CHITRADURGA NEWS | 23 FEBRUARY 2026
ಹೊಳಲ್ಕೆರೆ: ಸಿಕ್ಕಿರುವ ಅವಕಾಶವನ್ನು ಅಧಿಕಾರವೆಂದು ಬೀಗದೆ ಸೇವಕನೆಂದು ತಿಳಿದು ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಶಾಸಕ ಡಾ.ಎಂ.ಚಂದ್ರಪ್ಪ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಕರೆ ನೀಡಿದರು.
ಇದನ್ನೂ ಓದಿ: ಕಡಬನಕಟ್ಟೆ ಆಂಜನೇಯಸ್ವಾಮಿ ರಥೋತ್ಸವ | ಶಾಸಕ ಟಿ.ರಘುಮೂರ್ತಿ ವಿಶೇಷ ಪೂಜೆ
ಹೊಳಲ್ಕೆರೆ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಬಿಎಲ್‍ಓ-ಟು ಕಾರ್ಯಾಗಾರ ಮತ್ತು ವಿಬಿಜಿರಾಮ್‍ಜಿ ಜಾಗೃತಿ ಸಮಾವೇಶ ಹಾಗೂ ಹೊಳಲ್ಕೆರೆ ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಕಾರ್ಯಕರ್ತರ ಪರವಾಗಿಯೂ ಪ್ರಚಾರಕ್ಕೆ ಹೋಗುತ್ತೇನೆಂದು ದೇಶದ ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆಂದರೆ ಅವರದು ಎಂತಹ ದೊಡ್ಡತನ ಎನ್ನುವುದನ್ನು ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು.
ಪಕ್ಷ ನೀಡಿರುವ ಸಣ್ಣ ಕೆಲಸವನ್ನು ದೊಡ್ಡ ಜವಾಬ್ದಾರಿಯೆನ್ನುವುದನ್ನು ಅರಿತು ಪಕ್ಷದ ಕೆಲಸ ಮಾಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ವಿಧಾನಸಭೆ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಪ್ರತಿ ಮನೆ ಮನೆಗೆ ಹೋಗಿ ಧೈರ್ಯದಿಂದ ಮತ ಕೇಳುವಂತ ಶಕ್ತಿ ಕಾರ್ಯಕರ್ತರಿಗೆ ಬರಲಿ ಎನ್ನುವ ಉದ್ದೇಶದಿಂದ ಕ್ಷೇತ್ರಾದ್ಯಂತ ಅಭಿವೃದ್ದಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆಂದರು.
ಇದನ್ನೂ ಓದಿ: ಭ್ರೂಣಲಿಂಗ ಪತ್ತೆ ಮಾಡುವವರ ಬಗ್ಗೆ ಮಾಹಿತಿ ನೀಡಿದರೆ ₹1 ಲಕ್ಷ ಬಹುಮಾನ | ಜಿಲ್ಲಾಧಿಕಾರಿ
ಗ್ರಾಮ ಪಂಚಾಯಿತಿಯ 42 ಸ್ಥಾನಗಳು ನಮ್ಮ ಹಿಡಿತದಲ್ಲಿರಬೇಕು. ಅದೇ ರೀತಿ ಜಿಲ್ಲಾ ಪಂಚಾಯಿತಿಯ 7, ಪುರಸಭೆಯ 23, ತಾಲ್ಲೂಕು ಪಂಚಾಯಿತಿಯ 30, ಸ್ಥಾನಗಳಲ್ಲಿಯೂ ನಮ್ಮ ಪಕ್ಷ ಗೆಲ್ಲಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ಕಾರ್ಯಕರ್ತರು ಈಗಿನಿಂದಲೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ರಾಜ್ಯದಲ್ಲಿ ಈಗಿರುವ ಭ್ರಷ್ಟ, ಅಸಹ್ಯವಾದ ಕಾಂಗ್ರೆಸ್ ಸರ್ಕಾರವನ್ನು ಹಿಂದೆಂದು ನೋಡಿಲ್ಲ ಎಂದರು.
ಹದಿನೆಂಟು ವರ್ಷ ಮೇಲ್ಪಟ್ಟವರ ಹೆಸರುಗಳನ್ನು ಚಾಚೂ ತಪ್ಪದೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ, ಏಕೆಂದರೆ ಯುವ ಜನಾಂಗ ಪ್ರಧಾನಿ ಮೋದಿರವರ ಪರವಾಗಿದೆ. ಸ್ವಚ್ಚವಾದ ಮತದಾರರ ಪಟ್ಟಿಯನ್ನು ಮಾಡಿಸುವುದು ಬಿಎಲ್‍ಓ-ಟುಗಳ ಜವಾಬ್ದಾರಿ ಎಂದು ತಿಳಿಸಿದರು.
ಬಿಎಲ್‍ಎ ಪ್ರಕೋಷ್ಠಗಳ ರಾಜ್ಯ ಸಂಚಾಲಕ ದತ್ತಾತ್ರೇಯ ಮಾತನಾಡಿ, 289 ಬೂತ್‍ಗಳಲ್ಲಿ ಮತಪಟ್ಟಿಗಳ ಪರಿಷ್ಕರಣೆ ಆಗಬೇಕಾದ ಸಂದರ್ಭದಲ್ಲಿ ಕ್ರಿಯಾತ್ಮಕವಾಗಿರಿ. ಇಲ್ಲವಾದರೆ ಪಕ್ಷಕ್ಕೆ ನಷ್ಟವಾಗುತ್ತದೆ. 67 ಲಕ್ಷ ಡಮ್ಮಿ ಓಟರ್ಸ್‍ಗಳನ್ನು ನಮ್ಮ ಸರ್ಕಾರ ಮತಪಟ್ಟಿಯಿಂದ ಕಿತ್ತಾಕಿದೆ. ಮತಪಟ್ಟಿಗಳ ಬಗ್ಗೆ ಹೆಚ್ಚಿನ ಗಮನ ಕೊಡಿ. ಸರ್ಕಾರ ನೇಮಿಸುವ ಬಿಎಲ್‍ಓ.ಗಳು ಯಾರೆಂಬುದನ್ನು ತಿಳಿದುಕೊಂಡು ಸಂಪರ್ಕವಿಟ್ಟುಕೊಳ್ಳಿ. ಎಲ್ಲಾ ಸಮಸ್ಯೆಗಳಿಗೆ ಉತ್ತರ ಕೊಡಬೇಕಾಗಿರುವವರು ಬಿಎಲ್‍ಓ-ಟುಗಳೆ ಎಂದು ಹೇಳಿದರು.
ಇದನ್ನೂ ಓದಿ: ಸಾಗುವಳಿದಾರರಿಗೆ ಭೂಮಿಯ ಹಕ್ಕೇ ಸಿಗದಿದ್ದಾಗ ಭದ್ರಾ ನೀರು ಹರಿದು ಏನು ಪ್ರಯೋಜನೆ | ಬಿ.ಕಾಂತರಾಜ್
ಒಂದೊಂದು ಬೂತ್‍ನಲ್ಲಿ ಎಷ್ಟು ಮನೆಗಳಿವೆ. ಮತದಾರರು ಎಷ್ಟಿದ್ದಾರೆ. ಮತಪಟ್ಟಿಯಲ್ಲಿ ಹೆಸರುಗಳಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ. ಒಂದೊಂದು ಮತಕ್ಕೂ ಪ್ರಾಮುಖ್ಯತೆಯಿದೆ. ಹೊಸಬರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು ಎಷ್ಟು ಮುಖ್ಯವೋ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ತೆಗೆಸುವುದಕ್ಕೂ ಅಷ್ಟೆ ಒತ್ತು ಕೊಡಿ ಎಂದು ಬಿಎಲ್‍ಓ-ಟುಗಳಿಗೆ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಯನ್ನು ಆಗಿಂದಾಗ್ಗೆ ಭೇಟಿಯಾಗಿ ಸಮಸ್ಯೆಗಳ ಕುರಿತು ಮಾತನಾಡಿ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪಕ್ಷ ಗುರುತರವಾದ ಜವಾಬ್ದಾರಿ ಕೊಟ್ಟಿದೆ. ಹೊಳಲ್ಕೆರೆಯಲ್ಲಿ 289 ಬೂತ್‍ಗಳು, ಭರಮಸಾಗರ ಹೋಬಳಿಯಲ್ಲಿ 80 ಬೂತ್‍ಗಳಿವೆ. ಸರ್ಕಾರದಿಂದ ಪ್ರತಿ ಬೂತ್‍ಗೆ ಒಬ್ಬ ಬಿಎಲ್‍ಓ.ಗಳನ್ನು ನೇಮಿಸಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿಮ್ಮ ಮೇಲೆ ಗುರುತರವಾದ ಜವಾಬ್ದಾರಿಯಿದೆ ಎಂದು ಬಿಎಲ್‍ಓ.ಒನ್ ಮತ್ತು ಬಿಎಲ್‍ಓ-ಟುಗಳಿಗೆ ಎಚ್ಚರಿಸಿದರು.
ಇದನ್ನೂ ಓದಿ: GR ಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 16 ಲಕ್ಷ ವೆಚ್ಚದಲ್ಲಿ ಸಭಾಂಗಣ ನಿರ್ಮಾಣ | ಹಳೇ ವಿದ್ಯಾರ್ಥಿಗಳ ಕೊಡುಗೆ
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಕುಮಾರಣ್ಣ, ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಹೊಳಲ್ಕೆರೆ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸಿದ್ದೇಶ್, ಭರಮಸಾಗರ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಶೈಲೇಶ್‍ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಹೊಳಲ್ಕೆರೆ ಉಸ್ತುವಾರಿ ವೆಂಕಟೇಶ್‍ಯಾದವ್, ಪ್ರವೀಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ತಿಪ್ಪೇಸ್ವಾಮಿ, ಮಹೇಶಣ್ಣ, ಪುರಸಭೆ ಮಾಜಿ ಸದಸ್ಯರುಗಳಾದ ಮುರುಗೇಶ್, ಅಶೋಕ್, ಬಸವರಾಜ್‍ಯಾದವ್, ರಾಜಣ್ಣ, ಮಂಜುನಾಥ್, ತೀರ್ಥಣ್ಣ, ಮಾರುತೇಶ್, ಚಂದ್ರಣ್ಣ, ರಮೇಶಣ್ಣ, ರಾಜಣ್ಣ, ರೂಪ ಸುರೇಶ್, ಸುರೇಗೌಡ್ರು, ಶಿವಕುಮಾರ್, ಡಿ.ಸಿ.ಮೋಹನ್, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಡಲದ ಮತ್ತು ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಮುಖಂಡರು, ಕಾರ್ಯಕರ್ತರು ಪದಗ್ರಹಣ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

