
CHITRADURGA NEWS | 27 JULY 2025
ಚಿತ್ರದುರ್ಗ: ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ನೌಕರರ ಸಮಾವೇಶ, ನಿವೃತ್ತ ನೌಕರರಿಗೆ, ಸಾಧಕರಿಗೆ ಸನ್ಮಾನ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಕೇಂದ್ರದಿಂದ ಅಗತ್ಯ ಯೂರಿಯಾ ಗೊಬ್ಬರ ಪೂರೈಕೆ | ರಾಜ್ಯ ಸರ್ಕಾರ ಅಭಾವ ಸೃಷ್ಟಿಸಿದೆ | MLC ಕೆ.ಎಸ್. ನವೀನ್ ಆರೋಪ

ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಇಂದು ಸಮಾಜದ ವತಿಯಿಂದ ಸನ್ಮಾನಕ್ಕೆ ಒಳಗಾದ ಮಕ್ಕಳು ಮುಂದಿನ ದಿನಮಾನದಲ್ಲಿ ಉತ್ತಮ ಸ್ಥಾನದಲ್ಲಿದ್ದಾಗ ಸಮಾಜದ ಋಣ ತೀರಿಸುವಂತ ಕಾರ್ಯವನ್ನು ಮಾಡಬೇಕಿದೆ, ನೀವು ಸಹಾ ಬೇರೆ ಮಕ್ಕಳಿಗೆ ಶಿಕ್ಷಣದಲ್ಲಿ ನೆರವಾಗುವಂತೆ ತಿಳಿಸಿದರು.
ಚಿತ್ರದುರ್ಗದಲ್ಲಿ ಎರಡು ಪ್ರತಿಭಾನ್ವಿತವಾದ ಮಠಗಳು ಇವೆ ಇವುಗಳು ಶಿಕ್ಷಣ ದಾಸೋಹದಲ್ಲಿ ಉತ್ತಮವಾದ ಕಾರ್ಯವನ್ನು ಮಾಡುತ್ತಿವೆ. ಇದರಲ್ಲಿ ಅಭ್ಯಾಸ ಮಾಡಿದವರು ಈಗ ಉನ್ನತವಾದ ಹುದ್ದೆಯಲ್ಲಿ ಇದ್ದು ಉತ್ತಮ ವ್ಯಕ್ತಿಗಳಾಗಿದ್ದಾರೆ. ಇದ್ದಲ್ಲದೆ ರಾಜಕೀಯವಾಗಿಯೂ ಸಹಾ ಚಿತ್ರದುರ್ಗ ತನ್ನದೆ ಆದ ಇತಿಹಾಸ ಹೊಂದಿದ್ದಾರೆ. ಭ್ರಷ್ಠಾಚಾರ ರಹಿತವಾದ ಅಧಿಕಾರ ನಡೆಸಿದ ಎಸ್. ನಿಜಲಿಂಗಪ್ಪ ಹೆಸರಾಗಿದ್ದಾರೆ. ತಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಆಧಿಕಾರ ನಡೆಸಿದ ಕೀರ್ತಿ ಅವರಿಗೆ ಇದೆ ಎಂದರು.
ಮಕ್ಕಳ ಪ್ರತಿಭೆ ಗುರುತಿಸಿ ಸನ್ಮಾನ ಹಾಗೂ ನಿವೃತ್ತ ನೌಕರರಿಗೆ ಗೌರವ ಮತ್ತು ಸಾಧಕರನ್ನು ಗುರುತಿಸಿ ಪ್ರಶಂಸಿಸುವುದು ಉತ್ತಮವಾದ ಕೆಲಸವಾಗಿದೆ. ಇದರಲ್ಲಿ ಒಂದೆಡೆ ಬೆಳೆಯುತ್ತಿರುವ ಸಸಿಗಳಿಗೆ ಪ್ರೋತ್ಸಾಹ ನೀಡಿ ನೀರನ್ನು ಎರೆಯುವುದು, ಮತ್ತೊಂದೆಡೆ, ನಿವೃತ್ತ ನೌಕರರಿಗೆ ಸಮಾಜದ ಜೋತೆಯಲ್ಲಿ ಇದ್ದು ಅದಕ್ಕೆ ಮಾರ್ಗದರ್ಶನ ನೀಡುವಂತೆ ಸಂದೇಶವನ್ನು ನೀಡಲಾಗಿದೆ ಎಂದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | SIT ತಂಡ ರಚನೆಗೆ ಸ್ವಾಗತಾರ್ಹ | ಕೆ.ಎಸ್. ನವೀನ್
ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಪಿ.ಎಂ.ಜಿ.ರಾಜೇಶ್ ಪ್ರಸ್ತಾವಿಕವಾಗಿ ಮಾತನಾಡಿ, ಈ ಹಿಂದೆಯೂ ಸಹಾ ನಮ್ಮ ಸಂಘದಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ನಡೆಸಲಾಗುತ್ತಿತ್ತು, ಕರೋನ ಬಂದ ಹಿನ್ನಲೆಯಲ್ಲಿ ಅದನ್ನು ನಿಲ್ಲಿಸಲಾಗಿತ್ತು, ಆದರೆ ಈಗ ನಮ್ಮ ಸಂಘ ಬಂದ ಮೇಲೆ ಪುನಃ ಪ್ರಾರಂಭ ಮಾಡಲಾಗಿದೆ ಎಂದರು.
ಹಿರಿಯೂರಿನ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೆಸ್ವಾಮಿ ಉಪನ್ಯಾಸ ನೀಡಿದರು.
ಈ ವೇಳೆ ಜಿಲ್ಲೆಯೊಳಗಿನ ಸಮುದಾಯದ ವಿಶೇಷ ಸಾಧನೆಗೈದ ಜನಸಾಧಕರನ್ನು ಗೌರವಿಸಲಾಯಿತು.
ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ್ ಸ್ವಾಮಿಜಿ, ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮಿಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ.ವಿರೇಶ್ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: ಯೂರಿಯಾಗೆ ಮುಗಿಬಿದ್ದ ಸಾವಿರಾರು ರೈತರು | ಎಪಿಎಂಸಿ ಬಳಿ ದಿನವಿಡೀ ಸರತಿ ಸಾಲು | ಸರ್ಕಾರದ ಬೇಜವಾಬ್ದಾರಿಗೆ ಆಕ್ರೋಶ
ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಜಿಲ್ಲಾ ಕೆ.ಡಿ.ಪಿ ಸದಸ್ಯ ಕೆ.ಸಿ.ನಾಗರಾಜ್, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವಿರೇಂದ್ರ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಉದ್ಯಮಿಗಳಾದ ಅನಿತ್ ಕುಮಾರ್, ಕೆ.ವಿ.ಎಲ್ ಅಧ್ಯಕ್ಷ ಸೋಮಶೇಖರಯ್ಯ, ತಾಲ್ಲೂಕು ಕೆಡಿಪಿ ಸದಸ್ಯ ಸಿ.ಬಿ.ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಎಂ.ದ್ಯಾಮಣ್ಣ ಕೊಗುಂಡೆ, ಕೆಇಬಿ ಷಣ್ಮುಖಪ್ಪ, ನಾಗರಾಜಯ್ಯ, ಪ್ರಸನ್ನ ಕುಮಾರ್, ಮಲ್ಲಿಕಾರ್ಜನಯ್ಯ, ಗುರುಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
