
CHITRADURGA NEWS | 15 JANUARY 2026
ಚಿತ್ರದುರ್ಗ: ಭಕ್ತ ಭಗವಂತನಿಗೆ ನಿಜ ಭಕ್ತಿ ನೀಡಿದರೆ, ದೇವರು ಅದನ್ನು ಆಶೀರ್ವಾದದ ರೂಪದಲ್ಲಿ ಮರಳಿಸಿ ಎಲ್ಲ ಸಂಕಷ್ಟಗಳನ್ನು ನಿವಾರಿಸುತ್ತಾನೆ ಎನ್ನುವುದೇ ಹಿಂದುಗಳ ನಂಬಿಕೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಆಯೋಜಿಸಿದ್ದ 26ನೇ ವರ್ಷದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 14 ಜನವರಿ | ಕರ್ನಾಟಕ ಅಡಿಕೆ ಮಾರುಕಟ್ಟೆ ವಿವರ
ಚಿತ್ರದುರ್ಗದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಕಳೆದ 25 ವರ್ಷಗಳಿಂದ ನಿರಂತರವಾಗಿ ದೀಪೋತ್ಸವ ಆಚರಿಸಿಕೊಂಡು ಬಂದಿದೆ. ಇದು ರಾಜ್ಯಾದ್ಯಂತ ಖ್ಯಾತಿಯಾಗಿದೆ. ರಾಜ್ಯದ ವಿವಿಧ ಭಾಗಗಳ ಅಯ್ಯಪ್ಪ ಮಾಲಾಧಾರಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಗಂಗಾರಾತಿ, ತುಂಗಾರತಿ ಮಾದರಿಯಲ್ಲಿ ಚಿತ್ರದುರ್ಗದಲ್ಲಿ ಅಯ್ಯಪ್ಪಸ್ವಾಮಿಗೆ ಸಾವಿರಾರು ಭಕ್ತರಿಂದ ದೀಪಾರಾತಿ ನಡೆಯುತ್ತಿದೆ. ಕಳೆದ 60 ದಿನಗಳಿಂದ ಸುಮಾರು 2 ಲಕ್ಷ ಮಾಲಾಧಾರಿಗಳು ಅನ್ನ ಪ್ರಸಾದ ಸ್ವೀಕಾರ ಮಾಡಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಇಲ್ಲಿಗೆ ಬರುವ ಅಯ್ಯಪ್ಪ ಮಾಲಾಧಾರಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೇವಸ್ಥಾನ ಸಮಿತಿಯವರು ಬಹಳ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ.
| ಅರುಣ್ ಕುಮಾರ್, ಐಶ್ವರ್ಯಾ ಹೋಟೆಲ್ ಉದ್ಯಮಿ
ಪ್ರತಿಯೊಬ್ಬರೂ ಪೂಜಾ ಚಟುವಟಿಕೆ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಿದರೆ ದೈವಿಕ ಶಕ್ತಿ ಬೆಳೆಯುತ್ತದೆ. ದೇವರು ಮತ್ತು ಭಕ್ತರ ನಡುವೆ ಅವಿನಾಭಾವ ಸಂಬಂಧವಿದೆ. ನಿಜವಾದ ಭಕ್ತಿಯಿಂದ ಮಾತ್ರ ಭಗವಂತನನ್ನು ಕಾಣಲು ಸಾಧ್ಯ ಎಂದರು.
ಇದನ್ನೂ ಓದಿ: ದಾಳಿಂಬೆ ಬೆಳೆಯಲ್ಲಿ ಯಶಸ್ಸು ಕಂಡ ಬಯಲು ಸೀಮೆ ದಂಪತಿ
ಹಿಂದೂ ಧರ್ಮದ ಉಗಮದ ಬಗ್ಗೆ ಯಾರಿಗೂ ಗೊತ್ತಿಲ್ಲ, ಮುಂದೆಯೂ ಗೊತ್ತಾಗುವುದಿಲ್ಲ. ಭಾವನೆಗಳ ಮಧ್ಯೆ ಹಿಂದು ಧರ್ಮ ಮೂಡಿದೆ, ಹಿಂದೂ ಧರ್ಮ ಶಾಂತಿಯನ್ನು ಪಾಲಿಸುತ್ತಿದೆ. ನಮ್ಮ ದೇಶ ಬೇರೆ ದೇಶ ಎಂದೂ ಇತರೆ ದೇಶಗಳ ಮೇಲೆ ಆಕ್ರಮಣ ಮಾಡಿಲ್ಲ. ಜಗತ್ತಿನ ಒಳಿತಿಗಾಗಿ ಪ್ರಾರ್ಥಿಸುವ ದೇಶ ಹಾಗೂ ಸಂಸ್ಕೃತಿ ನಮ್ಮದು. ಇಲ್ಲಿನ ಕಲ್ಲು, ಮಣ್ಣು, ಮರ, ನೀರು, ಬೆಂಕಿ, ಗಾಳಿ ಸೇರಿದಂತೆ ಎಲ್ಲೆಲ್ಲೂ ಭಗವಂತನನ್ನೇ ಕಾಣುವ ಸಂಸ್ಕೃತಿ ನಮ್ಮದು. ಇದನ್ನು ಮುಂದಿನ ಪೀಳಿಗೆಗೆ ತಲುಪಿಸವ ಕಾರ್ಯ ಆಗಬೇಕು ಎಂದು ತಿಳಿಸಿದರು.

ದೀಪೋತ್ಸವ ಉದ್ಘಾಟಿಸಿದ ಎಸ್.ಆರ್.ಎಸ್. ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಅಯ್ಯಪ್ಪಸ್ವಾಮಿ ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ. ಈ ಕ್ಷೇತ್ರಕ್ಕೆ ನೀಡಿದ ದೇಣಿಗೆ ಎಂದು ದುರುಪಯೋಗ ಆಗುವುದಿಲ್ಲ. ಅನ್ನ ಸಂತರ್ಪಣೆ ಮೂಲಕ ಹಸಿವು ನೀಗಿಸುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹಿಂದೂ ಮಹಾಗಣಪತಿ ಮಾದರಿಯಲ್ಲಿ ನಡೆಯಲಿದೆ ಎಂದರು.
ಇದನ್ನೂ ಓದಿ: ಭದ್ರಾ ಜಲಾಶಯ ವಿಶ್ವೇಶ್ವರ ನಿಗಮದ ವ್ಯಾಪ್ತಿಗೆ ಒಳಪಡಿಸಿ | ಹೋರಾಟ ಸಮಿತಿ
ಮಾಲಾಧಾರಿಗಳು ಬರೀ ಮಾಲೆಯನ್ನು ಹಾಕಿದಾಗ ಶ್ರದ್ಧೆ, ಭಕ್ತಿ, ಶುದ್ಧವಾಗಿದ್ದರೆ ಸಾಲದು ಬದುಕಿನದ್ದಕ್ಕೂ ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಚಿತ್ರದುರ್ಗ ಕೇವಲ ಐತಿಹಾಸಿಕ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ, ಧಾರ್ಮಿಕ ಪ್ರವಾಸೋದ್ಯಮಕ್ಕೂ ಹೆಸರಾಗುತ್ತಿದೆ. ಜಿಲ್ಲೆಯಲ್ಲಿ ಹಿಂದು ಮಹಾಗಣಪತಿ ಶೋಭಾಯಾತ್ರೆ, ಅಯ್ಯಪ್ಪ ಸ್ವಾಮಿಯ ದೀಪೋತ್ಸವ, ಅಕ್ಕ-ತಂಗಿಯರ ಭೇಟಿ, ಸಿಡಿ, ಜಾತ್ರೆಗಳು, ಶರಣ ಸಂಸ್ಕøತಿ ಉತ್ಸವ, ಮಹಾ ಶಿವರಾತ್ರಿ ಸಪ್ತಾಹಗಳು ನಿರಂತರವಾಗಿ ನಡೆಯುತ್ತಿವೆ.
| ಟಿ.ಬದರೀನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು.
ಅಯ್ಯಪ್ಪಸ್ವಾಮಿ ಸೇವಾಟ್ರಸ್ಟ್ ಅಧ್ಯಕ್ಷರಾದ ಶರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೆಶಕ ಹೆಚ್.ಎಂ.ದ್ಯಾಮಣ್ಣ, ವರ್ತಕ ಉದಯ್ ಶೆಟ್ಟಿ, ಬಿಜೆಪಿ ಮುಖಂಡರಾದ ಡಾ.ಸಿದ್ದಾರ್ಥ್, ಮೆದೇಹಳ್ಳಿ ಗ್ರಾಪಂ ಅಧ್ಯಕ್ಷ ನಿರಂಜನಮೂರ್ತಿ, ಟೀಚರ್ಸ್ ಕಾಲೋನಿಯ ಸುಭಾಷ್ಬಾಬು, ಉದ್ಯಮಿ ಸುರೇಶ್ ಬಾಬು ಇತರರಿದ್ದರು.
ಇದನ್ನೂ ಓದಿ: ಭೋವಿ ಗುರುಪೀಠದಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ | ಶಾಸಕ ಎಂ.ಚಂದ್ರಪ್ಪ ಭಾಗೀ
ಕಾರ್ಯಕ್ರಮದ ನಂತರ ಖ್ಯಾತ ಹಿನ್ನಲೆ ಗಾಯಕರಾದ ಯಶವಂತ್, ನಿತಿನ್ ರಾಜಾರಾಮ್ ಶಾಸ್ತ್ರಿ, ಕೃಪಾ ಎಸ್. ಸುರಸಾರವ ಭಕ್ತಿ ಕಾರ್ಯಕ್ರಮ ನಡೆಯಿತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
