
CHITRADURGA NEWS | 22 APRIL 2025
ಚಿತ್ರದುರ್ಗ: ಕೋಟೆನಾಡಿನ ಪ್ರಮುಖ ಶಕ್ತಿ ದೇವತೆ ನಗರದ ದೊಡ್ಡಪೇಟೆಯಲ್ಲಿ ನೆಲೆಸಿರುವ ರಾಜಮಾತೆ ಶ್ರೀ ರಾಜ ಉತ್ಸವಾಂಬ ಉಚ್ಚಂಗಿಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಏ.21 ರಿಂದ ಮೇ.5 ರವರೆಗೆ ಆಯೋಜಿಸಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 22 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್…

ನಗರ ಕೋಟೆ ರಸ್ತೆಯಲ್ಲಿರುವ ಶ್ರೀ ರಾಜ ಉತ್ಸವಾಂಬ ದೇವಸ್ಥಾನ, ಭಕ್ತಮಂಡಳಿ ಹಾಗೂ ಸಾರ್ವಜನಿಕರ ಸಹಕಾರದಿಂದ ಸುಮಾರು ಹದಿನೈದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಪದ್ಧತಿಯಂತೆ ಮಂಗಳವಾರ ರಾತ್ರಿ ಸಾರು ಹಾಕಲಾಗಿದೆ.
ಏ.25ರ ಬೆಳಗ್ಗೆ 11ಕ್ಕೆ ಅಮ್ಮನವರಿಗೆ ಕಂಕಣಧಾರಣೆ, ಮಧುವಣಗಿತ್ತಿ ಶಾಸ್ತç ಹಾಗೂ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ಜರುಗಲಿದೆ. ಇದೇ ದಿನ ರಾತ್ರಿ ಸಿಂಹ ಉತ್ಸವ ನಡೆಯಲಿದೆ. ಏ.26 ಬೆಳಗ್ಗೆ 8ಕ್ಕೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ ನೆರವೇರಲಿದೆ.
ಉಗ್ರಾಣದ ವಂಶಸ್ಥರಿಂದ ದೇವಿಗೆ ಹೂವಿನ ವಿಶೇಷ ಅಲಂಕಾರ ಹಾಗೂ ರಾತ್ರಿ 8.30ಕ್ಕೆ ಸರ್ಪೋತ್ಸವ ಜರುಗಲಿದೆ. ಏ.27ರ ಬೆಳಗ್ಗೆ 8ಕ್ಕೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ, ರಾತ್ರಿ 8.30ಕ್ಕೆ ನವಿಲು ಉತ್ಸವ ನೆರವೇರಲಿದೆ.
ಇದನ್ನೂ ಓದಿ: ಒಳ ಮೀಸಲಾತಿ ಜಾರಿಗೊಳಿಸದೆ, ಹುದ್ದೆ ನೇಮಕ ಬೇಡ
ಏ.29ರ ಬೆಳಗ್ಗೆ 8ಕ್ಕೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ ಹಾಗೂ ಬೆಳಗ್ಗೆ 9ಕ್ಕೆ ದೇವಿಯು ಕೆಳಗಿಳಿದು ರಾಜ ಬೀದಿಗಳಲ್ಲಿ ಕುದುರೆ ಉತ್ಸವ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಏ.30ರ ಬೆಳಗ್ಗೆ 8ಕ್ಕೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ ಜರುಗಲಿವೆ.
ಅದ್ಧೂರಿ ಮೆರವಣಿಗೆ: ಮೇ.1ರ ಬೆಳಗ್ಗೆ 8ಕ್ಕೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ, ಬಳಿಕ ನಗರದ ರಾಜ ಬೀದಿಗಳಲ್ಲಿ ನಾನಾ ಜಾನಪದ ಕಲಾ ಮೇಳಗಳೊಂದಿಗೆ ಹೂವಿನ ಉಚ್ಚಾಯ ರಥೋತ್ಸವ ನೆರವೇರಲಿದೆ.
ಸಿಡಿ ಉತ್ಸವ: ಮೇ.2ರ ಮಧ್ಯಾಹ್ನ 12ಕ್ಕೆ ದೇವಿಗೆ ವಿಶೇಷ ಭಂಡಾರದ ಪೂಜೆ ನಂತರ ಪ್ರಸಾದ ವಿನಿಯೋಗ, ಸಂಜೆ 6ಕ್ಕೆ ದೇವಸ್ಥಾನದ ಮುಂಭಾಗ ಸಿಡಿ ಉತ್ಸವ ಜರುಗಲಿದ್ದು, ಹರಕೆ ಹೊತ್ತ ಮಹಾ ಭಕ್ತರಿಂದ ಸಿಡಿ ಸೇವೆ ನಡೆಯಲಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮೇ.09 ರಂದು ಯಡಿಯೂರಪ್ಪ ಅಭಿಮಾನೋತ್ಸವ
ಮೇ.3ರ ಬೆಳಗ್ಗೆ 8ಕ್ಕೆ ಅಭಿಷೇಕ, ಮಹಾಮಂಗಳಾರತಿ, ರಾತ್ರಿ 9ಕ್ಕೆ ದೇವಿಯ ಮಹಾ ಭಕ್ತರಾದ ಜೋಗಪ್ಪ ಮತ್ತು ಜೋಗಮ್ಮನವರಿಂದ ಓಕುಳಿ ಸೇವೆ ಜರುಗಲಿದೆ.
ಮೇ.5ರ ಬೆಳಗ್ಗೆ 8ಕ್ಕೆ ದೇವಿಗೆ ಅಭಿಷೇಕ, ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ ಎಂದು ಶ್ರೀ ರಾಜ ಉತ್ಸವಾಂಬ ದೇವಸ್ಥಾನ, ಭಕ್ತಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
