CHITRADURGA NEWS | 03 JUNE 2025
ಚಿತ್ರದುರ್ಗ: ಮನೆಯಲ್ಲಿ ಮಕ್ಕಳಿಗೆ ತಾಯಿಯ ಪ್ರೀತಿಯೇ ಮೊದಲು, ನಂತರ ತಂದೆಯ ಪ್ರೀತಿ. ತಂದೆ ತಾಯಿ ಇಬ್ಬರ ಪ್ರೀತಿಯಲ್ಲಿ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಭಾರತೀಯ ಜೈನ್ ಸಂಘದ ರಾಜ್ಯ ಮುಖಂಡರಾದ ಕೀಶೋರ್‌ಲಾಲ್ ವಾಲಾ ತಿಳಿಸಿದರು.
Also Read: ಸೌಟ್ಸ್ ಮತು ಗೈಡ್ಸ್ ನಾ ರಾಜ್ಯ ಪುರಸ್ಕಾರ ಪ್ರಶಸ್ತಿ | ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ವಿತರಣೆ
ನಗರದ ಭಾರತೀಯ ಜೈನ್ ಸಂಘದ ಚಿತ್ರದುರ್ಗ ಘಟಕದಿಂದ ಜೈನ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಾತೃ ವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಮನೆಗಳಲ್ಲಿ ಅಜ್ಜ-ಅಜ್ಜಿ ಇದ್ದವರೇ ಭಾಗ್ಯಶಾಲಿಗಳಾಗಿದ್ದಾರೆ. ಮನೆಯಲ್ಲಿ ಎಲ್ಲರ ಪ್ರೀತಿ, ವಿಶ್ವಾಸವನ್ನುಗಳಿಸುವ ಮೂಲಕ ಮುಂದಿನ ಪ್ರಜೆಗಳಾಗಿ ಬೆಳೆಯಬೇಕಿದೆ. ಸಾಕಷ್ಟು ಮಕ್ಕಳಿಗೆ ತಂದೆ-ತಾಯಿಯ ಪ್ರೀತಿ ಸಿಗದೇ ಅನಾಥರಾಗಿದ್ದಾರೆ. ಈ ಸಮಯದಲ್ಲಿ ತಂದೆ-ತಾಯಿ ಇದ್ದವರೇ ಪುಣ್ಯವಂತರು ಅನ್ನಿಸುತ್ತದೆ ಎಂದರು.
ಭಾರತ ದೇಶವನ್ನು ಭಾರತ ಮಾತೆ ಎನ್ನುವ ಪರಿಪಾಠ ಇದೆ. ಅದೇ ರೀತಿ ಮನೆಯಲ್ಲಿ ಮಕ್ಕಳ ಪೋಷಣೆಯಲ್ಲೂ ಮಾತೆಯ ಪಾತ್ರ ದೊಡ್ಡದಾಗಿದೆ. ಇದರೊಟ್ಟಿಗೆ ಕುಟುಂಬ ನಿರ್ವಹಣೆಯಲ್ಲೂ ತಾಯಿಯ ಪಾತ್ರ ಹಿರಿದು. ತಾಯಿ ಇಲ್ಲದ ಕುಟುಂಬದ ನಿರ್ವಹಣೆ ದುಸ್ಸಾಹಸವಾಗುತ್ತದೆ ಎಂದು ತಿಳಿಸಿದರು.
Also Read: RCB ಕಪ್ ಗೆಲ್ಲಲಿ | ಬಂಗಾರದ IPL CUP ತಯಾರಿಸಿದ ಹೊಸದುರ್ಗದ ಯುವಕರು
ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಭಾರತೀಯ ಸೇನೆಗೆ ಕಳುಹಿಸುವ ಮೂಲಕ ತ್ಯಾಗ ಮಾಡಿದ್ದಾರೆ. ಅನೇಕ ಸೈನಿಕರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಮಕ್ಕಳನ್ನು ಸೇನೆಗೆ ಕಳುಹಿಸಿದ ಪೋಷಕರು ನಿಜಕ್ಕೂ ಮಹಾತ್ಮರು ಎಂದು ಬಣ್ಣಿಸಿದರು.
ಭಾರತೀಯ ಜೈನ್ ಸಂಘದ ಕಾರ್ಯದರ್ಶಿ ಪ್ರಕಾಶ್ ಗುಲೇಚ ಮಾತನಾಡಿ, ಜೈನ್ ಸಂಘದವತಿಯಿಂದ 18 ರಿಂದ 25 ವರ್ಷದ ಒಳಗಿನ ಹೆಣ್ಣು ಮಕ್ಕಳಿಗಾಗಿ ಸ್ಮಾರ್ಟ್‌ಗರ್ಲ್ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸುವ ಮೂಲಕ ಅವರಲ್ಲಿ ಧೈರ್ಯ, ಮನೋವಿಕಾಸ, ನಾಯಕತ್ವ ಗುಣ, ಕಷ್ಟ ಕಾಲದಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಕಲೆ, ಸಮಾಜದಲ್ಲಿ ಬರುವಂತ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುವ ಬಗ್ಗೆ ತಿಳಿಸಿಕೊಡಲಾಗುವುದು.
ಚಿತ್ರದುರ್ಗದಲ್ಲಿ ಜೂ.21-22ರಂದು ಈ ಕಾರ್ಯಕ್ರಮ ನಡೆಯಲಿದೆ ಇದರ ನೊಂದಾಣಿ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಭಾರತೀಯ ಜೈನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಕ್ರಾಂತ್‍ಜೈನ್ ಮಾತನಾಡಿದರು.
ಸಮಾರಂಭದಲ್ಲಿ ಟ್ರಸ್ಟಿಗಳಾದ ವಸ್ತಿಮಲ್‍ಜೀ,ಪುಷಬ್ ರಾಜ್ ಭಾಘ್ನಾ, ವಿಪುಲ್ ಜೈನ್, ವಿನೋದ್, ಭಾರತೀಯ ಜೈನ್ ಸಂಘದ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಷಾ ಭಾಗವಹಿಸಿ ದ್ದರು.
ರೇಖಾ, ರಿಂಕಲ್, ಸರೋಜ್ ಪ್ರಾರ್ಥನೆ ಮಾಡಿದರು. ಸವಿತಾ ಹಾಗೂ ಅನಿತಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿತ್ರದುರ್ಗದ ಭಗತ್ ಸಿಂಗ್ ಅವರ ತಂದೆ ತಿಪ್ಪೇಸ್ವಾಮಿ, ತಾಯಿ ಕಮಲಮ್ಮ, ಮತ್ತೋರ್ವ ಸೇನಾನಿ ರಮೇಶ ಅವರ ಪೋಷಕರಾದ ಶಿವಮ್ಮ ಜಯಪ್ಪ, ಸೈನಿಕ ಗುರುಮೂರ್ತಿ ಪೋಷಕರಾದ ರತ್ನಮ್ಮ ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
