
CHITRADURGA NEWS | 03 JUNE 2025
ಚಿತ್ರದುರ್ಗ: ಕನ್ನಡಿಗರ ನೆಚ್ಚಿನ ತಂಡ RCB IPL ಕ್ರಿಕೇಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುತ್ತಲೇ ಹೊಸದುರ್ಗದ ಯುವಕರಿಬ್ಬರು ಬಂಗಾರದ ಐಪಿಎಲ್ ಕಪ್ ತಯಾರಿಸಿ ವಿಶೇಷವಾಗಿ ಗಮನ ಸೆಳೆದಿದ್ದಾರೆ.
ಹೊಸದುರ್ಗದ ವಿಜ್ಞೇಶ್ವರ ಜ್ಯುವೆಲರ್ಸ್‌ನ ಸುನೀಲ್ ಪಿ ಅಣ್ವೇಕರ್ ಹಾಗೂ ಮಾರುತಿ ಜಿ ರೇವಣಕರ್ ಸೇರಿ ಮೂರು ದಿನದಲ್ಲಿ ಈ ಕಪ್ ತಯಾರಿಸಿದ್ದಾರೆ.


ಇದನ್ನೂ ಓದಿ: JEE ಅಡ್ವಾನ್ಸ್ ಫಲಿತಾಂಶ | SRS ಕಾಲೇಜಿನ ಪೂಜಿತ್ ಕುಲಾಲ್‌ಗೆ 34ನೇ ರ್ಯಾಂಕ್
RCB ತಂಡ ಕಪ್ ಗೆಲ್ಲಲಿ ಎಂಬ ಪ್ರಾರ್ಥನೆಯೊಂದಿಗೆ 0.480 ಮಿಲಿ ಬಂಗಾರದಲ್ಲಿ ಪುಟಾಣಿ ಕಪ್ ತಯಾರಿಸಿದ್ದು, ಇದು ಅತ್ಯಂತ ಸೂಕ್ಷ್ಮ ಕೆಲಸವಾಗಿದೆ.

ಆರ್‌ಸಿಬಿ ಕಪ್ ಗೆದ್ದರೆ ಈ ಬಂಗಾರದ ಕಪ್ ಅನ್ನು ಕ್ರಿಕೇಟ್ ಕಿಂಗ್ ವಿರಾಟ್ ಕೋಹ್ಲಿ ಅವರಿಗೆ ತಲುಪಿಸುವ ಆಸೆ ಈ ಯುವಕರದ್ದಾಗಿದೆ.
ಇದನ್ನೂ ಓದಿ: ವಿವಿ ಸಾಗರ ಹಿನ್ನೀರಿನಲ್ಲಿ ಜಮೀನು ಮುಳುಗಡೆ | ಅಹವಾಲು ಆಲಿಸಲು ಬರುತ್ತಿದೆ ಅಧಿಕಾರಿಗಳ ತಂಡ
ಆರ್‌ಸಿಬಿ ತಂಡ ಪಂಜಾಬ್ ವಿರುದ್ಧ ರೋಚಕ ಗೆಲುವು ದಾಖಲಿಸುತ್ತಲೇ, ಇಬ್ಬರೂ ಕಾರ್ಯಪ್ರವೃತ್ತರಾಗಿ ಈ ಕಪ್ ತಯಾರಿಸಿದ್ದಾರೆ.
ಈ ಹಿಂದೆ ವಿಶ್ವಕಪ್ ಸಂದರ್ಭದಲ್ಲೂ ಬಂಗಾರದ WORLD CUP ತಯಾರಿಸಿದ್ದ ಈ ಯುವಕರು, ಈಗ ಮತ್ತೆ ಅಂಥದ್ದೇ ವಿಶೇಷ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
