CHITRADURGA NEWS | 08 September 2026
ಚಿತ್ರದುರ್ಗ: ಬಯಲು ಸೀಮೆಗೆ ಹರಿದ ಭದ್ರೆ, ಜನರಲ್ಲಿ ಸಂಭ್ರಮ. ಹೌದು, ಇಷ್ಟು ದಿನ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ಮಾತ್ರ ನೋಡಿ ನೋಡಿ ಕಾದು ಜುಲಿತಿದ್ದ ಜನರಿಗೆ ಈಗ ಕಾಲುವೆಯಲ್ಲಿ ನೀರು ಹರಿಯುವ ದೃಶ್ಯ ಕಣ್ತುಂಬಿಕೊಳ್ಳುವ ಸಂಭ್ರಮ ನಮ್ಮ ಕಾಲಕ್ಕೆ ನೀರು ಹರಿಯುವುದನ್ನು ನೋಡುತ್ತೇವೋ ಇಲ್ಲವೋ ಎಂಬ ಅನುಮಾನದಲ್ಲೇ ಯೋಜನೆ ನೋಡುತ್ತಿದ್ದ ಜಿಲ್ಲೆಯ ಜನರಿಗೆ ಕನಸು ನನಸಾದ ಸಂಭ್ರಮ.
ಇದನ್ನೂ ಓದಿ: ಭದ್ರ ಹರಿವು ಮತ್ತೆ ಆರಂಭ | ಸಮಸ್ಯೆ ಬಗೆಹರಿಸಿದ ಸಚಿವ ಟಿ.ರಘುಮೂರ್ತಿ
ತರೀಕೆರೆ ಭಾಗದ ರೈತರ ಜೊತೆ ಮಾತುಕತೆ ನಡೆದ ನಂತರ ಸೋಮವಾರ ಸಂಜೆ ಸಚಿವ ಟಿ.ರಘುಮೂರ್ತಿ ಅವರು ಬೆಟ್ಟದ ತಾವರೆಕೆರೆ ಬಳಿ ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿಸಲು ಮತ್ತೊಮ್ಮೆ ಚಾಲನೆ ನೀಡಿದ್ದರು.
ಈಗ ಎಲ್ಲಿದೆ ಗೊತ್ತಾ ನೀರು:
ಭದ್ರಾ ಜಲಾಶಯದಿಂದ ಹರಿದು ಬರುತ್ತಿರುವ ನೀರು ಈಗ ಎಲ್ಲಿದೆ, ಈಗ ಎಲ್ಲಿಗೆ ತಲುಪಿದೆ ಎನ್ನುವುದೇ ಎಲ್ಲರ ಪ್ರಶ್ನೆಸೋಮವಾರ ರಾತ್ರಿಯೇ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಮೂಲಕ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿರುವ ಭದ್ರಾ ನೀರು, ಈಗ ಅಂದ್ರೆ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಹಾಲುರಾಮೇಶ್ವರ ಬಳಿ ಸಾಗಿದೆ.
ಮಧುರೆ ಬಳಿ ಬ್ರಹ್ಮ ವಿದ್ಯಾನಗರ ಅಂದರೆ ಭಗೀರಥ ಮಠದ ಮುಂಭಾಗದಲ್ಲಿ ಸಾಗಿ ಜಾನಕಲ್ ಸೇವಾ ನಗರದತ್ತ ಜುಳು ಜುಳು ಹರಿಯುತ್ತಿದೆ.
ಇದನ್ನೂ ಓದಿ: ಚಿತ್ರದುರ್ಗ ತಾಲ್ಲೂಕು ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಸಂಜೆ ಅಥವಾ ರಾತ್ರಿ ಹೊತ್ತಿಗೆ ಕೆಂಚಿಹಳ್ಳಿ ಬಳಿಯ ಸುರಂಗ ದಾಟಿ ನಾಕೀಕೆರೆ, ಗೂಖಿಹೊಸಹಳ್ಳಿ ತಲುಪಬಹುದು. ನಾಳೆ ಹಿರಿಯೂರು ತಾಲೂಕು ಪ್ರವೇಶಿಸಿ, ಚಿತ್ರದುರ್ಗ ತಾಲೂಕನ್ನೂ ಮುಟ್ಟುವ ನಿರೀಕ್ಷೆಯಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

