CHITRADURGA NEWS | 01 MAY 2026
ಇಂದಿನ ಒತ್ತಡದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಮೂತ್ರಪಿಂಡದ ಕಲ್ಲುಗಳು ಮತ್ತು ಪಿತ್ತಗಲ್ಲುಗಳ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿವೆ. ಅದರಲ್ಲೂ ಈ ಬೇಸಿಗೆಕಾಲದಲ್ಲಿ ಸರಿಯಾಗಿ ನೀರು ಕುಡಿಯದ ಕಾರಣ ಈ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಕಿಡ್ನಿ ಕಲ್ಲುಗಳಿಂದ ಉಂಟಾಗುವ ನೋವು ತುಂಬಾ ಅಸಹನೀಯವಾಗಿರುತ್ತದೆ ಮತ್ತು ಇದು ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಅದನ್ನು ಪರಿಹರಿಸಿಕೊಳ್ಳುವುದು ಅವಶ್ಯಕ. ಅದಕ್ಕಾಗಿ ನೀವು ಆಯುರ್ವೇದದಲ್ಲಿ ತಿಳಿಸಿದ ಈ ಮನೆಮದ್ದನ್ನು ಬಳಸಬಹುದು. ಆಯುರ್ವೇದ ತಜ್ಞರ ಪ್ರಕಾರ, ದಾಸವಾಳ ಹೂವಿನ ಪುಡಿ ಕಿಡ್ನಿಯ ಕಲ್ಲುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗಾದ್ರೆ ಅದನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯೋಣ.
ದಾಸವಾಳ ಹೂವಿನ ಪುಡಿ ಸೇವನೆಯಿಂದಾಗುವ ಪ್ರಯೋಜನಗಳು
ಕಲ್ಲುಗಳನ್ನು ಒಡೆಯುವಲ್ಲಿ ಸಹಾಯಕ:
ದಾಸವಾಳದ ಹೂವುಗಳು ನೈಸರ್ಗಿಕ ಆಮ್ಲೀಯ ಗುಣಗಳನ್ನು ಹೊಂದಿವೆ. ಇದು ಕಲ್ಲುಗಳನ್ನು ಸಣ್ಣ ತುಂಡುಗಳಾಗಿ ಒಡೆಯಲು ಸಹಾಯ ಮಾಡುತ್ತದೆ.
ಡಿಟಾಕ್ಸಿಂಗ್:
ಇದು ದೇಹವನ್ನು ಡಿಟಾಕ್ಸಿಂಗ್ ಮಾಡಲು ಸಹಾಯ ಮಾಡುತ್ತದೆ ಮತ್ತು ಕಿಡ್ನಿಗಳಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ದಾಸವಾಳವು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಆಮ್ಲೀಯತೆಯನ್ನು ನಿಯಂತ್ರಿಸುತ್ತದೆ. ಅಲ್ಲದೇ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‍ಗಳು, ವಿಟಮಿನ್ ಸಿ ಮತ್ತು ನೈಸರ್ಗಿಕ ಉರಿಯೂತ ನಿವಾರಕ ಗುಣಗಳು ಸೋಂಕುಗಳಿಂದ ರಕ್ಷಿಸುತ್ತದೆ.
ದಾಸವಾಳದ ಪುಡಿಯನ್ನು ಹೇಗೆ ತಯಾರಿಸುವುದು?
ನಿಮ್ಮ ಮನೆಯಲ್ಲಿ ದಾಸವಾಳದ ಗಿಡವಿದ್ದರೆ, ಅದರ ತಾಜಾ ಹೂವುಗಳನ್ನು ಕಿತ್ತು ತೊಳೆದುಕೊಳ್ಳಿ. ನೆರಳಿನಲ್ಲಿ ಒಣಗಿಸಿ. ಒಣಗಿದ ನಂತರ, ಅವುಗಳನ್ನು ನುಣ್ಣಗೆ ಪುಡಿ ಮಾಡಿ.
ದಾಸವಾಳದ ಪುಡಿಯ ಕಷಾಯ ತಯಾರಿಸುವ ವಿಧಾನ
1 ಟೀಚಮಚ ದಾಸವಾಳದ ಪುಡಿಯನ್ನು 1 ಗ್ಲಾಸ್ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ರಾತ್ರಿ ಊಟದ ಒಂದು ಗಂಟೆಯ ನಂತರ ಕುಡಿಯಿರಿ. ಇದಾದ ನಂತರ ಬೇರೆ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ.
ದಾಸವಾಳದ ಪುಡಿ ನೈಸರ್ಗಿಕವಾಗಿ ಸಿಗುವಂತಹ ಮತ್ತು ಪರಿಣಾಮಕಾರಿ ಪರಿಹಾರವಾಗಿದ್ದು ಅದು ಕಿಡ್ನಿಯ ಕಲ್ಲುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದನ್ನು ಸರಿಯಾಗಿ ಮತ್ತು ನಿಯಮಿತವಾಗಿ ಸೇವಿಸುವುದರಿಂದ ಕಿಡ್ನಿ ಕಲ್ಲುಗಳಿಂದ ಪರಿಹಾರ ದೊರೆಯುವುದಲ್ಲದೆ, ನಿಮ್ಮ ಕಿಡ್ನಿಗಳು ಮತ್ತು ಪಿತ್ತಕೋಶವನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿರಿಸುತ್ತದೆ. ಆದರೆ ಕಿಡ್ನಿಯ ಕಲ್ಲುಗಳ ಸಮಸ್ಯೆ ಹೆಚ್ಚಾದ್ದರೆ, ವೈದ್ಯರನ್ನು ಸಂಪರ್ಕಿಸಿ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

