ಕ್ರೈಂ ಸುದ್ದಿ
ಕಾರು ಡಿಕ್ಕಿ | ರಸ್ತೆ ಬದಿ ನಿಂತಿದ್ದ ವೃದ್ಧೆ ಸಾವು

CHITRADURGA NEWS | 11 JANUARY 2024
ಹಿರಿಯೂರು: ರಸ್ತೆ ಬದಿ ನಿಂತಿದ್ದ ವೃದ್ಧೆಯೊಬ್ಬರಿಕೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಹಿರಿಯೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಗುರುಗುಂಟ ಗ್ರಾಮದ 56 ವರ್ಷದ ಬಿ.ಖಾಜಾ ಮೃತ ವೃದ್ದೆ.
ಕೂಲಿ ಕೆಲಸಕ್ಕಾಗಿ ಸ್ವಗ್ರಾಮ ಗುರುಗುಂಟ ಗ್ರಾಮದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ರಾತ್ರಿ ಊರಿನಿಂದ ಬಸ್ ಹತ್ತಿದ್ದಾರೆ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ KSRTC ಬಸ್ ಹಿರಿಯೂರು ನಗರದ ಸಮೀಪದ ಸರ್ವೀಸ್ ರಸ್ತೆಯಲ್ಲಿ ಸ್ವಾಮಿಯಪ್ಪ ಹೋಟೆಲ್ ಬಳಿ ನಿಲ್ಲಿಸಿದೆ.
ಇದನ್ನೂ ಓದಿ: ತೋಟಕ್ಕೆ ಹೋಗಿದ್ದ ಮಹಿಳೆಯ ಕೊಲೆ

ಈ ವೇಳೆ ವೃದ್ಧೆ ಖಾಜಾ ಅವರ ಮೊಮ್ಮಗಳು ಮೂತ್ರ ವಿಸರ್ಜನೆಗೆ ಬಸ್ಸಿನಿಂದ ಇಳಿದಿದ್ದಾರೆ. ಮೊಮ್ಮಗಳ ಜೊತೆಗೆ ಬಂದ ಖಾಜಾ ಸರ್ವೀಸ್ ರಸ್ತೆಯ ಬದಿಯಲ್ಲಿ ಮೊಮ್ಮಗಳನ್ನು ಕಾಯುತ್ತಾ ನಿಂತಿದ್ದಾರೆ.
ಚಿತ್ರದುರ್ಗ ಕಡೆಯಿಂದ ವೇಗವಾಗಿ ಬಂದ ಕಾರೊಂದು ವೃದ್ಧೆಗೆ ಡಿಕ್ಕಿ ಹೊಡೆದಿದ್ದು, ಕಾರು ನಿಲ್ಲಿಸದೆ ಹೋಗಿದ್ದಾನೆ.
ತಕ್ಷಣ ಅಂಬ್ಯುಲನೆ ಕರೆಯಿಸಿಕೊಂಡು ಖಾಜಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಹಿರಿಯೂರು ನಗರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
