CHITRADURGA NEWS | 15 JANUARY 2026
ಮಳೆ ನೆರಳಿನ ಪ್ರದೇಶ ಎಂದೇ ಹೆಸರಾಗಿರುವ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ರೈತ ದಂಪತಿಗಳು ದಾಳಿಂಬೆ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ.
ನಾಯಕನಹಟ್ಟಿ ಸಮೀಪದ ಮಲ್ಲೂರಹಳ್ಳಿ, ಭರಮಸಾಗರದ ದಂಪತಿ ಬಿ.ಎ.ತಿಪ್ಪೇಸ್ವಾಮಿ – ಲಕ್ಷ್ಮೀ ದಂಪತಿಗಳು ಮೊದಲ ಬೆಳೆಯಲ್ಲೇ ಭರ್ಜರಿ ಇಳುವರಿ ಕಂಡು ನಗೆ ಬೀರಿದ್ದಾರೆ.
ಇದನ್ನೂ ಓದಿ: ಪ್ರೋತ್ಸಾಹಧನ | ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
ಮಹಾರಾಷ್ಟ್ರದ ಜಲಗಾಂವ್‌ನಿಂದ ಜೈನ್ ಕಂಪನಿಯ ಕೆಆರ್‍ಎಸ್ ಭಗವ ತಳಿಯ 2050 ಗಿಡಗಳನ್ನು ತಲಾ 45 ರೂ.ಗಳಿಗೆ ಖರೀಧಿಸಿ, ಏಳು ಎಕರೆಯಲ್ಲಿ ನೆಟ್ಟಿರುವ ದಂಪತಿ ಎರಡು ವರ್ಷಗಳಿಂದ ಪೋಷಣೆ ಮಾಡಿದ್ದು, ಈಗ ಹಣ್ಣುಗಳು ಕೈಗೆ ಬಂದಿವೆ.
ಒಂದು ಗಿಡದಲ್ಲಿ 60 ಕ್ಕೂ ಅಧಿಕ ಹಣ್ಣುಗಳು ಬಿಟ್ಟಿರುವುದು ವಿಶೇಷವಾಗಿದೆ. ಒಂದೊಂದು ಹಣ್ಣು ಅರ್ಧ ಕೆ.ಜಿ. ತೂಗುತ್ತಿದೆ. ಗಿಳಿ, ಗುಬ್ಬಚ್ಚಿ, ಅಳಿಲುಗಳ ಕಾಟದಿಂದ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ನೆಟ್(ಬಲೆ) ಅಳವಡಿಸಲಾಗಿದೆ.
ರಾತ್ರಿ ವೇಳೆ ಹಣ್ಣುಗಳನ್ನು ಕದಿಯಲು ಬರುವವರ ಮೇಲೆ ನಿಗಾ ಇಡಲು ಸೈರನ್ ಕ್ಯಾಮರಾ ಕೂಡ ಅಳವಡಿಸಿದ್ದಾರೆ.
2024 ರಲ್ಲಿ ಸಸಿಗಳನ್ನು ನಾಟಿ ಮಾಡಿದ್ದು, ಗಿಡಗಳು ಬೆಳೆದು ಕಾಯಿ ಕಟ್ಟುವವರೆಗೆ ಹನಿ ನೀರಾವರಿ ಮೂಲಕ ದಿನಕ್ಕೆ ಒಂದು ಗಂಟೆ ನೀರು ಬಿಡಲಾಗಿದೆ.
ಮಾರುಕಟ್ಟೆಗೆ ಬಾಕ್ಸ್ ಮೂಲಕ ರವಾನೆ:
ಮಾರುಕಟ್ಟೆಗೆ ಕ್ರೇಟ್ ಹಾಗೂ ಕಾಟನ್ ಬಾಕ್ಸ್ ಮೂಲಕ ಸಾಗಾಣೆ ಮಾಡಲಾಗುವುದು. ಪ್ರತಿ ಕ್ರೇಟ್‍ಗೆ 20 ಕೆ.ಜಿ, ಕಾಟನ್ ಬಾಕ್ಸ್ ಒಂದರಲ್ಲಿ 10 ಕೆ.ಜಿ.ಯಷ್ಟು ಹಣ್ಣು ತುಂಬುತ್ತವೆ.
ಇದನ್ನೂ ಓದಿ: ಭದ್ರಾ ಜಲಾಶಯ ವಿಶ್ವೇಶ್ವರ ನಿಗಮದ ವ್ಯಾಪ್ತಿಗೆ ಒಳಪಡಿಸಿ | ಹೋರಾಟ ಸಮಿತಿ
ರಾಸಾಯನಿಕ ಗೊಬ್ಬರಗಳನ್ನು ಹೆಚ್ಚು ಬಳಸಿದರೆ ಮಣ್ಣಿನ ಫಲವತ್ತತೆ ನಾಶವಾಗಿ ಗಿಡಗಳು ನಲುಗಿ ಹಾಕಿದ ಬಂಡವಾಳವು ಕೈಗೆ ಸೇರುವುದಿಲ್ಲ ಎನ್ನುವುದನ್ನು ಮನಗಂಡು ಸಲಹೆಯಂತೆ ಸಾವಯವ ಗೊಬ್ಬರವನ್ನೇ ಜಾಸ್ತಿ ಬಳಸಿರುವುದರಿಂದ ಗಿಡದ ತುಂಬೆಲ್ಲಾ ಹಣ್ಣುಗಳು ಕಂಗೊಳಿಸುತ್ತಿವೆ.
ರಕ್ತ ಶುದ್ದಿಗೊಳಿಸುವ ಸಾಮಥ್ರ್ಯವುಳ್ಳ ದಾಳಿಂಬೆಯಲ್ಲಿ 21 ಬಗೆಯ ವಿಟಮಿನ್ ಪ್ರೋಟಿನ್ ಇರುವುದರಿಂದ ನರಗಳನ್ನು ಚುರುಕುಗೊಳಿಸುತ್ತವೆ. ಇದರ ಸಿಪ್ಪೆಯಲ್ಲಿಯೂ ಮಹತ್ವವಿದೆ.
ಇದನ್ನೂ ಓದಿ: ಕಥಾ ಸಮಯ | ಕಾಡು ಕಾಯುವ ಮರ ಕೃತಿ ಕುರಿತು ಸಂವಾದ
ನಮ್ಮ ಜೊತೆ ಮಕ್ಕಳು ಸೊಸೆಯಂದಿರ ಪರಿಶ್ರಮವೂ ಅಡಗಿದೆ. ಹಣ್ಣು ಮಾರಾಟ ಮಾಡಲು ಮಾರುಕಟ್ಟೆ ಸಮಸ್ಯೆಯಿಲ್ಲ. ತಮಿಳುನಾಡು, ಹೈದರಾಬಾದ್‍ನಿಂದ ಜಮೀನಿಎ ಬಂದು ವ್ಯಾಪಾರಸ್ಥರಿ ಖರೀಧಿಸುತ್ತಾರೆ ಎಂದು ರೈತರು ತಿಳಿಸಿದ್ದಾರೆ.
ವಾಣಿಜ್ಯ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಈರುಳ್ಳಿ, ಮೆಕ್ಕೆಜೋಳ ಮಾತ್ರ ಬೆಳೆಯುವ ಬದಲು ತೋಟಗಾರಿಕೆ ಬೆಳೆಗಳಿಗೆ ಏಕೆ ಕೈ ಹಾಕಬಾರದೆಂದು ಧೈರ್ಯ ಮಾಡಿ ದಾಳಿಂಬೆ ಗಿಡಗಳನ್ನು ನೆಟ್ಟೆವು ಭೂಮಿ ತಾಯಿ ನಮ್ಮನ್ನು ಕೈಬಿಡಲಿಲ್ಲ. ನಿರೀಕ್ಷೆಗೆ ತಕ್ಕಷ್ಟು ಫಲ ಸಿಕ್ಕಿದೆ. ಇನ್ನು ಏಳೆಂಟು ವರ್ಷಗಳ ಕಾಲ ಹಣ್ಣುಗಳನ್ನು ಪಡೆಯಬಹುದು.
| ಬಿ.ಎ.ತಿಪ್ಪೇಸ್ವಾಮಿ, ಲಕ್ಷ್ಮೀ. ರೈತ ದಂಪತಿ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
