CHITRADURGA NEWS | 21 MAY 2026
ಚಿತ್ರದುರ್ಗ: ನಗರದ ರಾಂದಾಸ್ ಕಾಂಪೌಂಡ್ 20 ನೇ ವಾರ್ಡ್‍ನಲ್ಲಿ ಗುಲ್ಷನ್ ಮಸೀದಿ ಮುಂಭಾಗ ಯು.ಜಿ.ಡಿ. ಚೇಂಬರ್ ತುಂಬಿ ನದಿಯಂತೆ ರಸ್ತೆಯಲ್ಲಿ ಹರಿಯುತ್ತಿದೆ. ಚೇಂಬರ್ ಮೇಲಿನ ಮುಚ್ಚಳ ಮುರಿದಿದ್ದು, ಪದೆ ಪದೆ ತುಂಬಿ ಹರಿಯುತ್ತಿದ್ದರೂ ನಗರಸಭೆಯವರು ನಮಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

ಇದನ್ನೂ ಓದಿ: ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿಗಳು ಓವರ್‍ಲ್ಯಾಪ್ ಆಗದಂತೆ ನಿಗಾವಹಿಸಿ | ಅಧಿಕಾರಿಗಳಿಗೆ ಡಿಸಿ ಸೂಚನೆ
ಪ್ರತಿ ಮನೆಯ ಮುಂಭಾಗ ಅಂಗಳದಲ್ಲಿ ಯು.ಜಿ.ಡಿ.ನೀರು ಹರಿಯುತ್ತಿದ್ದು, ಶಾಲಾ ಮಕ್ಕಳು ದಿನನಿತ್ಯವೂ ಇದೇ ಜಾಗದಿಂದ ಹೋಗಬೇಕಾಗಿದೆ. ಮೊದಲೇ ಬೇಸಿಗೆಯ ಕಾಲವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ.
ರವಿ ಮ್ಯಾಚಸ್ ಫ್ಯಾಕ್ಟರಿ ಹತ್ತಿರ ಕೂಡ ಇದೇ ರೀತಿ ಯು.ಜಿ.ಡಿ. ಚೇಂಬರ್ ಹಾಳಾಗಿದೆ. ಇಲಿ, ಹೆಗ್ಗಣಗಳು ರಸ್ತೆಯಲ್ಲಿ ಓಡಾಡುತ್ತಿರುತ್ತವೆ. ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ನಗರಸಭೆ ಆಯುಕ್ತರು, ಪರಿಸರ ಇಂಜಿನಿಯರ್‍ಗೆ ಸ್ಥಳಕ್ಕೆ ಭೇಟಿ ನೀಡಿ ತುಂಬಿ ಹರಿಯುತ್ತಿರುವ ಯು.ಜಿ.ಡಿ. ಚೇಂಬರ್ ದುರಸ್ಥಿಪಡಿಸುವಂತೆ ಸೂಚಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಮಾಜಿ ಜಿಲ್ಲಾಧ್ಯಕ್ಷ ಹೆಚ್.ಎಂ.ಫಾರೂಕ್ ಅಜ್ಮತ್ ಅಲಿ ಮನವಿ ಮಾಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
