ಮುಖ್ಯ ಸುದ್ದಿ
ಬಜೆಟ್ ನಲ್ಲಿ ಚಿತ್ರದುರ್ಗಕ್ಕೆ ಟ್ರಾಮಾ ಕೇರ್ ಸೆಂಟರ್

CHITRADURGA NEWS | 07 MARCH 2025
ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 16 ನೇ ಬಜೆಟ್ ನಲ್ಲಿ ಚಿತ್ರದುರ್ಗ ಜಿಲ್ಲೆಗೆ ಟ್ರಾಮಾ ಕೇರ್ ಸೆಂಟರ್ ಘೋಷಣೆ ಮಾಡಿರುವುದು ಸಂತಸ ಉಂಟು ಮಾಡಿದೆ ಎಂದು ಸಂಜೀವಿನಿ ಟ್ರಸ್ಟ್ ನ ಹೆಚ್.ಚೇತನ್ ಬೋರೇನಹಳ್ಳಿ ತಿಳಿಸಿದರು.
Also Read: ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರ ಬುನಾದಿ | ಬಿ.ಎನ್.ಚಂದ್ರಪ್ಪ

ಪತ್ರಿಕಾ ಹೇಳಿಕೆ ನೀಡಿದ ಚೇತನ್ ಅವರು ಇದು ಅತ್ಯಂತ ಸಂತೋಷದ ವಿಷಯ, ಅಪಘಾತಕ್ಕೆ ಒಳಗಾಗಿ ಪ್ರಾಣ ಹೋಗುವಂತವರ ಎಷ್ಟೋ ಜೀವಗಳನ್ನು ಉಳಿಸುವಂತಹ ಘಟಕವಾಗಿದೆ. ಈ ಸೌಲಭ್ಯದಿಂದ ಬೆಂಗಳೂರು ಮತ್ತು ಮಂಗಳೂರು ಆಸ್ಪತ್ರೆಗಳಲ್ಲಿ ಸಿಗುವಂತಹ ಸೌಕರ್ಯಗಳು ನಮ್ಮ ಚಿತ್ರದುರ್ಗದಲ್ಲಿ ತಕ್ಷಣ ಲಭಿಸುತ್ತವೆ. ಇದರಿಂದ ಅಮೂಲ್ಯವಾದ ಜೀವಗಳನ್ನು ಉಳಿಸಬಹುದಾಗಿದೆ.

ಹೆಚ್.ಚೇತನ್
ಇದು ವಿಶೇಷ ಘಟಕವಾಗಿದ್ದು ದೊಡ್ಡ ಮತ್ತು ಪ್ರಾಣಾಂತಿಕ ಗಾಯಗಳಿಂದ ಬಳಲುತ್ತಿರುವವರಿಗೆ ಹಾಗೂ ತೀವ್ರ ತರವಾದ ಅಪಘಾತಕ್ಕೆ ಒಳಗಾದ ರೋಗಿಗಳಿಗೆ ತಕ್ಷಣದ ವಿಶೇಷ ಆರೈಕೆಯನ್ನು ಒದಗಿಸುತ್ತದೆ.

Also Read: ಬಜೆಟ್‌ನಲ್ಲಿ ಚಿತ್ರದುರ್ಗಕ್ಕೆ ದಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಘಟಕಕ್ಕಾಗಿ ವಿಶೇಷವಾಗಿ ಮನವಿ ಮಾಡಿದ್ದ ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
