CHITRADURGA NEWS | 20 OCTOBER 2024
ಚಿತ್ರದುರ್ಗ: ಸದ್ಯಕ್ಕೆ ಸಚಿವ( minister)ರು ಇದ್ದಾರೆ. ಹಾಗಾಗಿ ಮಂತ್ರಿ ಸ್ಥಾನ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ(BG Govindappa) ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: Kannada Novel: 7. ಊರು ತೊರೆದು ಬಂದವರು | ಹಬ್ಬಿದಾ ಮಲೆಮಧ್ಯದೊಳಗೆ
ನಾಯಕನಹಟ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದೆ ಸರ್ಕಾರ ಬದಲಾವಣೆ ಆಗುವ ಸಮಯದಲ್ಲಿ ನಾವು ಮಂತ್ರಿ ಸ್ಥಾನ ಕೇಳುತ್ತೇವೆ ಎಂದಿದ್ದಾರೆ.
ಸದ್ಯ ಸರ್ಕಾರದಲ್ಲಿ ಆಹಾರ ನಿಗಮ ಮಂಡಳಿ ಕೊಟ್ಟಿದ್ದಾರೆ, ಅದರಲ್ಲೇ ಉತ್ತಮ ಕೆಲಸ ಮಾಡುವೆ. ಸರ್ಕಾರದ ಬದಲಾವಣೆ ಸಮಯದಲ್ಲಿ ಜಿಲ್ಲಾ ಮತ್ತು ರಾಜ್ಯ ಮುಖಂಡರನ್ನು ಸಂಪರ್ಕಿಸಿ ಸಚಿವ ಸ್ಥಾನ ಕೇಳುತ್ತೇನೆ ಎಂದು ತಿಳಿಸಿದ್ದಾರೆ.
ಅವಕಾಶ ಸಿಗುವ ನಿರೀಕ್ಷೆ ಇಲ್ಲ, ಹಿರಿಯರನ್ನ ಒಮ್ಮೆ ಕೇಳುತ್ತೇನೆ. ಸಚಿವ ಸ್ಥಾನಕ್ಕಡ ಅನುಭವಕ್ಕಿಂತ ಸದ್ಯದ ಪರಿಸ್ಥಿತಿಯಲ್ಲಿ ಹಣ ಮುಖ್ಯ. ದುಡ್ಡು ಕೊಟ್ಟವರು ಮುಖ್ಯ ಆಗ್ತಾರೆ. ದೇವರ ಸನ್ನಿಧಾನದಲ್ಲಿ ಸುಳ್ಳು ಹೇಳಬಾರದಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಕ್ಲಿಕ್ ಮಾಡಿ ಓದಿ: ದನದ ಕೊಟ್ಟಿಗೆಗೆ Short circute ನಿಂದ ಬೆಂಕಿ | ಹಸು, ಕರುಗಳ ಧಾರುಣ ಸಾವು
ರಾಜಕೀಯದಲ್ಲಿ ಅನುಭವಕ್ಕಿಂತ ದುಡ್ಡು ಮುಖ್ಯ, ದುಡ್ಡಿನ ಮುಂದೆ ಯಾರೂ ಓಡಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
