Connect with us

    ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರ ಬುನಾದಿ | ಬಿ.ಎನ್.ಚಂದ್ರಪ್ಪ

    ಬಿ.ಎನ್.ಚಂದ್ರಪ್ಪ

    ಮುಖ್ಯ ಸುದ್ದಿ

    ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರ ಬುನಾದಿ | ಬಿ.ಎನ್.ಚಂದ್ರಪ್ಪ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 07 MARCH 2025

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ ರೂ.5300 ಕೋಟಿ ಬಿಡುಗಡೆ ಮಾಡದೇ, ಕಾಮಗಾರಿ ತ್ವರಿತಕ್ಕೆ ಅಡ್ಡಿಯಾಗಿರುವ ವಾಸ್ತವ ಸತ್ಯ ಅರಿತು ರೂ.2611 ಕೋಟಿ ಅನುದಾನ ನೀಡುವ ಮೂಲಕ ಹೊಸದುರ್ಗ, ಹೊಳಲ್ಕೆರೆ, ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲ್ಲೂಕುಗಳಲ್ಲಿನ 30 ಕೆರೆಗಳನ್ನು ತುಂಬಿಸಿ ಒಂದು ಲಕ್ಷದ 77 ಸಾವಿರ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಹಾಗೂ ತರೀಕೆರೆ ಏತ ನೀರಾವರಿ ಯೋಜನೆಯಡಿ 79 ಕೆರೆಗಳನ್ನು ತುಂಬಿಸುವ ಮೂಲಕ 49790 ಎಕರೆ ಸೂಕ್ಷ್ಮ ನೀರಾವರಿ ಸಾಮರ್ಥ್ಯ ಕಲ್ಪಿಸಲು ಹೆಜ್ಜೆ ಇಟ್ಟಿರುವುದು ಬಯಲುಸೀಮೆ ರೈತರಲ್ಲಿ ಆಶಾಕಿರಣ ಮೂಡಿಸಿದೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

    Also Read: ಬಜೆಟ್‍ನಲ್ಲಿ ರೈತರಿಗೆ ಬಂಪರ್ | ಜಾನುವಾರು ಮೃತಪಟ್ಟರೆ 15 ಸಾವಿರ ಪರಿಹಾರ

    ಶುಕ್ರವಾರ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಪ್ರಗತಿಗೆ ತಾಯಿ ಹೃದಯದ ರೀತಿ ಹೆಚ್ಚು ಮನ್ನಣೆ ನೀಡಿರುವುದು ಸ್ವಾಗತರ್ಹ.

    ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್‌ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹಧನ 450 ರೂ. ನೀಡುವ ನೀತಿ ಚಿತ್ರದುರ್ಗ ಜಿಲ್ಲೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

    ಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಕೇಂದ್ರ, ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಸ್ವಯಂಚಾಲಿತ ಪರೀಕ್ಷಾ ಪಥ ನಿರ್ಮಾಣ, ವಾಹನ ಸಂಚಾರವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು AI ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳನ್ನು ಅಳವಡಿಸುವ ಯೋಜನೆಗಳು ಜಿಲ್ಲೆಯ ಜನರಿಗೆ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Also Read: ಬಜೆಟ್‌ನಲ್ಲಿ ಚಿತ್ರದುರ್ಗಕ್ಕೆ ದಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

    ನಿರೀಕ್ಷೆಗೂ ಮೀರಿ ಕೃಷಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ ಹೀಗೆ ವಿವಿಧ ಕ್ಷೇತ್ರಗಳ ಮೂಲಕ ಕನ್ನಡ ನಾಡನ್ನು ದೇಶದಲ್ಲಿಯೇ ಎತ್ತರ ಸ್ಥಾನಕ್ಕೆ ಕೊಂಡೊಯ್ಯುವ ಹಾದಿಯಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕ್ರಿಕೆಟ್ ಆಟದ ದಿಗ್ಗಜ ಸಚಿನ್ ತೆಂಡೊಲ್ಕರ್ ರೀತಿ ಆಡಳಿತದಲ್ಲಿ ತನ್ನ ದಾಖಲೆಗಳನ್ನೇ ತಾನೇ ಸರಿಗಟ್ಟುತ್ತಿರುವ ಸಿದ್ದರಾಮಯ್ಯ ದೇಶದ ಬಹುದೊಡ್ಡ ಆರ್ಥಿಕ ತಜ್ಞ ಎಂಬುದಕ್ಕೆ ಈ ಬಾರಿಯ ಬಜೆಟ್ ಕಣ್ಣೇದುರಿಗೆ ಇದೆ. ಪ್ರತಿಪಕ್ಷಗಳು ಕೂಡ ನಿಬ್ಬೇರಗಾಗುವ ರೀತಿ ಆರ್ಥಿಕ ಪ್ರಗತಿಯತ್ತ ನಾಡನ್ನು ಕರೆದೊಯ್ಯುವ ಬಜೆಟ್ ಮಂಡಿಸಲಾಗಿದೆ ಎಂದಿದ್ದಾರೆ.

    Also Read: ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಈ ವರ್ಷ ಪೂರ್ಣ | ಸಿಎಂ ಸಿದ್ದರಾಮಯ್ಯ

    ಒಟ್ಟಾರೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ವಿಪಕ್ಷಗಳು ರಾಜಕೀಯ ಕಣ್ಣಲ್ಲಿ ನೋಡಿದರೂ ಉತ್ತಮವೇ ಆಗಿದೆ ಎಂಬಷ್ಟು ಜನಪರವಾಗಿದೆ ಎಂದು ಚಂದ್ರಪ್ಪ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top