
CHITRADURGA NEWS | 27 JULY 2025
ಚಿತ್ರದುರ್ಗ: ಧರ್ಮಸ್ಥಳದಲ್ಲಿ ನಡೆದಿರುವಂತಹ ಕೊಲೆಗಳಿಗೆ ಸಂಬಂಧಪಟ್ಟಂತೆ ಎಸ್‍ಐಟಿ ಸಮಿತಿ ರಚಿಸಿರುವುದು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.
ಇದನ್ನೂ ಓದಿ: ಕೇಂದ್ರದಿಂದ ಅಗತ್ಯ ಯೂರಿಯಾ ಗೊಬ್ಬರ ಪೂರೈಕೆ | ರಾಜ್ಯ ಸರ್ಕಾರ ಅಭಾವ ಸೃಷ್ಟಿಸಿದೆ | MLC ಕೆ.ಎಸ್. ನವೀನ್ ಆರೋಪ

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತನಿಖೆ ನೆಪದಲ್ಲಿ ಧರ್ಮಸ್ಥಳದ ದೇವಸ್ಥಾನಕ್ಕಾಗಲೀ, ಅದರ ಮುಖಂಡರಿಗಾಗಲೀ ಅಪಮಾನ ಮಾಡುವುದು ಸರಿಯಲ್ಲ ಎಂದರು.
ಧರ್ಮಸ್ಥಳ ಧಾರ್ಮಿಕ ಸಂಸ್ಥೆ. ರಾಜ್ಯದಲ್ಲಿ ಈಗಾಗಲೇ ಹಲವಾರು ವಿವಿಧ ಉತ್ತಮ ಕಾರ್ಯಗಳನ್ನು ಮಾಡಿದೆ, ಹಲವಾರು ಬಡಜನತೆಗೆ ನೆರವಾಗಿದೆ. ಅಲ್ಲಿ ನಡೆದಿರುವಂತಹ ಕೊಲೆಯಾಗಲೀ, ಆತ್ಮಹತ್ಯೆಯಂತಹ ಪ್ರಕರಣಗಳ ಬಗ್ಗೆ ಪೂರ್ಣ ಪ್ರಮಾಣದ ತನಿಖೆಯಾಗಲಿ. ಆದರೆ ಇದನ್ನ ನೆಪವಾಗಿಟ್ಟುಕೊಂಡು ಧರ್ಮಸ್ಥಳದ ದೇವಸ್ಥಾನದ ಮೇಲೆ ವಿನಹ ಕಾರಣ ಅಪವಾದ ಮಾಡುವುದು, ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಯೂರಿಯಾಗೆ ಮುಗಿಬಿದ್ದ ಸಾವಿರಾರು ರೈತರು | ಎಪಿಎಂಸಿ ಬಳಿ ದಿನವಿಡೀ ಸರತಿ ಸಾಲು | ಸರ್ಕಾರದ ಬೇಜವಾಬ್ದಾರಿಗೆ ಆಕ್ರೋಶ
ತನಿಖೆ ನ್ಯಾಯಯುತವಾಗಿ ನಡೆಯಲಿ, ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಲಿ. ಇದಕ್ಕೆ ನಮ್ಮ ಪೂರ್ಣ ಬೆಂಬಲವಿದೆ ಎಂದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
