ಮುಖ್ಯ ಸುದ್ದಿ
ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ಕೆಂಡಾರ್ಚನೆ | ನಾಳೆ ರಥೋತ್ಸವ

CHITRADURGA NEWS | 07 MARCH 2025
ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಮಜುರೆ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಶುಕ್ರವಾರದಂದು ಸ್ವಾಮಿಯ ಕೆಂಡಾರ್ಚನೆ ಕಾರ್ಯಕ್ರಮ ಜರುಗಿತು.
Also Read: ಬಜೆಟ್‍ನಲ್ಲಿ ರೈತರಿಗೆ ಬಂಪರ್ | ಜಾನುವಾರು ಮೃತಪಟ್ಟರೆ 15 ಸಾವಿರ ಪರಿಹಾರ
ಬೆಳಿಗ್ಗೆ ಸ್ವಾಮಿಗೆ ಹೂವಿನ ಉತ್ಸವ ನಡೆದಿದ್ದು, ನಂತರ ಪಲ್ಲಕ್ಕಿಯಲ್ಲಿ ಸ್ವಾಮಿಯನ್ನು ಕುರಿಸಿ ದೇವಾಲಯದ ಸುತ್ತಾ-ಮುತ್ತಾ ಪ್ರದೇಶದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ರಥೋತ್ಸವದ ಅಂಗವಾಗಿ ಸ್ವಾಮಿಗೆ ಕಂಕಣಧಾರಣೆ, ಆಶ್ವೋತ್ಸವ, ವೃಷಭೋತ್ಸವ ಕಾರ್ಯಕ್ರಮ ನಡೆಯಿತು.
ಕೆಂಡಾರ್ಚನೆ ಸಮಯದಲ್ಲಿ ಕಡೂರಿನಿಂದ ಬಂದಿದ್ದ ಚನ್ನವೀರಪ್ಪ ಮತ್ತು ತಂಡದವರು ಸ್ವಾಮಿಯ ಮುಂದೆ ವೀರಭದ್ರ ಸ್ವಾಮಿಯ ಒಡಪುಗಳನ್ನು ಹೇಳುವುದರ ಮೂಲಕ ಪಲ್ಲಕ್ಕಿಯ ಮೆರವಣಿಗೆ ನಡೆಸಲಾಯಿತು.
Also Read: ಸುಳ್ಳು ಆರೋಪಗಳಿಗೆ ಬಜೆಟ್‍ನಲ್ಲಿ ತಕ್ಕ ಉತ್ತರ | ಎಚ್.ಆಂಜನೇಯ
ಸ್ವಾಮಿಯನ್ನು ಕುರಿಸಿದ ಪಲ್ಲಕ್ಕಿಯನ್ನು ವಿವಿಧ ರೀತಿಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಅದರಲ್ಲಿ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಮೆರವಣಿಗೆ ನಡೆಸಲಾಯಿತು.
ನಂತರ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾದ ಕೆಂಡದ ಕುಂಡದಲ್ಲಿ ಸ್ವಾಮಿಯ ಪಲ್ಲಕ್ಕಿಯನ್ನು ಹೊತ್ತ ಭಕ್ತಾಧಿಗಳು ಅದರ ಮೇಲೆ ಆಗಮಿಸುವುದರ ಮೂಲಕ ಕೆಂಡಾರ್ಚನೆ ಕಾರ್ಯಕ್ರಮ ನೇರವೇರಿಸಲಾಯಿತು.
ನಂತರ ಭಕ್ತಾಧಿಗಳು ಕೆಂಡವನ್ನು ತುಳಿಯವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು, ಇದೇ ರೀತಿ ದೇವರನ್ನು ಹೊತ್ತ ಪಲ್ಲಕ್ಕಿಯೂ ಕೆಂಡದ ಮೇಲೆ ಮೂರು ಸುತ್ತು ಹಾಕಲಾಯಿತು. ರಥೋತ್ಸವ ಸಮಯದಲ್ಲಿ ಆಗಮಿಸುವ ಭಕ್ತಾಧಿಗಳಿಗೆ ಶ್ರೀ ಮಾವಿನಹಳ್ಳಿ ಬಸವೇಶ್ವರಸ್ವಾಮಿ ಟ್ರಸ್ಟ್‍ವತಿಯಿಂದ ದಾಸೋಹ ಸೇವೆ ಏರ್ಪಡಿಸಲಾಗಿತ್ತು.
Also Read: ಬಜೆಟ್ ನಲ್ಲಿ ಚಿತ್ರದುರ್ಗಕ್ಕೆ ಟ್ರಾಮಾ ಕೇರ್ ಸೆಂಟರ್
ಈ ಸಂದರ್ಭದಲ್ಲಿ ಚಿತ್ರದುರ್ಗ ಬೃಹನ್ಮಠದ ಡಾ.ಬಸವಪ್ರಭುಶ್ರೀಗಳು, ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್, ಬಿಜೆಪಿಯ ಸುರೇಶ್ ಸಿದ್ದಾಪುರ, ವೀರಶೈವ ಸಮಾಜದ ಮುಖಂಡರಾದ ಕೆ.ಇ.ಬಿ.ಷಣ್ಮುಖಪ್ಪ, ಶ್ರೀ ಮಾವಿನಹಳ್ಳಿ ಬಸವೇಶ್ವರಸ್ವಾಮಿ ಟ್ರಸ್ಟ್‍ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾಳೆ ರಥೋತ್ಸವ
ಮಾ.08 ರಂದು ಸಂಜೆ 4 ಗಂಟೆಗೆ ಸ್ವಾಮಿಗೆ ಹೂವಿನ ಪಲ್ಲಕ್ಕಿ ಉತ್ಸವದ ನಂತರ 5 ಗಂಟೆಗೆ ಶ್ರೀ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ಮಾ.09 ರಂದು ಸಂಜೆ 5 ಕ್ಕೆ ಕಂಕಣ ವಿಸರ್ಜನೆ ಹಾಗೂ ಮಹಾ ಮಹಾಮಂಗಳಾರತಿಯೊಂದಿಗೆ ಸ್ವಾಮಿಯ ರಥೋತ್ಸವದ ಸೇವಾ ಕಾರ್ಯಕ್ರಮ ಮುಕ್ತಾಯವಾಗಲಿದೆ.
Also Read: ರಾಜ್ಯದ ಅಭಿವೃದ್ಧಿಯನ್ನು 10 ವರ್ಷ ಹಿಂದಕ್ಕೆ ತಳ್ಳಿದ ಬಜೆಟ್ | ಗೋವಿಂದ ಕಾರಜೋಳ
ಶ್ರೀ ಸ್ವಾಮಿಯ ದೇವಸ್ಥಾನದ ನೂತನ ಕಟ್ಟಡದ ಕಾರ್ಯ ಪ್ರಗತಿಯಲ್ಲಿದ್ದು ಇದರ ಅಂದಾಜು ಮೊತ್ತ ಸುಮಾರು ರೂ.5 ಕೋಟಿಗಳಾಗಿರುತ್ತದೆ. ಆದ್ದರಿಂದ ಭಕ್ತಾದಿಗಳು ನೂತನ ದೇವಸ್ಥಾನದ ನಿರ್ಮಾಣಕ್ಕೆ ಹೆಚ್ಚಿನ ಧನಸಹಾಯ ಮಾಡುವವರು ಹಾಗೂ ವಾಗ್ದಾನ ಮಾಡಿರುವವರು ಜಾತ್ರಾ ಸಮಯದಲ್ಲಿ ಹಣವನ್ನು ಕೊಟ್ಟು ಶ್ರೀ ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಮಾಡಲಾಗಿದೆ.
ಹಿಂದಿನ ವರ್ಷ ರಥೋತ್ಸವ ಸಮಯದಲ್ಲಿ ಭಾವುಟ ಮತ್ತು ಹೂವಿನ ಹಾರಗಳನ್ನು ಹರಾಜಿನಲ್ಲಿ ಪಡೆದವರು ಶ್ರೀ ಸ್ವಾಮಿಯ ರಥೋತ್ಸವದ ದಿವಸ ಹಣ ಕೊಟ್ಟು ರಸೀದಿ ಪಡೆಯಬೇಕೆಂದು ಮನವಿ ಮಾಡಲಾಗಿದೆ.
