CHITRADURGA NEWS | 19 JANUARY 2026
ಚಿತ್ರದುರ್ಗ: ಸುಧೀರ್ಘ ನಾಲ್ಕು ತಿಂಗಳ ನಂತರ ಚಳ್ಳಕೆರೆಯ ಮನೆಗೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಭಾನುವಾರ ಬಂದಿದ್ದಾರೆ.
ಈ ವೇಳೆ ಮನೆಯ ಕಾವಲುಗಾರ(ವಾಚ್‌ಮೆನ್) ಸೆರಿಯಣ್ಣ ಶಾಸಕರನ್ನು ಕಂಡಾಕ್ಷಣ ಗದ್ಗಧಿತರಾಗಿ ಓಡಿ ಬಂದು ಅಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಸಾವಿರ ವರ್ಷ ಕಳೆದರೂ ಹಿಂದೂ ಸಂಸ್ಕೃತಿ ಇರುತ್ತದೆ | ಯಾದವ ಕೃಷ್ಣ
ಈ ಅಚ್ಚರಿಯ ನಡೆಯಿಂದ ಒಂದು ಕ್ಷಣ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಪ್ರೀತಿಯಿಂದ ತಬ್ಬಿಕೊಂಡಿದ್ದಾರೆ.
ತಬ್ಬಿಕೊಂಡು ಬೆನ್ನು ಸವರುತ್ತಾ, ಏನು ಆಗಲ್ಲ ಧೈರ್ಯವಾಗಿರು, ಎಲ್ಲವೂ ಮುಗಿಯಿತು ಎಂದು ಮನೆಯ ವಾಚ್‌ಮೆನ್ ಅವರನ್ನು ಸಂತೈಸಿದ್ದಾರೆ.
ಇದನ್ನೂ ಓದಿ: ರಾಮಾಯಣ ಪರಿಕಲ್ಪನೆ ವೇದಿಕೆಗೆ ತಂದ ವಿದ್ಯಾರ್ಥಿಗಳು | VVVS ಶಾಲಾ ವಾರ್ಷಿಕೋತ್ಸವ
ಈ ವೇಳೆ ಜೊತೆಗಿದ್ದ ವೀರೇಂದ್ರ(ಪಪ್ಪಿ) ಅವರ ಬೆಂಬಲಿಗರು ಸೆಕ್ಯೂರಿಟಿಯನ್ನು ಸಮಾಧಾನ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವೀರೇಂದ್ರ(ಪಪ್ಪಿ) ಅವರ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿ ಅಪಾರ ಪ್ರಮಾಣದ ನಗ ನಾಣ್ಯ ಜಪ್ತಿ ಮಾಡಿ ಬಂಧನ ಮಾಡಿದ್ದರು. ಡಿಸೆಂಬರ್ 31 ರಂದು ಪಪ್ಪಿ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

