CHITRADURGA NEWS | 28 MARCH 2025
ಚಿತ್ರದುರ್ಗ: ಮೊಬೈಲ್ ಎನ್ನುವ ಸಾಧನ ನಮ್ಮನ್ನು ಆಳುವುದರ ಜೊತೆಗೆ ಮರಳುಗೊಳಿಸಿ ಕ್ರಿಯಾಶೀಲತೆ ಕಸಿದುಕೊಂಡು, ಜಡತ್ವಕ್ಕೆ ತಳ್ಳಿರುವುದು ಆರೋಗ್ಯಪೂರ್ಣ ಸಮಾಜದ ಬೆಳವಣಿಗೆಗೆ ಪೂರಕವಾದುದಲ್ಲ ಎಂದು ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
Also Read: ದೆಹಲಿ ಗಡಿಯಲ್ಲಿ ಚಳುವಳಿ ನಿರತ ರೈತರ ಮೇಲೆ ಪಂಜಾಬ್ ಸರ್ಕಾರ ದೌರ್ಜನ್ಯ | ಸೂಕ್ತ ಕ್ರಮಕ್ಕೆ ಮನವಿ

ನಗರದ ಎಸ್.ಜೆ.ಎಂ. ಪಾಲಿಟಿಕ್ನಿಕ್‌ನಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಪಾಲಿಫೆಸ್ಟ್-2025ರ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು,
ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಗೆ ಬೇಕಾದ ಆರೋಗ್ಯಕರ ಅಭಿರುಚಿಗಳನ್ನು ರೂಢಿಸಿಕೊಳ್ಳುವತ್ತ ವಿದ್ಯಾರ್ಥಿಗಳ ಗಮನ ಕೇಂದ್ರೀಕೃತವಾಗಬೇಕಿದೆ.
ನಮ್ಮ ಜೀವನ ಕ್ರೀಡಾ ಮಾದರಿಯಲ್ಲಿರಬೇಕು. ಕ್ರೀಡೆ ವ್ಯಕ್ತಿತ್ವ ರೂಪಿಸುವ ಜತೆಗೆ ಏಕಾಗ್ರತೆಯನ್ನು ತಂದುಕೊಡುತ್ತದೆ. ನಾವು ಈಗ ಕ್ರೀಡೆಗಳಿಂದ ವಿಮುಖರಾಗುತ್ತಿದ್ದೆವೆ. ಕಳೆದೆರಡು ದಶಕಗಳಲ್ಲಿ ಎಲ್ಲಾ ಆಟದ ಮೈದಾನಗಳು ಬಣಗುಡುತ್ತಿವೆ. ಹಿಂದೆ ಎಲ್ಲಾ ಮೈದಾನಗಳು ಆಟಗಾರರಿಂದ ತುಂಬಿ ತುಳುಕುತ್ತಿದ್ದವು.
Also Read: ಹೊಳಲ್ಕೆರೆ ಪೊಲೀಸರ ಕಾರ್ಯಾಚರಣೆ | 6 ಮಂದಿ ಜೂಜುಕೋರರ ಬಂಧನ | ರೂ.2.25 ಲಕ್ಷ ಹಣ ಜಪ್ತಿ
ಪಠ್ಯದ ಜೊತೆಗೆ ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮೌಲ್ಯಯುತ ಚಿಂತನೆಗಳ ಅಧ್ಯಯನವು ಮಾನಸಿಕ ಬೆಳವಣಿಗೆಗೆ ಪ್ರೇರಕ ಶಕ್ತಿಯಾಗಬಲ್ಲವು ಎಂದರು.
ಆಧುನಿಕತೆಗೆ ಒಗ್ಗಿಕೊಂಡತೆ ಮಾನವೀಯತೆ, ಮನುಷ್ಯತ್ವ ನಮ್ಮಿಂದ ದೂರವಾಗಿ ದ್ವೇಷ, ಅಸೂಯೆ ತುಂಬಿ ತುಳುಕುತ್ತಿದೆ. ಒಳ್ಳೆಯ ಹವ್ಯಾಸಗಳು ನಮ್ಮಿಂದ ದೂರವಾಗುತ್ತಿವೆ. ತಂದೆ ತಾಯಿಗಳು ನಮ್ಮ ಮಕ್ಕಳು ಚೆನ್ನಾಗಿ ಓದಿ ಅದ್ಯಯನಶೀಲರಾಗಿ, ಒಳ್ಳೆಯ ಹೆಸರು ಮತ್ತು ಉದ್ಯೋಗವನ್ನು ಪಡೆಯಲಿ ಎಂಬ ಸದಿಚ್ಛೆಯಿಂದ ತಮ್ಮ ಬದುಕನ್ನೇ ತ್ಯಾಗ ಮಾಡುತ್ತಾರೆ.
ಮಕ್ಕಳ ಹಿತಕ್ಕೆ ಅವರ ಕೊಡುಗೆ ಅಪಾರವಾದುದು. ಅಂಥ ತ್ಯಾಗ, ಋಣವನ್ನು ತೀರಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಅನೇಕರು ಬಡತನದಲ್ಲಿ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿ, ಕಷ್ಟಪಟ್ಟು ಓದಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಅಧಿಕಾರವನ್ನು ಪಡೆದಿರುತ್ತಾರೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವೂ ಅವರಿಗೆ ಸಿಕ್ಕಿರುತ್ತದೆ.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ಅಂತಹವರು ಭ್ರಷ್ಟತನಕ್ಕೆ ಹೊಂದಿಕೊಳ್ಳಲಿಲ್ಲ ಎಂಬ ಕಾರಣದಿಂದ ವಿನಾಕಾರಣ ಅವರ ಮೇಲೆ ಸುಳ್ಳು ವಂಚನೆಯ ಆರೋಪ ಹೊರಿಸಿ ಅವರು ಈ ಬದುಕಿನಿಂದ ದೂರವಾಗುವಂತಹ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹಂತಕ್ಕೆ ಇಂದಿನ ಕೆಲವರು ಕುಮ್ಮಕ್ಕು ನೀಡುತ್ತಿರುವುದು, ಅವರು ಸತ್ತನಂತರ ಅವರ ಗುಣಗಾನ ಮಾಡುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಹೇಳಿದರು.
ಚಿತ್ರದುರ್ಗದ ಬೃಹನ್ಮಠದ ಜಯದೇವ ಜಗದ್ಗುರುಗಳು ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪನೆ ಮಾಡುವುದರ ಮೂಲಕ ವಿದ್ಯಾರ್ಥಿಗಳ ಆಶಾಕಿರಣವಾಗಿದ್ದರು.
ಅದರಂತೆ ಮಧ್ಯ ಕರ್ನಾಟಕದ ಈ ಬಯಲು ಸೀಮೆಯಲ್ಲಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರು ವಿದ್ಯಾಪೀಠದ ವತಿಯಿಂದ ಶಾಲಾಕಾಲೇಜು ಸ್ಥಾಪಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕಾರಣರಾದರು ಎಂದು ಸ್ಮರಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯ ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ಬಿ.ಎನ್. ಗುರುಬಸವರಾಜ್, ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪಿ.ಬಿ. ಭರತ್, ಕಾಲೇಜಿನ ಪ್ರಾಚಾರ್ಯ ಎಸ್.ವಿ. ರವಿಶಂಕರ್ ಮಾತನಾಡಿದರು.
Also Read: ಏಪ್ರಿಲ್ 14 ರಂದು ವದ್ದೀಕೆರೆ ಸಿದ್ದೇಶ್ವರಸ್ವಾಮಿ ಬ್ರಹ್ಮರಥೋತ್ಸವ
ಈ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಮತ್ತು ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಹಮೀದ್ ರಜಾಕ್ ಖಾನ್ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಪಿ.ಬಿ. ರಾಜೇಶ್ ವಾರ್ಷಿಕ ವರದಿ ವಾಚಿಸಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
