ ವಿಡಿಯೋಗಳನ್ನು ನೋಡಿದ್ದೇನೆ, ಅದ್ರಲ್ಲಿ ದೇವೇಗೌಡ್ರು ಕುಟುಂಬದಿಂದ ತೊಂದರೆ ಆಗಿದೆ ಅಂತ ಹೇಳಿಕೊಂಡಿದ್ದಾರೆ. ಅವರ ವೈಯಕ್ತಿಕ ಜಗಳವನ್ನು ರಾಜ್ಯ ಮಟ್ಟಕ್ಕೆ ತಂದಿದ್ದಾರೆ.
ಹೊಳೆನರಸೀಪುರದಲ್ಲಿ ಇರಬೇಕಿದ್ದ ಜಗಳ ರಾಜ್ಯ ಮಟ್ಟಕ್ಕೆ ಬಂದಿದೆ, ಸರ್ಕಾರಕ್ಕೆ, ಪೆನ್ ಡ್ರೈವ್ ಗೂ, ಡಿಕೆಶಿ ಯಾವ ಸಂಬಂಧ ಇಲ್ಲ, ದೇವೇರಾಜೇಗೌಡ ರಾಜಕೀಯ ಪಕ್ಷದ ಸದಸ್ಯ, ಬಿಜೆಪಿ ಪಕ್ಷದಿಂದ ನಿಂತು ಒಮ್ಮೆ ಸೋತಿದ್ದಾರೆ, ಅದಕ್ಕೆ ಬಿಜೆಪಿಯವರು ಏನು ಹೇಳ್ತಾರೆ ಅದನ್ನು ಇವ್ರು ಹೇಳ್ತಾರೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: ಮಾತು ತಪ್ಪದ ಮುಖ್ಯಮಂತ್ರಿ ಸಿದ್ದರಾಮಯ್ಯ | ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್
ಚುನಾವಣೆ ಬಳಿಕ ಸರ್ಕಾರ ಪತನ ಆಗೋದಿಲ್ಲ, ಅವ್ರ ಪಾತ್ರ ಏನು ಇರೋದಿಲ್ಲ, ಸರ್ಕಾರ ಯಾಕೆ ಪತನ ಆಗುತ್ತೆ ಹೇಳಲಿ, ಅವ್ರು ಕೇವಲ ಸಿಂಗಲ್ ಡಿಜಿಟ್ ನಲ್ಲಿ ಇದ್ದಾರೆ, ಜೆಡಿಎಸ್, ಬಿಜೆಪಿ ಎಲ್ಲಾ ಸೇರಿ ಸಿಂಗಲ್ ಡಿಜಿಟ್ ಇದೆ.
ಚುನಾವಣಾ ಬಳಿಕ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾಹಿತಿ ಇಲ್ಲ, ಇತ್ತ ಸಿಎಂ ಬಂದಾಗ ನೀವೇ ಕೇಳ್ಬೇಕು, ಅದೆಲ್ಲ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ, ಹೈಕಮಾಂಡ್ ನಾಯಕರು ಏನು ತೀರ್ಮಾನ ಮಾಡ್ತಾರೆ ನೋಡೋಣ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: ವೀರಭದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ದಿನಗಣನೆ | ಕಳೆಗಟ್ಟಿದ ಸಂಭ್ರಮ
ಈ ಸಂದರ್ಭದಲ್ಲಿ ಮಾಜಿ ಮಂತ್ರಿ ಹೆಚ್. ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ಪೀರ್, ನಾಗರಾಜ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.
