CHITRADURGA NEWS | 9 SEPTEMBER 2026
ಚಿತ್ರದುರ್ಗ: ಜಿಲ್ಲೆಯ ಜನರ ದಶಕಗಳ ಕನಸು ನನಸಾಗಿದೆ. ಜಿಲ್ಲೆಯಲ್ಲಿ ನಿರ್ಮಾಣವಾದ ಕಾಲುವೆಯಲ್ಲಿ ನೀರು ಹರಿದಿದೆ.
ಈಗಾಗಲೇ ಜಿಲ್ಲೆಯನ್ನು ಪ್ರವೇಶಿಸಿರುವ ಭದ್ರಾ ನೀರು, ಹೊಸದುರ್ಗ ತಾಲೂಕು ದಾಟಿ, ಹಿರಿಯೂರು ತಾಲೂಕಿನಲ್ಲಿ ಹರಿಯುತ್ತಿದ್ದಾಳೆ.
ಇದನ್ನೂ ಓದಿ:ನೈಸರ್ಗಿಕ ಕೃಷಿಗೆ ಉತ್ತೇಜನ | ಜಿಲ್ಲೆಯಲ್ಲಿ 500 ಬಯೋಡೈಜೆಸ್ಟರ್ ಘಟಕ ಸ್ಥಾಪನೆ ಗುರಿ
ರಾತ್ರಿ 10.30 ರ ವೇಳೆಗೆ ಹೊಸದುರ್ಗ ತಾಲೂಕಿನ ಜಾನಕಲ್ ಸೇವಾ ನಗರದಿಂದ ಆರಂಭವಾಗಿ ನಾಕೀಕೆರೆ ಬಳಿಯ ಕೆಂಚಿಹಳ್ಳಿ ಸಮೀಪದ ಸುಮಾರು 3 ಕಿ.ಮೀ ಉದ್ದ ಸುರಂಗ ಮಾರ್ಗ ದಾಟಿತು.
ಈ ವೇಳೆ ಸುತ್ತಮುತ್ತಲಿನ ಗ್ರಾಮಗಳ ರೈತರು ಇದ್ದು, ನೀರು ಸುರಂಗದಿಂದ ಹೊರಗೆ ಬರುತ್ತಲೇ ಸಂಭ್ರಮಿಸಿದರು. ರಾತ್ರಿಯಲ್ಲೇ ತಾವು ತೆಗೆದುಕೊಂಡು ಹೋಗಿದ್ದ ಹೂವು, ಹಣ್ಣು, ಕಾಯಿ, ಕರ್ಪೂರ, ಊದು ಬತ್ತಿಯೊಂದಿಗೆ ಪೂಜೆ ಸಲ್ಲಿಸಿ ತಮ್ಮ ಕೃತಜ್ಞತೆ ಸಮರ್ಪಿಸಿದರು.
ಇದನ್ನೂ ಓದಿ:ಭದ್ರೆಗೆ ಸಾಣೇಹಳ್ಳಿ ಬಳಿ ಬಾಗೀನ ಅರ್ಪಿಸಿದ ಪಂಡಿತಾರಾಧ್ಯ ಶ್ರೀ
ಬೆಳಗ್ಗೆ 5.30 ರ ವೇಳೆಗೆ ಹಿರಿಯೂರು ತಾಲೂಕಿನ ಗೌನಹಳ್ಳಿ ಪ್ರವೇಶಿಸಿದ ಭದ್ರಾ ನೀರು, ಸದ್ಯ ಹಿರಿಯೂರು ತಾಲೂಕಿನ ಕೆ.ಸಿ.ರೊಪ್ಪ ಬಳಿಯಿರುವ ಮತ್ತೊಂದು ಸುರಂಗ ಪ್ರವೇಶಿಸಿದೆ ಎನ್ನುವ ಮಾಹಿತಿ ಚಿತ್ರದುರ್ಗ್ ನ್ಯೂಸ್‌ಗೆ ಲಭಿಸಿದೆ.
ಇಂದು ಅಥವಾ ನಾಳೆ ಭದ್ರೆ ಚಿತ್ರದುರ್ಗ ಪ್ರವೇಶಿಸುವ ಅಂದಾಜಿದ್ದು, ಗೋನೂರು ಬಳಿಯ ಕೆರೆ ಆನಂತರ ಅಲ್ಲಿಂದ ಚಳ್ಳಕೆರೆಯ ರಾಣಿಕೆರೆಗೆ ಹಳ್ಳದ ಮೂಲ ನೀರು ಹರಿಯಲಿದೆ.

ಎಲ್ಲೆಲ್ಲೂ ಸಂಭ್ರಮ, ನೀರು ನೋಡುವ ಕಾತುರ:
ನಾವು ಈ ಕಾಲುವೆಯಲ್ಲಿ ನೀರು ನೋಡುತ್ತೇವೋ ಇಲ್ಲವೋ ಎಂಬ ಅನುಮಾನದಲ್ಲೇ ಇದ್ದ ಜಿಲ್ಲೆಯ ಜನರಿಗೆ ನಮ್ಮೂರ ಕಾಲುವೆಯಲ್ಲಿ ನೀರು ಹರಿಯುತ್ತಿದೆ ಎನ್ನುವುದೇ ಸಂಭ್ರಮ.
ಇದನ್ನೂ ಓದಿ:ಎಲ್ಲೀವರೆಗೆ ಹರಿದು ಬಂದಳು ಗೊತ್ತಾ ಭದ್ರೆ | ಬಯಲು ಸೀಮೆಯಲ್ಲಿ ಸಂಭ್ರಮ
ತಡರಾತ್ರಿ ವರೆಗೆ ಕಾದು ಕುಳಿತು ಬ್ಯಾಟರಿ ಬೆಳಕಲ್ಲಿ ನೀರು ನೋಡಿ ತಮ್ಮ ವಾಟ್ಸಪ್ ಸ್ಟೇಟಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಬೆಳಗ್ಗೆ ಮತ್ತೆ ಚಾನಲ್ ಕಡೆಗೆ ಹೋದಾಗ ಅರ್ಧದಷ್ಟು ಅಂದರೆ ಸುಮಾರು 8-10 ಅಡಿಯಷ್ಟು ನೀರು ಹರಿಯುವುದನ್ನು ನೋಡಿ ಯೋಜನೆ ಸಾರ್ಥಕವಾಯಿತು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.
ಇಂದು ಮಧ್ಯಾಹ್ನ ಕ್ಯಾದಿಗೆರೆ ಬಳಿಗೆ ?
ಪ್ರಾಯೋಗಿಕವಾಗಿ ಹರಿಯುತ್ತಿರುವ ನೀರು ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಚಿತ್ರದುರ್ಗ ಹೊರ ವಲಯದ ಕ್ಯಾದಿಗೆರೆ ಬಳಿಯ ಹಳೇ ಬೈಪಾಸ್ ರಸ್ತೆಯಲ್ಲಿರುವ ಕೆನಾಲ್ ಮೂಲಕ ಹಾದು ಹೋಗುವ ಸಾಧ್ಯತೆ ಇದೆ ಎಂದು ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮಾಧ್ಯಮ ವರದಿಗಳಿಗೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ | ಡಿಸಿ ರಮ್ಯ
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

