ಹೊಸದುರ್ಗ
ರೂಬಿಗೆ ಸೀಮಂತ ಕಾರ್ಯ ಸಂಭ್ರಮ | ಆರತಿ ಬೆಳಗಿ ಸೋಬಾನೆ ಪದ ಹಾಡಿದ ಕುಟುಂಬಸ್ಥರು

CHITRADURGA NEWS | 12 JANUARY 2024
ಚಿತ್ರದುರ್ಗ (CHITRADURGA): ‘ನಿಯತ್ತು’ ಎಂಬ ಪದವನ್ನು ನಾಯಿ ‘ಪೆಟೆಂಟ್’ ತೆಗೆದುಕೊಂಡಿದೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಆ ಪದ ನಾಯಿ ಪ್ರಮಾಣಿಕತೆಗೆ ಸೂಕ್ತವಾಗಿದೆ. ಜತೆಗೆ ನಾಯಿ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ನಾಯಿ ಎಂದರೆ ಎಲ್ಲರಿಗೂ ಪ್ರೀತಿ ಇದೆ.
ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ರಕ್ಷಿತ್ ಶೆಟ್ಟಿ ಅಭಿಯನದ ಕೆ.ಕಿರಣ್ ರಾಜ್ ನಿರ್ದೇಶನದಲ್ಲಿ ಬೆಳ್ಳಿತೆರೆಯಲ್ಲಿ ಸಂಚಲನ ಮೂಡಿಸಿದ ‘777 ಚಾರ್ಲಿ’ ಸಿನಿಮಾದ ಬಳಿಕ ನಾಯಿಗೆ ವಿಶೇಷ ಸ್ಥಾನಮಾನ ದೊರೆತಿದೆ.
ಅದೆಷ್ಟೋ ಮನೆಗಳಲ್ಲಿ ನಾಯಿಯೂ ಕೂಡ ಮನೆಯ ಸದಸ್ಯನಾಗಿ ಬಿಟ್ಟಿರುತ್ತದೆ. ಮಹಿಳೆಯೊಬ್ಬರು ಕ್ಯೂಟ್ ನಾಯಿಯೊಂದಕ್ಕೆ ಸೀಮಂತ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಸ್ವಾಮಿಗಳೆಂದರೆ ಮಾರುದ್ದ ಇದ್ದಂಥವರು ‘ಸಿಜಿಕೆ’ | ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ನಾಯಿಗೆ ನೀವು ಕೊಂಚ ಪ್ರೀತಿ ತೋರಿಸಿದರೆ ಸಾಕು, ಅದು ನಿಮಗೆ ಅಪಾರ ಪ್ರೀತಿ ನೀಡುತ್ತದೆ. ನೀವು ಬೇಡ ಅಂದರೂ ಸಾಕಷ್ಟು ಕಾಳಜಿ ತೋರಿಸುತ್ತದೆ. ಮನೆಯಲ್ಲಿ ನಾಯಿ ಸಾಕಿದರೆ, ಮನೆಯವರೊಂದಿಗೆಲ್ಲ ಬೆರೆತು ತಾವು ಕೂಡ ಮನೆಯ ಮಕ್ಕಳಂತೆ ಆಗಿ ಬಿಡುತ್ತದೆ. ಎಷ್ಟೋ ಮಂದಿ ತಾವು ಸಾಕಿರುವ ನಾಯಿಗೆ ಜನ್ಮ ದಿನ ಆಚರಿಸಿ ಕೇಕ್ ಕತ್ತರಿಸುವುದು, ಪ್ರವಾಸ ಕರೆದುಕೊಂಡು ಹೋಗಿ ಸಂತಸ ಪಡುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ.
ಇದೀಗ ಶ್ವಾನ ಪ್ರಿಯರೊಬ್ಬರು ತಮ್ಮ ಮುದ್ದಾದ ನಾಯಿ ಮರಿಗೆ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಸದ್ಯ ಈ ವೀಡಿಯೋ, ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ತೋಟಕ್ಕೆ ಹೋಗಿದ್ದ ಮಹಿಳೆಯ ಕೊಲೆ
ಅರಣ್ಯ ಇಲಾಖೆಯಲ್ಲಿ ವಾಚ್‍ಮನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹೊಸದುರ್ಗ ತಾಲ್ಲೂಕಿನ ಕರ್ಪೂರದಕಟ್ಟೆ ಗ್ರಾಮದ ಅಜಯ್ ಕುಟುಂಬ ತಾವು ಸಾಕಿದ ನಾಯಿ ರೂಬಿಗೆ ಸಾಂಪ್ರದಾಯಿಕವಾಗಿ ಸೀಮಂತ ಕಾರ್ಯವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಇದನ್ನೂ ಓದಿ: ಕಾರು ಡಿಕ್ಕಿ | ರಸ್ತೆ ಬದಿ ನಿಂತಿದ್ದ ವೃದ್ಧೆ ಸಾವು
ಮನೆಯ ಸದಸ್ಯರು ಹಾಗೂ ಅಕ್ಕ ಪಕ್ಕದ ಮನೆಯವರು ಹಣ್ಣು, ಸಿಹಿ ತಿನಿಸು ಹೂವು, ಸೀರೆ ಕುಪ್ಪಸವನ್ನು ರೂಬಿಗೆ ಅರ್ಪಿಸಿ, ಆರತಿ ಬೆಳಗಿ ಸೋಬಾನೆ ಪದ ಹಾಡಿ ಸಂಪ್ರದಾಯದಂತೆ ಸೀಮಂತ ಕಾರ್ಯ ನಡೆಸಿದರು.
13 ತಿಂಗಳ ಹಿಂದೆ ಬೆಂಗಳೂರಿನಿಂದ ತಂದ ಲ್ಯಾಬ್ರಡಾರ್ ಜಾತಿಯ ನಾಯಿಯನ್ನು ಮನೆಯ ಎಲ್ಲರೂ ಪ್ರೀತಿಯಿಂದ ಸಾಕಿದ್ದೇವೆ. ಮನೆಯ ಒಬ್ಬ ಸದಸ್ಯೆಯಂತೆ ಕಾಣುತ್ತಿದ್ದೇವೆ. ರೂಬಿ ಈಗ 50 ದಿನಗಳ ಗರ್ಭಿಣಿಯಾಗಿದ್ದು, ಹೆಣ್ಣು ಮಕ್ಕಳ ಆಸೆಯಂತೆ ಸೀಮಂತ ಕಾರ್ಯ ಮಾಡಿದ್ದೇವೆ ಎನ್ನುತ್ತಾರೆ ಕುಟುಂಬಸ್ಥರು.
