CHITRADURGA NEWS | 27 JULY 2025
ಚಿತ್ರದುರ್ಗ: ಮೆಕ್ಕೆಜೋಳ ಬಿತ್ತನೆ ಮಾಡಿರುವ ರೈತರಿಗೆ ಈಗ ತುರ್ತಾಗಿ ಯೂರಿಯಾ ಗೊಬ್ಬರ ಬೇಕಾಗಿದೆ. ಆದರೆ, ಸಕಾಲಕ್ಕೆ ರೈತರಿಗೆ ಅಗತ್ಯವಿರುವಷ್ಟು ಗೊಬ್ಬರ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಚಿತ್ರದುರ್ಗದ ಎಪಿಎಂಸಿ ರಸ್ತೆಯಲ್ಲಿರುವ ಕೃಷಿ ಇಲಾಖೆ ಪಕ್ಕದ ವ್ಯವಸಾಯೋತ್ಪನ್ನ ಮಾರಾಟ ಮಳಿಗೆಯಿಂದ ಎಸ್‌ಬಿಐ ಬ್ಯಾಂಕ್‌ವರೆಗೆ ಮಹಿಳೆಯರು, ಪುರುಷರು ಎನ್ನದೆ ಎಲ್ಲ ರೈತರು ಕೆಲಸ ಬಿಟ್ಟು, ಚಳಿ, ಗಾಳಿ, ಮಳೆಯಲ್ಲಿ ಇಡೀ ದಿನ ಎರಡು ಚೀಲ ಗೊಬ್ಬರಕ್ಕಾಗಿ ಕಾದು ನಿಂತಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಯೂರಿಯಾಗಾಗಿ ಸಾವಿರಾರು ರೈತರು ಎಪಿಎಂಸಿ ಬಳಿ ಜಮಾಯಿಸಿದ್ದರಿಂದ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿದ್ದು, ಮೆಕ್ಕೆಜೋಳ ಸೇರಿದಂತೆ ಪ್ರಮುಖ ಬೆಳೆಗಳಿಗೆ ಈಗ ಗೊಬ್ಬರದ ಅಗತ್ಯವಿದೆ. ಆದರೆ, ಕೃಷಿ ಇಲಾಖೆಯಿಂದ ಪೂರೈಕೆ ಮಾಡುತ್ತಿರುವ ಗೊಬ್ಬರದ ಕೊರತೆ ಉಂಟಾಗಿದ್ದು, ಒಬ್ಬ ರೈತರಿಗೆ ಎರಡು ಚೀಲ ಮಾತ್ರ ವಿತರಣೆ ಮಾಡಲಾಗುತ್ತಿದೆ.
ಜಿಲ್ಲೆಯ ರೈತರು ಯೂರಿಯಾ ಗೊಬ್ಬರಕ್ಕಾಗಿ ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದ್ದು, ನಗರದ ಎಪಿಎಂಸಿ ಮಾರುಕಟ್ಟೆ ಬಳಿಯಿರುವ ಗೋದಾಮಿನ ಬಳಿ ಶನಿವಾರ ಬೆಳಗ್ಗೆ ಸಾವಿರಾರು ರೈತರು ಜಮಾಯಿಸಿದ್ದರು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಡಿಕ್ಕಿ | ಕರಡಿ ಸಾವು
ಒಬ್ಬ ರೈತರಿಗೆ ಎರಡು ಚೀಲ ಮಾತ್ರ ಗೊಬ್ಬರ ನಿಗಧಿ ಮಾಡಿದ್ದು, ಎಲ್ಲಾ ಕಡೆಗಳಲ್ಲಿ ಯೂರಿಯಾ ಸಿಗದೇ, ಚಿತ್ರದುರ್ಗಕ್ಕೆ ಬಂದು ಖರೀಧಿಸಿಕೊಂಡು ಹೋಗುವಂತೆ ಮಾಡಿರುವ ವ್ಯವಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಹೇಳಿಕೆ:
ರೈತ ಸಂಘದ ಜಿಲ್ಲಾಧ್ಯಕ್ಷ ಡಿ..ಎಸ್.ಹಳ್ಳಿ ಮಲ್ಲಿಕಾರ್ಜುನ್ ಈ ವೇಳೆ ಮಾತನಾಡಿ, ಮುಂಗಾರು ಪೂರ್ವದಲ್ಲೇ ಅಗತ್ಯ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಿಕೊಳ್ಳುವಂರೆ ಜಿಲ್ಲಾಡಳಿತ, ಸಂಬಂಧ ಪಟ್ಟ ಇಲಾಖೆಗೆ ಮನವಿ ಮಾಡಿದ್ದರೂ, ಅಧಿಕಾರಿಗಳ ಬೇಜವಾಬ್ದಾರಿ ಕಾರಣಕ್ಕೆ ಇಂದು ರೈತರು ಬೀದಿಯಲ್ಲಿ ನಿಲ್ಲುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಡಿಕೆ ರೇಟ್ | ಜುಲೈ 25 |ಯಾವ ಮಾರುಕಟ್ಟೆಯಲ್ಲಿ ಎಷ್ಟು
ಒಬ್ಬ ರೈತನಿಗೆ ಕೇವಲ ಎರಡು ಚೀಲ ಗೊಬ್ಬರ ನೀಡುತ್ತಿರುವುದು ಸರಿಯಲ್ಲ. ಇದಕ್ಕಾಗಿ ಮನೆ ಬಿಟ್ಟು, ಊಟ ನೀರು ಇಲ್ಲದೆ ದಿನವಿಡೀ ರಸ್ತೆಯಲ್ಲಿ ನಿಲ್ಲುವಂತಾಗಿರುವುದು ಜಿಲ್ಲಾಡಳಿತ, ರಾಜ್ಯ ಸರ್ಕಾರಕ್ಕೆ ನಾಚಿಕೆಗೇಡು. ತಕ್ಷಣ ಸಮರ್ಪಕ ಗೊಬ್ಬರ ಒದಗಿಸಬೇಕು. ಇಲ್ಲದಿದ್ದರೆ ರೈತರು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ನಿಜಲಿಂಗಪ್ಪ ಹೇಳಿಕೆ:
ಜಿಲ್ಲೆಯಲ್ಲಿ ಈಗ ಮಳೆಯಾಗುತ್ತಿದ್ದು, ರೈತರು ತಕ್ಷಣಕ್ಕೆ ಗೊಬ್ಬರ ಬೇಕಾಗಿದೆ. ಬರಕ್ಕೆ ತುತ್ತಾದ ರೈತರು ದನ ಕರು ಮಾರಾಟ ಮಾಡಿಕೊಂಡು, ಸರ್ಕಾರಿ ಗೊಬ್ಬರ ನಂಬಿಕೊಂಡಿದ್ದಾರೆ. ಈಗ ಯೂರಿಯಾ ಕೊರತೆ ಉಂಟಾಗಿದೆ. ಮುಂಜಾಗ್ರತೆಯಿಂದ ಗೊಬ್ಬರ ತರಿಸಬೇಕಾದ ಇಲಾಖೆ ನಿರ್ಲಕ್ಷಿಸಿದೆ. ರೈತರು ಕೂಲಿ, ಕೆಲಸ ಬಿಟ್ಟು ಬೀದಿಗಳಲ್ಲಿ ಬಂದು ನಿಲ್ಲುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾಡಳಿತ ತಕ್ಷಣ ಗಮನಹರಿಸಿ ಎಲ್ಲ ಸೊಸೈಟಿಗಳಿಗೆ ಗೊಬ್ಬರ ವಿತರಿಸಿ ನಿಗಧಿತ ದರದಲ್ಲೇ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಜು.28ರಂದು ನಗರಸಭೆಯಲ್ಲಿ ತೆರವಾದ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ
ಜಿಲ್ಲೆಯ ಶಾಸಕರು, ಸಂಸದರು ಕೂಡಾ ರೈತರ ವಿಚಾರದಲ್ಲಿ ಬೇಜವಾಬ್ದಾರಿ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೂರಿಯಾ ಬಂದಂತೆ ನಿರಂತರವಾಗಿ ವಿತರಣೆ ಮಾಡುತ್ತಿದ್ದೇವೆ. ಶನಿವಾರ ಜಿಲ್ಲೆಗೆ 440 ಟನ್ ಯೂರಿಯಾ ಬಂದಿದ್ದು, ಜಿಲ್ಲೆಯ ವಿವಿಧೆಡೆಗಳಲ್ಲಿ ವಿತರಣೆ ಮಾಡಲಾಗಿದೆ. ಮೇಲುಗೊಬ್ಬರವಾಗಿ ಬಳಕೆ ಮಾಡುತ್ತಿರುವುದರಿಂದ ಈಗ ಒಬ್ಬ ರೈತನಿಗೆ ಎರಡು ಚೀಲ ನೀಡಲಾಗಿದೆ. ಇಂದು ಅಕ್ಕಪಕ್ಕದ ಜಿಲ್ಲೆಯ ರೈತರು ಬಂದಿದ್ದರಿಂದ ಹೆಚ್ಚು ದಟ್ಟಣೆ ಕಂಡು ಬಂದಿದೆ. ಆಧಾರ್ ಕಾರ್ಡ್ ಪರಿಶೀಲಿಸಿ ವಿತರಿಸಿದ್ದೇವೆ. ಜು.27 ಭಾನುವಾರ ಕೂಡಾ 450 ಟನ್ ಯೂರಿಯಾ ಬರಲಿದ್ದು, ಸೋಮವಾರ ವಿತರಣೆ ಮಾಡಲಿದ್ದೇವೆ. | ಎಂ.ಆರ್.ಮಂಜುನಾಥ್, ಕೃಷಿ ಇಲಾಖೆ ಜಂಟಿ ನಿರ್ದೇಶಕರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
