
CHITRADURGA NEWS | 25 FEBRUARY 2026
ಚಿತ್ರದುರ್ಗ: ಮೊಬೈಲ್ ಅಂಗಡಿ ಮಾಲಿಕನಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಘಟನೆಯ ಸೂಕ್ಷ್ಮತೆ ಅರಿತು ಆರೋಪಿ ಪತ್ತೆಗಾಗಿ ಪೊಲೀಸರ ಎರಡು ತಂಡ ರಚನೆ ಮಾಡಿದ್ದು, ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ನಾಳೆ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ SC/ST ಸಮುದಾಯದವರ ಅಹವಾಲು ಸ್ವೀಕಾರ ಸಭೆ
ಆರೋಪಿ ಪತ್ತೆಗೆ ಗ್ರಾಮಾಂತರ ಠಾಣೆ ಪಿಐ ಬಾಲಚಂದ್ರ ನಾಯ್ಕ್ ಹಾಗೂ ಮಹಿಳಾ ಠಾಣೆ ಪಿಐ ನಯೀಂ ಅಹಮ್ಮದ್ ಹಾಗೂ ನಗರಠಾಣೆ ಸಿಬ್ಬಂದಿ ಒಳಗೊಂಡ ಎರಡು ತಂಡಗಳನ್ನು ರಚಿಸಲಾಗಿತ್ತು.
ಆರೋಪಿ ಮಹಮ್ಮದ್ ಅಮರ್‌ನನ್ನು ಗೋಪಾಲಪುರ ರಸ್ತೆ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ದಸ್ತಗಿರಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ಇದನ್ನೂ ಓದಿ:ಅಡಿಕೆ ಧಾರಣೆ | 25 ಫೆಬ್ರವರಿ | ಯಾವ ಮಾರುಕಟ್ಟೆಯಲ್ಲಿ ಹೆಚ್ಚು, ಎಲ್ಲಿ ಕಡಿಮೆ
ಸದರಿ ಘಟನೆ ಕೋಮು ಸಂಘರ್ಷಕ್ಕೆ ಸಂಬಂಧಿಸಿದ್ದಲ್ಲ, ಇಬ್ಬರ ನಡುವಿನ ವೈಯಕ್ತಿಕ ಗಲಾಟೆಯಾಗಿರುತ್ತದೆ. ಆದರೂ ನಗರಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹೇಳಿದ್ದಾರೆ.
ಘಟನೆಗೆ ನಿಜವಾದ ಕಾರಣವೇನು..?
ಸಂತೆ ಹೊಂಡದ ಬಳಿ ಮೊಬೈಲ್ ಅಂಗಡಿ ಇಟ್ಟುಕೊಂಡಿರುವ ನಗರದ ನಿವಾಸಿ ವಿಕ್ರಂ ಚೌಧರಿ ಬಳಿ ಬೆಳಗ್ಗೆ 11 ಗಂಟೆ ಸುಮಾರಿಗೆ ತೆರಳಿದ್ದ ಆರೋಪಿ ಮಹಮ್ಮದ್ ಅಮರ್ ಈ ಹಿಂದೆ ಖರೀಧಿಸಿದ್ದ ಒಪ್ಪೊ ಮೊಬೈಲ್ ಡಿಸ್ಪ್ಲೇ (OPPO DISPLAY_ ಬದಲಾಗಿ ಸ್ಯಾಮ್‌ಸಂಗ್ ಡಿಸ್‌ಪ್ಲೇ(SAMSUNG DISPLAY) ಕೊಡಿ ಎಂದು ಕೇಳಿದ್ದಾನೆ.
ಇದನ್ನೂ ಓದಿ:ಮಾರುಕಟ್ಟೆ ಧಾರಣೆ | ಫೆಬ್ರವರಿ 25 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಒಪ್ಪೊ ಡಿಸ್‌ಪ್ಲೆಗೆ 640 ರೂ. ನೀಡಿದ್ದು, ಸ್ಯಾಮ್‌ಸಂಗ್ ಡಿಸ್‌ಪ್ಲೇಗೆ 740 ರೂ. ಆಗುತ್ತದೆ. 100 ರೂ. ಹೆಚ್ಚು ಕೊಡಿ ಎಂದು ವಿಕ್ರಂ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದು ಜೇಬಿನಿಂದ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

