ಹೊಸದುರ್ಗ
ದೇವರ ವಿಗ್ರಹಕ್ಕೆ ಬಳಸುವ ಕಪ್ಪು ಶಿಲೆ ವಶಕ್ಕೆ | ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಬೃಹದಾಕಾರದ ಗ್ರಾನೈಟ್ | ಗಣಿ ಇಲಾಖೆ ಅಧಿಕಾರಿಗಳ ದಾಳಿ

CHITRADURGA NEWS | 20 JANUARY 2024
ಚಿತ್ರದುರ್ಗ: ದೇವರ ವಿಗ್ರಹ ನಿರ್ಮಾಣಕ್ಕೆ ಬಳಕೆ ಮಾಡುವ ಬೃಹತ್ ಗಾತ್ರದ ಬ್ಲಾಕ್ ಗ್ರಾನೈಟ್ (ಕಪ್ಪು ಶಿಲೆ) ಅನ್ನು ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಹೆಗ್ಗೆರೆ ಬೆಟ್ಟದಿಂದ ಸಾಗಾಣೆ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಕಪ್ಪು ಶಿಲೆಯನ್ನು ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ದಾಳಿ ನಡೆಸಿದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ತಲುಪಿದ ಕೋಟೆನಾಡಿನ ಮಠಾಧೀಶರು ಏನು ಹೇಳಿದ್ದಾರೆ ಗೊತ್ತಾ..?
72 ವೀಲ್ ಅಳವಡಿಸಿದ ಬೃಹತ್ ಟ್ರಕ್‍ನಲ್ಲಿ ಈ ಹೆಬ್ಬಂಡೆಯನ್ನು ಸಾಗಿಸಲಾಗುತ್ತಿತ್ತು. ಇದನ್ನು ಸಾಮಾನ್ಯವಾಗಿ ದೇವರ ವಿಗ್ರಹಗಳನ್ನು ಕೆತ್ತನೆ ಮಾಡಲು ಬಳಕೆ ಮಾಡುತ್ತಾರೆ ಎನ್ನಲಾಗಿದೆ.


ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಗಣಿ ಇಲಾಖೆ ಅಧಿಕಾರಿಗಳು ಬೆನ್ನು ಹತ್ತಿರುವ ಮಾಹಿತಿ ತಿಳಿದ ಲಾರಿ ಚಾಲಕ ಹಾಗೂ ಮತ್ತಿತರೆ ಸಿಬ್ಬಂದಿ ಬೃಹತ್ ಶಿಲೆ ಇರುವ ವಾಹನವನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಚಿತ್ರದುರ್ಗ ಗಣಿ ಇಲಾಖೆ ಉಪನಿರ್ದೇಶಕರಾದ ಮಹೇಶ್ ಮತ್ತು ಶ್ರಾವಣಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ತುಮಕೂರಿನಿಂದ ಲಾರಿಯನ್ನು ಬೆನ್ನಟ್ಟಿದ್ದು, ಹುಳಿಯಾರ್ ವ್ಯಾಪ್ತಿಯಲ್ಲಿ ಟ್ರಕ್ ತಡೆಯಲಾಗಿದೆ. ತುಮಕೂರು ಜಿಲ್ಲೆಯ ಹುಳಿಯಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
