ಕ್ರೈಂ ಸುದ್ದಿ
ತೋಟಕ್ಕೆ ಹೋಗಿದ್ದ ಮಹಿಳೆಯ ಕೊಲೆ

Published on
CHITRADURGA NEWS | 11 JANUARY 2024
ಚಿತ್ರದುರ್ಗ: ತೋಟಕ್ಕೆ ಹೋಗಿ ಮನೆಗೆ ಬರುತ್ತಿದ್ದ ವೇಳೆ ಮಹಿಳೆಯೊಬ್ಬರ ಕೊಲೆಯಾಗಿರುವ ಘಟನೆ ಗುರುವಾರ ನಡೆದಿದೆ.
ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದ 55 ವರ್ಷದ ಸುಂದರಮ್ಮ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಹಿಳೆ.
ಬೆಳಗ್ಗೆ ಮನೆಯಿಂದ ಹೋಗಿದ್ದ ಸುಂದರಮ್ಮ ಎಷ್ಟು ಹೊತ್ತಾದರೂ ಮನೆಗೆ ಬಂದಿರಲಿಲ್ಲ. ಒಂದೆರಡು ತಾಸು ನೋಡಿದ ನಂತರ ಮನೆಯವರು ಹುಡುಕಾಟ ನಡೆಸಿದ್ದಾರೆ. ಸಂಜೆ ವೇಳೆಗೆ ಊರ ಹೊರಗಿನ ಗೋಮಾಳದ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಮಗುವಿನ ಮೇಲಿನ ವಾತ್ಸಲ್ಯಕ್ಕಿಂತ ಗಂಡನ ಮೇಲಿನ ಹಠವೇ ಹೆಚ್ಚಾಯ್ತೆ
ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಹೊರವಲಯದ ಗೋಮಾಳದ ಬಳಿ ಮಹಿಳೆಯ ಮೃತ ದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಚಿಕ್ಕಜಾಜೂರು ಪೊಲೀಸ್ ಠಾಣೆ ಪಿಎಸ್‍ಐ ದೀಪಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Continue Reading
Related Topics:Chikkajajur, Chikkandawadi, Chitradurga, Holalkere, Murder of woman, Police, ಚಿಕ್ಕಜಾಜೂರು, ಚಿಕ್ಕಂದವಾಡಿ, ಚಿತ್ರದುರ್ಗ, ಪೊಲೀಸ್, ಮಹಿಳೆಯ ಕೊಲೆ, ಹೊಳಲ್ಕೆರೆ

Click to comment