ಮುಖ್ಯ ಸುದ್ದಿ
Support price: ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ | ನೋಂದಣಿಗೆ ಅವಕಾಶ


CHITRADURGA NEWS | 21 SEPTEMBER 2024
ಚಿತ್ರದುರ್ಗ: ಜಿಲ್ಲಾಧಿಕಾರಿಗಳ ನಿರ್ದೇಶನದಂತೆ 2024-25ನೇ ಸಾಲಿನ ಕರ್ನಾಟಕ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಹೆಸರು ಕಾಳು ಖರೀದಿ ಮಾಡಲು ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರೂಟ್ಸ್ ಐಡಿಯೊಂದಿಗೆ ರೈತರು ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕರು ಕೋರಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಸರು ಕಾಳು ಖರೀದಿ ಮಾಡಲು ‘ಎನ್‌ಸಿಸಿಎಫ್’ ಸಂಸ್ಥೆಯ ಪರವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಚಿತ್ರದುರ್ಗ ಶಾಖೆಯ ಹೊಸದುರ್ಗ ತಾಲ್ಲೂಕಿನಲ್ಲಿ ಪಿಎಸಿಎಸ್ ಹೊಸದುರ್ಗ ರಸ್ತೆ ಮತ್ತು ಪಿಎಸಿಎಸ್ ಶ್ರೀರಾಂಪುರ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಪಿಎಸಿಎಸ್ ಐಮಂಗಲ ಮತ್ತು ಪಿಎಸಿಎಸ್ ಬಬ್ಬೂರು ಸಹಕಾರ ಸಂಘದಲ್ಲಿ ಹೆಸರು ಕಾಳು ನೋಂದಣಿಗೆ ಅವಕಾಶವಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ಪ್ರತಿ ರೈತರಿಂದ ಪ್ರತಿ ಎಕರೆಗೆ 2 ಕ್ವಿಂಟಾಲ್‌ನಂತೆ ಗರಿಷ್ಟ 10 ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಲು ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರೂಟ್ಸ್ ಐಡಿಯೊಂದಿಗೆ ರೈತರು ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಪಿಎಸಿಎಸ್ ಹೊಸದುರ್ಗ ರಸ್ತೆ ಸಹಕಾರ ಸಂಘದ ಕಾರ್ಯದರ್ಶಿ 9008558668, ಪಿಎಸಿಎಸ್ ಶ್ರೀರಾಂಪುರ ಸಹಕಾರ ಸಂಘದ ಕಾರ್ಯದರ್ಶಿ 9844820821, ಪಿಎಸಿಎಸ್ ಐಮಂಗಲ ಸಹಕಾರ ಸಂಘದ ಕಾರ್ಯದರ್ಶಿ 9986182809, ಪಿಎಸಿಎಸ್ ಬಬ್ಬೂರು ಸಹಕಾರ ಸಂಘದ ಕಾರ್ಯದರ್ಶಿ 8088146803 ಗೆ ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಚಿತ್ರದುರ್ಗ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.
