CHITRADURGA NEWS | 18 JANUARY 2026
ಚಿತ್ರದುರ್ಗ: ಭಾರತ ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿದೆ. ಹಾಗಾಗಿ ಜಗತ್ತಿನೆಲ್ಲೆಡೆ ನಮ್ಮ ಸಂಸ್ಕೃತಿಗೆ ಗೌರವ ದೊರೆಯುತ್ತದೆ ಎಂದು ಆರೆಸ್ಸೆಸ್ಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಪರ್ಕ ಪ್ರಮುಖ್ ಯಾದವಕೃಷ್ಣ ಹೇಳಿದರು.
ನಗರದ ಆನೆ ಬಾಗಿಲು ಬಳಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಇದನ್ನೂ ಓದಿ: ರಾಮಾಯಣ ಪರಿಕಲ್ಪನೆ ವೇದಿಕೆಗೆ ತಂದ ವಿದ್ಯಾರ್ಥಿಗಳು | VVVS ಶಾಲಾ ವಾರ್ಷಿಕೋತ್ಸವ
ನಮ್ಮ ಪೂರ್ವಜರಿಗೆ ನಾವು ಹಿಂದೂ ಎಂಬುದೇ ಮರೆತು ಹೋಗಿತ್ತು. ಆಗ ಉದಯಿಸಿದ ಆಶಾಕಿರಣ ಆರ್‌ಎಸ್‌ಎಸ್. ನಾವೆಲ್ಲಾ ಹಿಂದುಗಳೆಂದು ಗರ್ವದಿಂದ ಹೇಳಿತು. ಈಗ ಹಿಂದೂ ಎಂಬುದು ಅಭಿಮಾನದ ಸಂಕೇತವಾಗಿದೆ. ಇಡೀ ಜಗತ್ತು ಹೆಮ್ಮೆಪಡುತ್ತಿದೆ ಎಂದರು.
ಹಿಂದೂ ಸಂಸ್ಕೃತಿಯ ಮೇಲೆ ಅನೇಕ ದಾಳಿಗಳು ನಡೆದರೂ ಸಂಸ್ಕೃತಿ ಅಳಿಯಲಿಲ್ಲ. ಮಂದಿರ ಕಳೆದುಕೊಂಡೆವು. ಆದರೆ ರಾಮ, ಕೃಷ್ಣನನ್ನು ಕಳೆದುಕೊಳ್ಳಲಿಲ್ಲ. ಇನ್ನೂ ಸಾವಿರಾರು ವರ್ಷಗಳು ಕಳೆದರೂ ನಮ್ಮ ಸಂಸ್ಕೃತಿ ಇರುತ್ತದೆ. ಇಡೀ ಜಗತ್ತು ಹಿಂದೂಗಳ ಕಡೆ ನೋಡುತ್ತಿದೆ. ಜಗತ್ತಿಗೆ ಯೋಗ ಕೊಟ್ಟದ್ದು ನಾವು. ಅಬುದಾಬಿಯಲ್ಲಿ ದೊಡ್ಡ ಹಿಂದೂ ದೇವಾಲಯವಿದೆ. ಮೆಕ್ಸಿಕೋದಲ್ಲಿ ಬೃಹತ್ ಹನುಮನ ಪ್ರತಿಮೆಯನ್ನು ಪೂಜಿಸಲಾಗುತ್ತಿದೆ. ಅಮೇರಿಕಾದ ವೈಟ್ ಹೌಸ್‌ನಲ್ಲಿ ದೀಪಾವಳಿ ಆಚರಿಸಲಾಗುತ್ತದೆ. ಅಲ್ಲಿ ದೀಪ ಬೆಳಗುತ್ತಾರೆ. ಇದು ಹಿಂದೂ ಸಂಸ್ಕೃತಿಯ ಪ್ರಭಾವ ಎಂದು ಹೇಳಿದರು.
ಇದನ್ನೂ ಓದಿ: ಮೆಡಿಕಲ್ ಕಾಲೇಜಿನಲ್ಲಿ ಸಂಶೋಧನಾ ಮಂಡಳಿ | ಸಂಶೋಧನಾ ತಜ್ಞ ಪ್ರೊ.ಎಲ್.ನಾಗೇಶ್ ನೇಮಕ
ಜಗತ್ತಿನಲ್ಲಿ ಹಿಂದುಗಳಿಗೆ ಇರುವುದು ಒಂದೇ ರಾಷ್ಟ್ರ. ಅದನ್ನು ಉಳಿಸಿಕೊಳ್ಳಬೇಕು ಎಂದು ಇಪ್ಪತ್ತು ವರ್ಷಗಳ ಹಿಂದೆ ಹೇಳಲಾಗುತ್ತಿತ್ತು. ಆದರೆ, ಇಂದು ನಮ್ಮ ದೇಶ 60-70 ದೇಶಗಳ ಮೇಲೆ ಪ್ರಭಾವ ಬೀರಿದೆ. ಜಗತ್ತಿನ ವಿವಿಧ ದೇಶಗಳಲ್ಲಿ ಯುದ್ದಗಳು ನಡೆಯುತ್ತಿವೆ. ಇದನ್ನು ತಡೆಯುದು ಭಾರತದಿಂದ ಮಾತ್ರ ಸಾಧ್ಯ ಎಂದು ಹಲವು ದೇಶಗಳ ಮುಖ್ಯಸ್ಥರು ಹೇಳುತ್ತಿದ್ದಾರೆ. ಇದಕ್ಕೆ ನಮ್ಮ ದೇಶದ ಶ್ರೇಷ್ಠ ಸಂಸ್ಕೃತಿ ಕಾರಣ. ಇಂತಹ ಸಂಸ್ಕೃತಿಯುಳಿಸಿದ ಕೀರ್ತಿ ನಮ್ಮ ತಾಯಂದಿರಿಗೆ ಸಲ್ಲುತ್ತದೆ ಎಂದರು.
ಭಾರತ ಎಂದೂ ಯಾರ ಮೇಲೆಯೂ ಆಕ್ರಮಣ ಮಾಡಿಲ್ಲ:
ಸಾನ್ನಿಧ್ಯ ವಹಿಸಿದ್ದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವಕ್ಕೆ ಆದರ್ಶ ಭಾರತ. ಭಾರತ ತ್ಯಾಗದ ಸಂಕೇತ. ಶಸ್ತ್ರ ಹಿಡಿದು ಯಾರ ಮೇಲೂ ದಬ್ಬಾಳಿಕೆ ಮಾಡಿಲ್ಲ. ಶಾಸ್ತ್ರ ಹಿಡಿದು ವಿದೇಶಗಳಿಗೆ ಹೋಗಿ ಅಲ್ಲಿನ ಜನರನ್ನು ಗೆದ್ದಿದ್ದೇವೆ. ಇದಕ್ಕೆ ಸ್ವಾಮಿ ವಿವೇಕಾನಂದರು ಉತ್ತಮ ಉದಾಹರಣೆ ಎಂದರು.
ಇದನ್ನೂ ಓದಿ: ರೈತರಿಗೆ ವೈಜ್ಞಾನಿಕ ಹೈನುಗಾರಿಕೆ ಸಾಕಾಣಿಕೆ ತರಬೇತಿ
ಶಾಂತಿ ನೆಮ್ಮದಿಯ ದೇಶ ನಮ್ಮದು. ಆದರೆ ಇತ್ತೀಚೆಗೆ ನಮ್ಮನ್ನು ಕೆಣಕುತ್ತಿದ್ದಾರೆ. ನಮ್ಮ ಸಂಸ್ಕೃತಿ, ಸಮಾಜ, ಧರ್ಮದ ಮೇಲೆ ದಬ್ಬಾಳಿಕೆ ಮಾಡಿತ್ತಿದ್ದಾರೆ. ಹಾಗಾಗಿ ಧರ್ಮಾಧಾರಿತ ಕಾನೂನು ಬೇಡ. ದೇಶಕ್ಕೆ ಒಂದೇ ಕಾನೂನು ಜಾರಿಯಾಗಬೇಕು. ಈ ಕುರಿತು ಜನ ಜಾಗೃತರಾಗಬೇಕು ಎಂದರು.
ಡಾ.ಅಶ್ವಿನಿ ಮಾತನಾಡಿ, ಹಿಮಾಲಯದಿಂದ ಹಿಂದೂ ಮಹಾ ಸಾಗರದವರೆಗಿನ ಪ್ರದೆಶದಲದಲಿ ಭಗವಂತನಿಂದ ಸೃಷ್ಟಿಯಾಗಿರುವುದು ಹಿಂದೂಸ್ಥಾನ. ಪರಕೀಯರ ದಾಳಿಯಿಂದ ತಮ್ಮತನ ಮರೆತಿದ್ದ ಜನರನ್ನು ವಿವೇಕಾನಂದ ಎಚ್ಚರಿಸಿದರು. ಅಂತಹ ಸಮಯ ಈಗ ಮತ್ತೊಮ್ಮೆ ಬಂದಿದೆ. ಹಾಗಾಗಿ ಕಾರ್ಯಕ್ರಮ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ತಾಯಂದಿರು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಪ್ರತಿ ಮನೆಯನ್ನು ಹಿಂದೂ ಮನೆಯನ್ನಾಗಿ ಮಾಡಬೇಕು ಎಂದು ಸಲಹೆ ಮಾಡಿದರು.
ಇದನ್ನೂ ಓದಿ: ಸರ್ಕಾರಿ ನೌಕರರ ವಾರ್ಷಿಕ ಕ್ರೀಡಾಕೂಟ | ಆನ್‍ಲೈನ್ ಮೂಲಕ ನೊಂದಣಿಗೆ ಅವಕಾಶ
ಹಿಂದೂ ಸಂಗಮ ಸಮಿತಿ ಅಧ್ಯಕ್ಷ ಚಾಲುಕ್ಯ ನವೀನ್ ಇದ್ದರು. ನೂರಾರು ಸಂಖ್ಯೆಯ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ರಾಷ್ಟ್ರ ನಾಯಕರ ವೇಷಭೂಷಣ ಸ್ಪರ್ಧೆ ನಡೆಸಲಾಯಿತು. ಕಾರ್ಯಕ್ರಮಕ್ಕೆ ಮೊದಲು ನಗರದ ವಿವಿಧೆಡೆಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

