ಮುಖ್ಯ ಸುದ್ದಿ
ಮಕರ ಸಂಕ್ರಾಂತಿ ಆಚರಣೆ | ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಚಿಣ್ಣರ ಸಂಭ್ರಮ

CHITRADURGA NEWS | 12 JANUARY 2024
ಚಿತ್ರದುರ್ಗ (CHITRADURGA): ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಶುಕ್ರವಾರ ಮಕರ ಸಂಕಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸೂರ್ಯ ದೇವರಿಗೆ ಸಮರ್ಪಿತ ಸುಗ್ಗಿ ಹಬ್ಬವಾದ ಸಂಕ್ರಾಂತಿ ಹಬ್ಬದಲ್ಲಿ ಶಾಲೆಯ 3 ಮತ್ತು 4 ನೇ ತರಗತಿ ಮಕ್ಕಳು ಹೊಸ ಬಟ್ಟೆ ತೊಟ್ಟು ಉತ್ಸಾಹದಿಂದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ರೂಬಿಗೆ ಸೀಮಂತ ಕಾರ್ಯ ಸಂಭ್ರಮ | ಆರತಿ ಬೆಳಗಿ ಸೋಬಾನೆ ಪದ ಹಾಡಿದ ಕುಟುಂಬಸ್ಥರು
ವಿದ್ಯಾರ್ಥಿಗಳು ಶಾಲೆಯ ಹೊರಾಂಗಣದ ಪ್ರವೇಶ ದ್ವಾರಕ್ಕೆ ಹೂವು, ತಳಿರು ತೋರಣ ಕಟ್ಟಿ ಕಬ್ಬು ಹಾಗೂ ವರ್ಣರಂಜಿತ ರಂಗೋಲಿಯಿಂದ ಅಲಂಕರಿಸಿ ನಂತರ ಪೊಂಗಲ್ ತಯಾರಿಸಿದರು. ಇವು ಅದೃಷ್ಟ ಮತ್ತು ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ. ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಧಾನ್ಯದ ರಾಶಿಗೆ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಸ್ವಾಮಿಗಳೆಂದರೆ ಮಾರುದ್ದ ಇದ್ದಂಥವರು ‘ಸಿಜಿಕೆ’ | ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಶಾಲೆ ಪ್ರಾಂಶುಪಾಲ ಎಂ.ಎಸ್.ಪ್ರಭಾಕರ್ ಮಾತನಾಡಿ, ‘ಸಂಕ್ರಾಂತಿ ಪೌರಾಣಿಕ ಮತ್ತು ವೈಜ್ಞಾನಿಕ ಹಿನ್ನೆಲೆಯುಳ್ಳ ಹಬ್ಬವಾಗಿದೆ. ಹಬ್ಬ ಒಂದೇ ಆದರೂ ಬೇರೆ ಬೇರೆ ರಾಜ್ಯಗಳಲ್ಲಿ ವಿಶಿಷ್ಟ ಹೆಸರಿನಿಂ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಪಡೆಯುತ್ತಾನೆ. ಉತ್ತರ ದಿಕ್ಕಿಗೆ ಪ್ರಯಾಣ ಮಾಡುವುದರ ಜೊತೆಗೆ ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ’ ಎಂದರು.
ಇದನ್ನೂ ಓದಿ: ತೋಟಕ್ಕೆ ಹೋಗಿದ್ದ ಮಹಿಳೆಯ ಕೊಲೆ
‘ಈ ದಿನದಂದು ಜಾನುವಾರಗಳನ್ನು ಕಿಚ್ಚಿಗೆ ಹಾಯಿಸುವುದು, ಎಳ್ಳು ಬೆಲ್ಲದಿಂದ ತಯಾರಿಸಿದ ಸಿಹಿತಿನಿಸು ತಿನ್ನುವುದು, ವಿವಿಧ ರೀತಿ ಆಚರಣೆಗಳು ಹಬ್ಬದ ಭಾಗವಾಗಿದೆ’ ಎಂದು ವಿವರಿಸಿದರು.
ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಸಂಸ್ಥೆಯ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್.ಅಮೋಘ್ ಇದ್ದರು.
