
CHITRADURGA NEWS | 20 OCTOBER 2024
ಚಿತ್ರದುರ್ಗ: ವ್ಯಕ್ತಿ ನಿರ್ಮಾಣ ಹಾಗೂ ಹಿಂದೂ ಸಂಘಟನೆಯ ಪರಿಕಲ್ಪನೆಯೊಂದಿಗೆ ಪ್ರಾರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) 99 ವರ್ಷಗಳನ್ನು ಪೂರೈಸಿದ್ದು, ಇಂದು ಸಂಘ ಎಲ್ಲ ಕ್ಷೇತ್ರ ಹಾಗೂ ಗ್ರಾಮಗಳನ್ನು ಮುಟ್ಟಿದೆ ಎಂದು ಪ್ರಾಂತ ಸಹ ಸಂಪರ್ಕ ಪ್ರಮುಖ್ ಯಾದವಕೃಷ್ಣ ಹೇಳಿದರು.
ವಿಜಯದಶಮಿ ಅಂಗವಾಗಿ ಆರೆಸ್ಸೆಸ್ಸ್ ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಘಟಕದಿಂದ ಆಯೋಜಿಸಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಇದನ್ನೂ ಓದಿ: ಊರು ತೊರೆದು ಬಂದವರು | ಹಬ್ಬಿದಾ ಮಲೆಮಧ್ಯದೊಳಗೆ
ಸಾಮಾನ್ಯ ಆಟಗಳ ಮೂಲಕ ವ್ಯಕ್ತಿ ನಿರ್ಮಾಣಕ್ಕೆ ಸಂಘದ ಸಂಸ್ಥಾಪಕರು ಕೈ ಹಾಕಿದ್ದರು. ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳು, ಸಂಸ್ಥೆಗಳು ಮಾಡದ ಕೆಲಸವನ್ನು ಸಂಘದ ಶಾಖೆಗೆ ಬರುವ ಸಾಮಾನ್ಯ ಹುಡುಗರು ಮಾಡುತ್ತಿದ್ದಾರೆ. ಇದೊಂದು ಮನುಷ್ಯನ ಮಾನಸಿಕತೆಯ ದೊಡ್ಡ ಪ್ರಯೋಗಾಲಯ ಎಂದು ಹೇಳಿದರು.

1925 ರಲ್ಲಿ ಆರೆಸ್ಸೆಸ್ಸ್ ನಾಗಪುರದಲ್ಲಿ ಕೆಲವೇ ಹುಡುಗರೊಂದಿಗೆ ಪ್ರಾರಂಭವಾಯಿತು. ಇದೇ ಸಂದರ್ಭದಲ್ಲಿ ಕಾನ್ಪುರದಲ್ಲಿ ಸಿಪಿಐ ಕೂಡಾ ಒಂದು ಲಕ್ಷ ಜನರನ್ನು ಸೇರಿಸಿ ಉದ್ಘಾಟಿಸಲಾಗಿತ್ತು. ಆಗ ಸಿಪಿಐಗೆ ಈ ಮಣ್ಣಿನ ವಾಸನೆ ಗ್ರಹಿಸುವ ಮೂಗು ಇರಲಿಲ್ಲ. ಸಂಘಕ್ಕೆ ಹಿಂದೂ ಸಂಘಟನೆ ಕುರಿತು ಕೇಳಿ ಬಂದ ಟೀಕೆಗಳನ್ನು ಕೇಳಿಸಿಕೊಳ್ಳುವ ಕಿವಿಗಳಿರಲಿಲ್ಲ. ಕಳೆದ 99 ವರ್ಷಗಳಲ್ಲಿ ಸಂಘ ದೇಶದ ಎಲ್ಲ ಕ್ಷೇತ್ರ, ಎಲ್ಲ ಗ್ರಾಮಗಳನ್ನೂ ಆರೆಸ್ಸೆಸ್ಸ್ ತಲುಪಿದೆ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ: ಸರ್ಕಾರ ಬದಲಾದರೆ ಸಚಿವ ಸ್ಥಾನ ನೋಡೋಣ | ಬಿ.ಜಿ.ಗೋವಿಂದಪ್ಪ
ಒಂದೇ ದೇವರು, ಒಂದೇ ಗ್ರಂಥ, ಒಂದೇ ಆಚರಣೆ ಮಾಡುವ ಜನರಿರುವ ದೇಶಗಳಲ್ಲೂ ಇಂದು ಗಲಭೆ, ಯುದ್ಧಗಳಾಗುತ್ತಿವೆ. ಆದರೆ, ಭಾರತೀಯ ಸಂಸ್ಕøತಿಯಲ್ಲಿ ಪ್ರತಿ ಮನೆಗೂ ದೇವರು, ಆಚಾರ, ವಿಚಾರ, ಭಾಷೆ ಬೇರೆ ಬೇರೆಯಾಗಿದ್ದರೂ ನಮ್ಮಲ್ಲಿ ಸಾಮರಸ್ಯವಿದೆ. ಈ ಕಾರಣಕ್ಕೆ ಜಗತ್ತು ಭಾರತದ ಕಡೆಗೆ ನೋಡುತ್ತಿದೆ. ಭಾರತೀಯ ಸಮಾಜ ಮೌಲ್ಯಯುತವಾಗಿದೆ ಎಂಬ ಅರಿವು ಬಂದಿದೆ ಎಂದರು.
ಸಂಘಟನೆಯ ಕಾರಣಕ್ಕೆ ಶಕ್ತಿ ಮತ್ತು ಗೌರವ ಬಂದಿದೆ. ಈ ಶಕ್ತಿಯನ್ನು ಜಗದ ಪರಿವರ್ತನೆ ಹಾಗೂ ವಿಶ್ವ ಮಂಗಲಕ್ಕೆ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆರೆಸ್ಸೆಸ್ಸ್ ಸರಸಂಘಚಾಲಕರು ಐದು ಅಂಶಗಳನ್ನು ಉಲ್ಲೇಖಿಸಿದ್ದು, ಮೊದಲು ಕುಟುಂಬಗಳನ್ನು ಸರಿಪಡಿಸಿ ಅಲ್ಲಿ ಆಚಾರ, ವಿಚಾರ ಇರುವಂತೆ ಮಾಡುವುದು, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಪದ್ಧತಿ, ಸಾಮರಸ್ಯ ಹಾಗೂ ನಾಗರೀಕ ಶಿಷ್ಟಾಚಾರಗಳನ್ನು ಪಾಲಿಸುವ ಬಗ್ಗೆ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಅಡಿಕೆ ತೋಟದಲ್ಲಿ ಇಬ್ಬರ ಅನುಮಾನಾಸ್ಪದ ಸಾವು..!
ಪರಿಸರಕ್ಕೆ ಹೆಚ್ಚು ಹಾನಿಯಾಗದಂತೆ ನಮ್ಮ ಜೀವನಪದ್ಧತಿ ರೂಢಿಸಿಕೊಳ್ಳಬೇಕಿದೆ. ಮೇಲು, ಕೀಳು, ಭಾಷೆಯ ತಾರತಮ್ಯವಿಲ್ಲದ ಸಾಮರಸ್ಯ ಜೀವನ ಪ್ರತಿಯೊಬ್ಬರು ಪಾಲಿಸಬೇಕು. ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವ್ಯರ್ಥವಾಗದೆ ಗೊಬ್ಬರವಾಗುವಂತೆ ನೋಡಿಕೊಳ್ಳಬೇಕು. ಈ ರೀತಿಯಾಗಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಬಹುದು ಎಂದರು.

ಜಿಲ್ಲಾ ಸಂಘಚಾಲಕ ಜ.ರಾ.ನಾಗೇಶ್, ನಗರ ಸಂಘಚಾಲಕ ಡಾ.ನಾಗರಾಜ್ ವೇದಿಕೆಯಲ್ಲಿದ್ದರು.
ಇದನ್ನೂ ಓದಿ: ಪೊಲೀಸ್ ಠಾಣೆಯನ್ನೇ ವಶಕ್ಕೆ ಪಡೆದ ಮಳೆರಾಯ..!
ವೇದಿಕೆ ಕಾರ್ಯಕ್ರಮದ ನಂತರ ಸುಮಾರು 500 ಸ್ವಯಂಸೇವಕರು ಪಥಸಂಚಲನ ನಡೆಸಿದರು. ಸಿ.ಕೆ.ಪುರ ಮಾರ್ಗವಾಗಿ ತೆರಳಿದ ಸಂಚಲನ, ಚನ್ನಕೇಶವ ದೇವಸ್ಥಾನ, ಆಕಾಶವಾಣಿ ಮುಂಭಾಗದಿಂದ ಡಿಪೋ ರಸ್ತೆಯಲ್ಲಿ ತೆರಳಿ ಬಿ.ಡಿ.ರಸ್ತೆ ಮೂಲಕ ಜೈನಧಾಮ ಸೇರಿತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
