CHITRADURGA NEWS | 27 MAY 2026
ಚಿತ್ರದುರ್ಗ: ಖ್ಯಾತ ಸಾಹಿತಿ ಕಾದಂಬರಿಕಾರ ಡಾ.ಬಿ.ಎಲ್.ವೇಣು ಅವರ 81ನೇ ಜನ್ಮದಿನಾಚರಣೆ ಆಚರಿಸಲಾಯಿತು. ವಿವಿಧ ಸಾಹಿತಿಗಳು, ಸಾಹಿತ್ಯಾಸಕ್ತರು, ವೇಣು ಅವರ ಅಭಿಮಾನಿಗಳು ಅವರ ಮನೆಗೆ ಆಗಮಿಸಿ ಶುಭ ಕೋರಿದರು.
ಇದನ್ನೂ ಓದಿ: ಕನ್ನಡದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ.ಎಲ್.ವೇಣುರವರು ಇಳಿ ವಯಸ್ಸಿನಲ್ಲಿಯೂ ಲವಲವಿಕೆಯಿಂದ ಇದ್ದೇನೆಂದರೆ ಅದಕ್ಕೆ ಬರವಣಿಗೆಯೇ ಮೂಲಕ ಕಾರಣ ಎಂದರು.
ತೋಟಗಾರಿಕೆ ಇಲಾಖೆ ಪಲಪುಷ್ಪ ಪ್ರದರ್ಶನದಲ್ಲಿ ನನ್ನ ಸಾಹಿತ್ಯ ಕೃತಿಗಳ ಪ್ರತಿಕೃತಿ ನಿರ್ಮಿಸಿ ಅಪಾರವಾದ ಗೌರವವನ್ನು ಸೂಚಿಸಿದ್ದು, ನನಗೆ ತೃಪ್ತಿ ತಂದಿದೆ. ನನ್ನ ಬರವಣಿಗೆಗೆ ಸಹಕಾರ ನೀಡಿದ ಇತಿಹಾಸ ಸಂಶೋಧಕ ಡಾ.ಲಕ್ಷ್ಮಣ ತೆಲಗಾವಿರವರನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ ಎಂದು ಸ್ಮರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಖ್ಯಾತ ಸಾಹಿತಿ, ಕಾದಂಬರಿಕಾರ ಡಾ.ಬಿ.ಎಲ್.ವೇಣು ಅವರು ಕೃತಿಗಳ ಮೂಲಕ ಜಿಲ್ಲೆಯ ನೆಲಮೂಲದ ಸಂಸ್ಕøತಿಯನ್ನು ಕಟ್ಟಿಕೊಟ್ಟು ಜನಮಾನಸ ತಲುಪಿದ್ದಾರೆ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ.27 | ರಾಗಿ, ಶೇಂಗಾ ರೇಟ್..
ನೆಲಮೂಲ ಹಾಗೂ ಶ್ರಮ ಸಂಸ್ಕøತಿಯನ್ನು ಕಾದಂಬರಿ, ಚಿತ್ರಕಥೆ ಸಂಭಾಷಣೆಯ ಮೂಲಕ ಕಥೆಗಾರರಾಗಿ ಜಿಲ್ಲೆಯನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರದುರ್ಗದ ಕೀರ್ತಿಯನ್ನು ತಮ್ಮ ಬರವಣಿಗೆ ಮೂಲಕ ನಾಡಿನಾದ್ಯಂತ ಪಸರಿಸಿರುವ ಬಿ.ಎಲ್.ವೇಣುರವರಿಂದ ಇನ್ನಷ್ಟು ಕೃತಿಗಳು ಹೊರ ಬರಲಿ ಎಂದು ಶುಭ ಹಾರೈಸಿದರು.
ಬಿ.ಎಲ್.ವೇಣುರವರ ಕಥೆಗಳು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಗಳಾಗಿರುವುದು ಹೆಮ್ಮೆಯ ಸಂಗತಿ. ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ತುರುವನೂರು ರಸ್ತೆಯಲ್ಲಿ ಡಾ.ಬಿ.ಎಲ್.ವೇಣು ವೃತ್ತ ಸ್ಥಾಪಿಸಿದ್ದೇನೆ. ಇದು ನನ್ನ ಅಧಿಕಾರಾವಧಿಯಲ್ಲಿ ಸಿಕ್ಕಿದ ಸುವರ್ಣಾವಕಾಶ ಎಂದು ಸ್ಮರಿಸಿಕೊಂಡರು.
ಜಿಲ್ಲಾ ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಖ್ಯಾತ ಕಾದಂಬರಿಕಾರರಾಗಿ ನಾಡಿನಾದ್ಯಂತ ಗುರುತಿಸಿಕೊಂಡಿರುವ ಸಾಹಿತಿ ಡಾ.ಬಿ.ಎಲ್.ವೇಣುರವರು ನೂರು ಕಾಲ ಬಾಳಿ ಇನ್ನು ಹೆಚ್ಚಿನ ಸಾಹಿತ್ಯಗಳನ್ನು ಹೊರ ಸೂಸಬೇಕಾಗಿದೆ. ಅದಕ್ಕಾಗಿ ಭಗವಂತ ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು.
ಇದನ್ನೂ ಓದಿ: ಜೈಲುಗಳು ಮಾನಸಿಕವಾಗಿ ಮನುಷ್ಯನನ್ನು ಬದಲಾವಣೆ ಮಾಡುವ ಸ್ಥಳ
ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಾಂತೇಶ್, ಜಿ.ಪ್ರಹ್ಲಾದ್, ಪತ್ರಕರ್ತ ಮೇಘಗಂಗಾಧರನಾಯ್ಕ, ಪ್ರಹ್ಲಾದ್ ಇತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
