Connect with us

    ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ | ಹಳ್ಳಿ ಹಳ್ಳಿಗಳಲ್ಲೂ ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ

    ಚಳ್ಳಕೆರೆಯಲ್ಲಿ 555 ಕೆಜಿ ಲಾಡು ವಿತರಣೆಗೆ ಸಿದ್ಧತೆ:

    ಮುಖ್ಯ ಸುದ್ದಿ

    ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ | ಹಳ್ಳಿ ಹಳ್ಳಿಗಳಲ್ಲೂ ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | JANUARY 2024

    ಚಿತ್ರದುರ್ಗ: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರದ ಲೋಕಾರ್ಪಣೆ ಹಾಗೂ ಬಾಲ ರಾಮ ಪ್ರಾಣ ಪ್ರತಿಷ್ಠಾಪನೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ.

    ಇಡೀ ದೇಶ ಈ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಹಳ್ಳಿ, ನಗರ, ಪಟ್ಟಣಗಳಲ್ಲಿ ರಾಮೋತ್ಸವಕ್ಕೆ ಸಜ್ಜಾಗಿವೆ.
    ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹಳ್ಳಿಗಳ, ನಗರಗಳ ದೇವಸ್ಥಾನಗಳಲ್ಲಿ ರಾತ್ರಿಯಿಡೀ ಸಿದ್ಧತೆಗಳು ನಡೆದಿವೆ.

    ಇದನ್ನು ಓದಿ: ಅಯೋಧ್ಯೆ ತಲುಪಿದ ಕೋಟೆನಾಡಿನ ಮಠಾಧೀಶರು ಏನು ಹೇಳಿದ್ದಾರೆ ಗೊತ್ತಾ..?

    ಕೇಸರಿ ಬಂಟಿಂಗ್ಸ್, ಶ್ರೀರಾಮನ ಫ್ಲೆಕ್ಸ್, ಚಪ್ಪರ ಹಾಕಿ ವಿಶೇಷ ಪೂಜೆ, ಅನ್ನ ಸಂತರ್ಪಣೆಗೆ ಸಿದ್ಧತೆಗಳು ನಡೆದಿವೆ.

    ಹಿರಿಯೂರು ತಾಲೂಕಿನ ವಾಣಿವಿಲಾಸಪುರದಲ್ಲಿ ಮುಖ್ಯ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಶ್ರೀರಾಮನ ಭಾವಚಿತ್ರದ ಫ್ಲೆಕ್ಸ್, ಎಲ್‍ಇಡಿ ಸ್ಕ್ರೀನ್ ಹಾಕಿರುವ ದೃಶ್ಯ ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿದೆ.

     ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ

    ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ

    ಹೊಸದುರ್ಗ ತಾಲೂಕಿನ ಚನ್ನಸಮುದ್ರದಲ್ಲಿ ಗ್ರಾಮದ ಯುವಕರು ರಾತ್ರಿಯಿಡೀ ದೇವಸ್ಥಾನದ ಬಳಿ ಅಲಂಕಾರ ಮಾಡಿದ್ದಾರೆ, ಹೊಸದುರ್ಗ ತಾಲೂಕಿನ ನಾಕೀಕೆರೆಯಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

    ಚಳ್ಳಕೆರೆಯಲ್ಲಿ 555 ಕೆಜಿ ಲಾಡು ವಿತರಣೆಗೆ ಸಿದ್ಧತೆ:

    ಚಳ್ಳಕೆರೆ ನಗರದಲ್ಲಿ ವಿವಿಧ ಉದ್ಯಮಿಗಳು ಸೇರಿ 500 ವರ್ಷಗಳ ಹೋರಾಟದ ಫಲವಾಗಿ ತಲೆ ಎತ್ತಿರುವ ಭವ್ಯ ರಾಮ ಮಂದಿರದ ಸಾರ್ಥಕತೆಯ ಫಲವಾಗಿ 555 ಕೆ.ಜಿ ಲಾಡು ಮಾಡಿಸಿ, ಸುಮಾರು 1 ಲಕ್ಷ ಪಾಕೆಟ್‍ಗಳಿಗೆ ಹಾಕಿ ಸಾರ್ವಜನಿಕರಿಗೆ ಪ್ರಸಾದ ರೂಪದಲ್ಲಿ ವಿತರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಚಿತ್ರದುರ್ಗದಲ್ಲಿ ಭರ್ಜರಿ ಸಿದ್ಧತೆ:

    ಚಿತ್ರದುರ್ಗ ಜಿಲ್ಲೆಯಲ್ಲಿ ಶ್ರೀರಾಮನ ಹೆಜ್ಜೆ ಗುರುತುಗಳಿರುವ ಹೊಸದುರ್ಗ ತಾಲೂಕಿನ ದಶರಥ ರಾಮೇಶ್ವರ, ಹಾಲು ರಾಮೇಶ್ವರ, ಹೊಳಲ್ಕೆರೆ ತಾಲೂಕಿನ ರಾಮಗಿರಿ ಬೆಟ್ಟದ ಕರಿಸಿದ್ದೇಶ್ವರ, ಮೊಳಕಾಲ್ಮೂರು ತಾಲೂಕಿನ ಜಟ್ಟಂಗಿ ರಾಮೇಶ್ವರ ದೇವಸ್ಥಾನಗಳಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವೇಳೆಗೆ ವಿಶೇಷ ಪೂಜೆ ಸಲ್ಲಿಸಲು ದೇವಸ್ಥಾನದ ಸಮಿತಿಗಳು ತಯಾರಿ ಮಾಡಿಕೊಂಡಿವೆ.

     ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ

    ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ

    ಇದನ್ನೂ ಓದಿ: ಚಿತ್ರದುರ್ಗ ಬಂದ್‍ಗೆ ಬಿಜೆಪಿ ಬೆಂಬಲ

    ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 7 ಗಂಟೆಗೆ ಶ್ರೀ ಆಂಜನೇಯ ಸ್ವಾಮಿ, ಶ್ರೀ ಮಹಾವಿಷ್ಣು ದೇವತೆಗಳಿಗೆ ಫಲ ಪಂಚಾಮೃತ ಅಭಿμÉೀಕ, ವಿಶೇಷ ಅಲಂಕಾರ, ಅರ್ಚನೆ, ತಾರಕ ಹೋಮ ಹೂವಿನ ಅಲಂಕಾರ ಹಾಗೂ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

    ಸಂಜೆ ಉತ್ತರಾಭಿಮುಖವಾಗಿ ಅಯ್ಯಪ್ಪ ಸ್ವಾಮಿ ಗರ್ಭಗುಡಿ ಹಾಗೂ ಶ್ರೀ ಆಂಜನೇಯ ಸ್ವಾಮಿ ಆವರಣದಲ್ಲಿ ಸಂಜೆ 6-30 ದೀಪಾರಾಧನೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಜ್ಜಿಗೆ ಹಾಗೂ ಪುಳಿಯೋಗರೆ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಶ್ರೀ ಮಹಾಲಕ್ಷ್ಮಿ ದೇವಸ್ಥಾನ:

    ನಗರದ ಕೆಳಗೋಟೆಯ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವಾಲದಯ ಸೇವಾ ಟ್ರಸ್ಟ್‍ನಿಂದ ಶ್ರೀ ರಾಮಲಲಾರ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆ ನಡೆಸಲಾಗುತ್ತದೆ ಎಂದು ದೇವಸ್ಥಾನದ ಧರ್ಮದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ

    ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ

    ಇದನ್ನೂ ಓದಿ: ದೇವರ ವಿಗ್ರಹಕ್ಕೆ ಬಳಸುವ ಕಪ್ಪು ಶಿಲೆ ವಶಕ್ಕೆ

    ಸಂಕಷ್ಟಹರ ಶ್ರೀ ಸಿದ್ದಿವಿನಾಯಕ, ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ:

    ನಗರದ ಹೊಳಲ್ಕೆರೆ ರಸ್ತೆಯ ಹೌಸಿಂಗ್ ಬೋರ್ಡ್ ಕಾಲನಿಯ ಪಿ ಅಂಡ್ ಟಿ ಕ್ವಾಟ್ರಸ್ ಬಳಿಯ 53 ಅಡಿ ಎತ್ತರದ ಸಂಕಷ್ಟಹರ ಶ್ರೀ ಸಿದ್ದಿವಿನಾಯಕ ಹಾಗೂ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಜ.22ರ ಬೆಳಗ್ಗೆ 8ಕ್ಕೆ ಅಭಿಷೇಕ, ವಿಶೇಷ ಅಲಂಕಾರದೊಂದಿಗೆ ಮಹಾ ಮಂಗಳಾರತಿ, ಬೆಳಗ್ಗೆ 9ಕ್ಕೆ ಪ್ರಸಾದ ವಿನಿಯೋಗಿಸಲಾಗುತ್ತದೆ ಎಂದು ಬೆನಕನ ಬಳಗದ ಅಧ್ಯಕ್ಷ ಗುರುಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ನೂರಾರು ಕಡೆ ಎಲ್‍ಇಡಿ ಪರದೆ, ಅನ್ನಸಂತರ್ಪಣೆ:

    ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ, ಬಸವೇಶ್ವರ ವೃತ್ತದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ, ಜೆಸಿಆರ್ ವೃತ್ತದಲ್ಲಿರುವ ಗಣಪತಿ ದೇವಸ್ಥಾನ, ಜೋಗಿಮಟ್ಟಿ ರಸ್ತೆಯ ನಾಗರ ಕಟ್ಟೆ ಸೇರಿದಂತೆ ಈ ರಸ್ತೆಯ ಮೂರು ಕಡೆಗಳಲ್ಲಿ, ಚಳ್ಳಕೆರೆ ಗೇಟ್ ಸೇರಿದಂತೆ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಎಲ್‍ಇಡಿ ಪರದೆ ಅಳವಡಿಸಿ ರಾಮಲಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮ ಮುಕ್ತಾಯವಾದ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top