CHITRADURGA NEWS | 28 MARCH 2025
ಹೊಸದುರ್ಗ: ತಾಲೂಕಿನ ಎಚ್. ರೊಪ್ಪ ಗ್ರಾಮದಲ್ಲಿ ನಡೆದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ನೂತನ ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿದ್ದರು.
Also Read: ದೆಹಲಿ ಗಡಿಯಲ್ಲಿ ಚಳುವಳಿ ನಿರತ ರೈತರ ಮೇಲೆ ಪಂಜಾಬ್ ಸರ್ಕಾರ ದೌರ್ಜನ್ಯ | ಸೂಕ್ತ ಕ್ರಮಕ್ಕೆ ಮನವಿ

ಈ ವೇಳೆ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿ, ದೇವಸ್ಥಾನಕ್ಕೆ ಕಳಸ ಇಡಲು ತೋರುವ ಆಸಕ್ತಿಯನ್ನು ಮಾನವ ಸನ್ನಡತೆ ಸದಾಚಾರ ಸದ್ಗುಣ ಸುಜ್ಞಾನ ಬೆಳೆಸಿಕೊಳ್ಳಲು ಆಸಕ್ತಿ ವಹಿಸಬೇಕು ಸನ್ನಡತೆಯಿಂದ ಸರಳತೆ ಪ್ರಾಪ್ತಿ ಸುಜ್ಞಾನದಿಂದ ಸೃಜನಶೀಲ ಪ್ರಾಪ್ತಿ ಎಂದು ಭಕ್ತರಿಗೆ ಕಿವಿಮಾತು ಹೇಳಿದರು.
ಇತ್ತೀಚಿಗೆ ಗ್ರಾಮೀಣ ಪ್ರದೇಶದಲ್ಲಿ ದೇವಸ್ಥಾನಗಳ ನಿರ್ಮಾಣ ಹೆಚ್ಚಾಗಿದ್ದು ಇದರ ಜೊತೆಗೆ ಶಿಕ್ಷಣಕ್ಕೆ ಆರೋಗ್ಯಕ್ಕೆ ಒತ್ತು ನೀಡಬೇಕು ಅಕ್ಷರ ವಾರಸದಾರರಾದರೆ ಹಣವು ಸಹಜವಾಗಿ ಬರುತ್ತದೆ ಹಾಗಾಗಿ ಅರಿವು.
ಅಕ್ಷರ, ಹೆಚ್ಹೆಚ್ಚು ಬಳಸಿಕೊಂಡಾಗ ಆಧ್ಯಾತ್ಮ ಪ್ರಾಪ್ತಿಯಾಗುತ್ತದೆ. ಎಚ್.ರೊಪ್ಪ ನಗರದಿಂದ ದೂರ ಇರುವ ಕಾರಣ ಕಾಯಕವೇ ಕೈಲಾಸ ಎಂಬ ಮಂತ್ರವನ್ನು ಅಳವಡಿಸಿಕೊಂಡು 40 ಮನೆಯ ಗ್ರಾಮದಲ್ಲಿ ಕೇವಲ ಎರಡು ಮೂರು ಜನಕ್ಕೆ ಮಾತ್ರ ಬಿಪಿ, ಶುಗರ್ ಇರುವುದೇ ಈ ಜನಗಳ ಕಾಯಕ ಪ್ರಜ್ಞೆಯನ್ನು ಕೋರುತ್ತದೆ ತಾವಾಯ್ತು ತಮ್ಮ ಕಾಯಕವಾಯಿತು ಎಂದು ನಂಬಿ ಬಸವಣ್ಣವರ ತತ್ವವಾದ ಕಾಯಕ.
Also Read: ಹೊಳಲ್ಕೆರೆ ಪೊಲೀಸರ ಕಾರ್ಯಾಚರಣೆ | 6 ಮಂದಿ ಜೂಜುಕೋರರ ಬಂಧನ | ರೂ.2.25 ಲಕ್ಷ ಹಣ ಜಪ್ತಿ
ದಾಸೋಹವನ್ನು ಚಾಚು ತಪ್ಪದೇ ಪಾಲಿಸಿ ಶ್ರೀಮಠದೊಂದಿಗೆ ಅನನ್ಯವಾಗಿ ಇರುವುದನ್ನು ನಾವು ಕಳೆದ 25 ವರ್ಷದಿಂದ ಮನಗಂಡಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಎಚ್. ರೊಪ್ಪ ಗ್ರಾಮ ಚಿಕ್ಕ ಗ್ರಾಮವಾದರೂ ಚೊಕ್ಕ ಜೀವನವನ್ನು ನಡೆಸಿ ಕಾಯಕದ ಮಹತ್ವವನ್ನು ಅರಿತು ಯಾವುದೇ ಸಂಘರ್ಷಗಳಿಗೆ ದಾರಿ ಮಾಡಿಕೊಡದೆ ಕೇವಲ ಕಾಯಕಕ್ಕೆ ಒತ್ತುಕೊಟ್ಟು ಆರೋಗ್ಯವನ್ನು ಕಾಪಾಡಿಕೊಂಡಿರುವುದೇ ಸೋಜಿಗ. ನಗರ ಪ್ರದೇಶದಿಂದ ದೂರ ಇರುವ ಗ್ರಾಮಗಳಲ್ಲಿ ದುಶ್ಚಟ ಡಾಬಾ, ಸಂಸ್ಕೃತಿ, ದುಂದು ವೆಚ್ಚ ಇರುವುದಿಲ್ಲ ನಿಮ್ಮ ಗ್ರಾಮನು ಆ ಸಾಲಿನಲ್ಲಿ ನಿಲ್ಲುತ್ತದೆ ಎಂದು ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು.
ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಆಂಜನೇಯನೆಂದರೆ ಸೇವೆ ಕಿಂಕರತ್ವ ನಂಬಿಕೆ ಹಾಗೆ ಜನಗಳು ಆಂಜನೇಯ ದೇವಸ್ಥಾನ ಕಟ್ಟಿದಂತೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆಯಬೇಕೆಂದು ಎಂದು ತಿಳಿಸಿದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ನಿವೃತ್ತ ಶಿಕ್ಷಕ ಆರ್.ಬಿ.ಹನುಮಂತಪ್ಪ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಪ್ಪ ವಹಿಸಿದ್ದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಂ.ಲಕ್ಷ್ಮಣ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜ್ಜಪ್ಪ, ನಿರ್ದೇಶಕ ಗುಳಿಹಟ್ಟಿ ಹಾಲಸಿದ್ದಪ್ಪ, ದೊಡ್ಡಘಟ್ಟದ ಮಹಾಂತೇಶ್, ನಾಗತಿಹಳ್ಳಿ ಶಿವಣ್ಣ, ತಣಿಗೆಕಲ್ಲು ಶಂಕರ್ಮೂರ್ತಿ, ಸಾಹಿತಿ ಬಸವರಾಜಪ್ಪ ಸೇರಿದಂತೆ ಎಚ್. ರೊಪ್ಪದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
