CHITRADURGA NEWS | 23 FEBRUARY 2026
ಹೊಸದುರ್ಗ: ತೋಟದ ರಕ್ಷಣೆಗಾಗಿ ಸಾಕಿದ್ದ ಅಪರೂಪದ ಮುಧೋಳ ತಳಿಯ ನಾಯಿ ದುಷ್ಕರ್ಮಿಗಳು ಇಟ್ಟಿದ್ದ ಸ್ಫೋಟಕ ಸೇವಿಸಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ:
ಅತ್ತಿಘಟ್ಟ ಗ್ರಾಮದ ನಿವಾಸಿ ಯೋಗೇಶ್ ತಮ್ಮ ತೋಟ ಹಾಗೂ ಮನೆಯ ರಕ್ಷಣೆಗಾಗಿ ಎರಡು ನಾಯಿಗಳನ್ನು ಸಾಕಿದ್ದರು. ಅದರಲ್ಲಿ ಒಂದು ವರ್ಷದ ಬಿಳಿ ಬಣ್ಣದ ಮುಧೋಳ ತಳಿಯ ನಾಯಿಯೂ ಇತ್ತು. ಫೆಬ್ರವರಿ 17ರಂದು ಸಂಜೆ ನಾಯಿಗಳಿಗೆ ಆಹಾರ ಹಾಕಿ ಯೋಗೇಶ್ ಮನೆಗೆ ಮರಳಿದ್ದರು. ಆದರೆ ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಮುಧೋಳ ತಳಿಯ ನಾಯಿ ನಾಪತ್ತೆಯಾಗಿತ್ತು.
ಇದನ್ನೂ ಓದಿ: ಎತ್ತಿನ ಗಾಡಿಗೆ ಬಸ್ ಡಿಕ್ಕಿ ಒಬ್ಬರು ಮೃತ, ಐದು ಜನ ಗಂಭೀರ
ಫೆಬ್ರವರಿ 20ರಂದು ಸಂಜೆ ತೋಟಕ್ಕೆ ನೀರು ಹರಿಸಲು ಹೋದಾಗ, ಸರ್ವೆ ನಂಬರ್ 72ರ ಜಮೀನಿನಲ್ಲಿ ಯಾವುದೋ ಪ್ರಾಣಿ ಸತ್ತ ವಾಸನೆ ಬಂದಿದೆ. ಹತ್ತಿರ ಹೋಗಿ ಪರಿಶೀಲಿಸಿದಾಗ ಕಾಣೆಯಾಗಿದ್ದ ಮುಧೋಳ ನಾಯಿ ಮೃತಪಟ್ಟಿರುವುದು ಕಂಡುಬಂದಿದೆ.
ಸ್ಫೋಟಕತಿಂದಿದ್ದೇಸಾವಿಗೆಕಾರಣ ?
ಯಾವುದೋ ಸ್ಫೋಟಕ ವಸ್ತುವನ್ನು ತಿಂದಿರುವ ಅನುಮಾನ ವ್ಯಕ್ತವಾಗಿದ್ದು, ಸ್ಫೋಟಕವು ಬಾಯಿಯಲ್ಲೇ ಸಿಡಿದ ಪರಿಣಾಮ ನಾಯಿಯ ಬಾಯಿ ಭೀಕರವಾಗಿ ಹರಿದು ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಸ್ಥಿರತೆ ಕಂಡುಕೊಂಡ ರಾಶಿ ಅಡಿಕೆ ಬೆಲೆ
ಕಾಡು ಪ್ರಾಣಿಗಳ ಬೇಟೆಗಾಗಿ ದುಷ್ಕರ್ಮಿಗಳು ಇಟ್ಟಿದ್ದ ಸ್ಫೋಟಕವನ್ನು ನಾಯಿ ಅಪ್ಪಿತಪ್ಪಿ ತಿಂದಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸ್ ದೂರು ದಾಖಲು:
ತಮ್ಮ ಪ್ರೀತಿಯ ನಾಯಿಯನ್ನು ಕಳೆದುಕೊಂಡ ಯೋಗೇಶ್ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು BNS ಸೆಕ್ಷನ್ 325, 288 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಅಡಿಯಲ್ಲಿ (ಪ್ರಕರಣ ಸಂಖ್ಯೆ 122/2026) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
