CHITRADURGA NEWS | 11 FEBRUARY 2026
ಹೊಸದುರ್ಗ: ತಾಲೂಕಿನ ಗೂಳಿಹಟ್ಟಿಯಲ್ಲಿ ಶ್ರೀ ಆಂಜನೇಯಸ್ವಾಮಿ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಶಿಖರ ಕಳಶಾರೋಹಣ ಕಾರ್ಯಕ್ರಮ ಫೆ.11 ಮತ್ತು 12 ರಂದು ನಡೆಯಲಿದೆ.
ಇಂದು ಸಂಜೆ ಗಂಗಾ ಪೂಜೆ, ಗೋ ಪೂಜೆ, ಸ್ವಸ್ತಿ ಪುಣ್ಯಾಹ, ರಕ್ಷಾ ಬಂಧನ, ಸರ್ವ ದೇವತೆಗಳ ಆರಾಧನೆ, ಧ್ವಜಾರೋಹಣ, ವೇದಿಕಾ ಪೂಜೆ, ಪಂಚಗವ್ಯಾಧಿಕರಣ, ಹೋಮ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿವೆ.
ಇದನ್ನೂ ಓದಿ: ಈ 5 ವಸ್ತುಗಳನ್ನು ದಾನಮಾಡುವುದರಿಂದ ನಿಮ್ಮ ಅದೃಷ್ಟ ಖುಲಾಯಿಸುತ್ತದೆಯಂತೆ
ಫೆಬ್ರವರಿ 12 ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ರತ್ನ ನಿಕ್ಷೇಪ, ಪೀಠ ಬಂಧ, ಪ್ರಾಣ ಪ್ರತಿಷ್ಠೆ, ನೇತ್ರೋನ್ಮಿಲನ, ಬಿಂಬ ದರ್ಶನ, ಕದಳಿ ಛೇದನ, ಕಳಶಾರೋಹಣ, ಕುಂಬಾಭಿಷೇಕ, ಪ್ರತಿಷ್ಠಾ ಹೋಮ, ಪೂರ್ಣಾಹುತಿ, ಬಲಿಹರಣ, ಅಷ್ಟದಿಗ್ಬಂಧನ, ಪಂಚಾಮೃತ ಅಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.
ವಿವಿಧ ಗ್ರಾಮಗಳ ದೇವತೆಗಳ ಸಾನ್ನಿಧ್ಯ:
ಈ ಕಾರ್ಯಕ್ರಮಕ್ಕೆ ಗೂಳಿಹಟ್ಟಿ ಕರಿಯಮ್ಮ ದೇವಿ, ಹುತ್ತದ ಕೆಂಚಮ್ಮ ದೇವಿ, ಎನ್.ಜಿ.ಹಳ್ಳಿ ಮುತ್ತಿನ ಮುಡಿಯಮ್ಮ ದೇವಿ, ಡಿ.ಮಲ್ಲಾಪುರದ ಶಬರಿ ರಾಮಾಂಜನೇಯ ಸ್ವಾಮಿ, ದೊಡ್ಡಘಟ್ಟ ಶ್ರೀ ರಾಮಾಂಜನೇಯ ಸ್ವಾಮಿ, ತಣಿಗೆಕಲ್ಲು ವೀರಭದ್ರಸ್ವಾಮಿ, ಹುಲಿಕೆರೆ ಸೋಮೇಶ್ವರ ಸ್ವಾಮಿ, ಗೂಳಿಹಟ್ಟಿ ಭೋವಿಹಟ್ಟಿಯ ರಂಗನಾಥ ಸ್ವಾಮಿ, ಪಾಪೇನಹಳ್ಳಿ ಶ್ರೀ ಆಂಜನೇಯಸ್ವಾಮಿ, ದುಗ್ಗಾವರ ಕೋಟೆಕಲ್ಲು ರಂಗನಾಥಸ್ವಾಮಿ, ಮಲಸಿಂಗನಹಳ್ಳಿ ತಿರುಮಲಾಂಜನೇಯಸ್ವಾಮಿ ದೇವತೆಗಳು ಆಗಮಿಸಿಲಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | 10 ಫೆಬ್ರವರಿ | ಇಂದಿನ ಮಾರುಕಟೆಯಲ್ಲಿ ಅಡಿಕೆ ರೇಟ್
ಭಾಗವಹಿಸುವ ಎಲ್ಲ ದೇವತೆಗಳಿಗೆ ವಿಶೇಷ ಗಂಗಾರತಿ ಕಾರ್ಯಕ್ರಮ ನಡೆಯಲಿದೆ.
ಶಾಂತವೀರ ಸ್ವಾಮೀಜಿಯಿಂದ ಕಳಶಾರೋಹಣ:
ದೇವಸ್ಥಾನದ ನೂತನ ಶಿಖರ ಕಳಶ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ನೆರವೇರಿಸುವರು.
ನಂತರ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ, ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ(ಪಪ್ಪಿ), ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಸಚಿವರಾದ ಗೂಳಿಹಟ್ಟಿ ಡಿ.ಶೇಖರ್, ಮಾಜಿ ಶಾಸಕರಾದ ಇಳ್ಕಲ್ ವಿಜಯಕುಮಾರ್, ಟಿ.ಎಚ್.ಬಸವರಾಜಪ್ಪ, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಬಿಜೆಪಿ ಮುಖಂಡರಾದ ಶಿವು ಮಠ, ರಾಜೇಶ್ ಬುರುಡೇಕಟ್ಟೆ, ಆರ್.ಜಗದೀಶ್, ಡಿ.ಗುರುಸ್ವಾಮಿ, ಉದ್ಯಮಿ ಡಿ.ಎಸ್.ಪ್ರದೀಪ್, ಹೊಸದುರ್ಗ ಠಾಣೆ ಸಿಪಿಐ ರಮೇಶ್ ಗೌಡ, ಜಿಪಂ ಮಾಜಿ ಸದಸ್ಯರಾದ ಬಿ.ಎಸ್.ದ್ಯಾಮಣ್ಣ, ಎಂ.ಲಕ್ಷ್ಮಣ, ಬೆಂಗಳೂರಿನ ಪಿ.ವೈ.ವೆಂಕಟೇಶ್ ರೆಡ್ಡಿ, ಗೂಳಿಹಟ್ಟಿಯ ನಾಕೀಕೆರೆ ರುದ್ರಪ್ಪ, ಗೌಡ್ರ ಕೆಂಚದ್ಯಾಮಪ್ಪ, ರಂಗದಾಸಪ್ಪ, ಜಾನಕಲ್ ಪಿಎಸಿಎಸ್ ನಿರ್ದೇಶಕ ಜಿ.ವೈ.ಹಾಲಸಿದ್ದಪ್ಪ, ದೊಡ್ಡಘಟ್ಟ ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ, ಉಪಾಧ್ಯಕ್ಷ ಜಿ.ಕೆ.ಸಿದ್ದಪ್ಪ, ಸದಸ್ಯರಾದ ರತ್ನಮ್ಮ ಕೆಂಚಪ್ಪ, ಬಿ.ಮಹಾಂತೇಶ್ ಮತ್ತಿತರರು ಭಾಗವಹಿಸುವರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 09 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಪ್ರೌಢಶಾಲೆ ಆವರಣದಲ್ಲಿ ಅನ್ನ ಸಂತರ್ಪಣೆ: ಗೂಳಿಹಟ್ಟಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಫೆ.11 ಬುಧವಾರ ರಾತ್ರಿ 8 ಗಂಟೆ ಹಾಗೂ ಫೆ.12 ಗುರುವಾರ ಬೆಳಗ್ಗೆ 11 ಗಂಟೆಯಿಂದ ಅನ್ನ ಸಂತರ್ಪಣೆ, ಇದೇ ದಿನ ರಾತ್ರಿ ರಸಮಂಜರಿ ಕಾರ್ಯಕ್ರಮ ನಡೆಯಲಿವೆ ಎಂದು ಗುಡಿ ಗೌಡರುಗಳಾದ ಆರ್.ಎಸ್.ರಮೇಶ್, ಎಸ್.ಗಿರೀಶ್, ಜಿ.ಕೆ.ಪ್ರಸನ್ನಕುಮಾರ್, ಜಿ.ಕೆ.ಉಮೇಶ್, ಜಿ.ಟಿ.ಗಿರೀಶ್ ಹಾಗೂ ಸಿ.ಕುಮಾರ್ ತಿಳಿಸಿದ್ದಾರೆ.



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
