
CHITRADURGA NEWS | 18 JANUARY 2026
ಚಿತ್ರದುರ್ಗ: ನೂತನ ಚಿತ್ರದುರ್ಗ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಮತ್ತೊಂದು ಗರಿ ಮೂಡಿದೆ. ವೈದ್ಯಕೀಯ ವೈಜ್ಞಾನಿಕ ಸಂಶೋಧನೆಗೆ ಸಂಸ್ಥೆಯಲ್ಲಿ ICMR ಮೂಲಕ ಅನುಮತಿ ಪಡೆದು ಸಾಂಸ್ಥಿಕ ನೈತಿಕ ಮಂಡಳಿ (Institutional Review Board) ಆರಂಭಿಸಿದೆ.
ಇದನ್ನೂ ಓದಿ: ರೈತರಿಗೆ ವೈಜ್ಞಾನಿಕ ಹೈನುಗಾರಿಕೆ ಸಾಕಾಣಿಕೆ ತರಬೇತಿ

ಸದರೀ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ಸಂಶೋಧನಾ ತಜ್ಞ, ಅಂತಾರಾಷ್ಟ್ರೀಯ ಖ್ಯಾತಿ, ಪ್ರೊ.ನಾಗೇಶ್ ಎಲ್. ನೇಮಕವಾಗಿದ್ದು , ಡಾ.ಸ್ಪರ್ಶ ದೀಪ್ ಇ.ಎಂ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.
ಸಂಸ್ಥೆಯ ಸಂಶೋಧನೆ ಘಟಕದ ರೆಜಿಸ್ಟ್ರಾರ್ ಡಾ .ಮೇಘ ಜಿ.ಎಚ್, ಅಕಾಡೆಮಿಕ್ ರೆಜಿಸ್ಟ್ರಾರ್ ಡಾ.ಚಂದ್ರಿಕಾ, ಶಸ್ತ್ರಚಿಕಿತ್ಸಾ ತಜ್ಞ ಡಾ.ಸಾಗರ್ ಕೆ., ಅಂಗರಚನಾಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಕೆ.ಆರ್.ರೋಹಿಣಿ, ENT ತಜ್ಞ ಡಾ. ನಾಗರಾಜ್ ಮರಡಿ, ಸಮುದಾಯ ವೈದ್ಯಕೀಯ ವಿಭಾಗದ ಡಾ.ಅಶ್ವಿನಿ ಎಲ್. ಮತ್ತು ಹಿರಿಯ ವಕೀಲರಾದ ಎಂ ಉಮೇಶ್, ದಿಲ್ ಷಾ ಉನ್ನಿಷಾ, ದಾವಣಗೆರೆ ವಿಶ್ವ ವಿದ್ಯಾಲಯದ ಕಛೇರಿ ಅಧೀಕ್ಷಕಿ ಗಿರಿಜಮ್ಮ ಎನ್.ಹೆಚ್., ಆಶ್ರಿತ ಸರ್ಕಾರೇತರ ಸಂಸ್ಥೆಯ ತಾಲ್ಲೂಕು ಸಂಯೋಜಕ ಹರ್ಷವರ್ಧನ್ ಎಂ.ಟಿ. ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಹಿರಿಯೂರು | ಲಾರಿ-ಬೈಕ್ ಅಪಘಾತ | ಬೈಕ್ ಸವಾರ ಸಾವು
CMCRI ನ ಭೋದಕರು ಈ ಚೊಚ್ಚಲ ಸಭೆಯಲ್ಲಿ ವಿವಿಧ ವಿಭಾಗಗಳಿಂದ 15 ಸಂಶೋಧನೆಗಳನ್ನು ಪ್ರಸ್ತಾಪಿಸಿ ಮಂಡಳಿಯಿಂದ ಸಲಹೆ ಪಡೆದರು.
ಚಿತ್ರದುರ್ಗ ಅಥವಾ ದೇಶದ ಯಾವುದೇ ಸಂಸ್ಥೆಗಳು ವೈದ್ಯಕೀಯ ವಿಜ್ಞಾನ ಕುರಿತಾದ ಸಂಶೋಧನೆ ಪ್ರಾರಂಭಿಸಲು CMCRI ನಿಂದ ನಿಯಮಾನುಸಾರ ನೈತಿಕ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಹಲವು ಸಂಸ್ಥೆಗಳ ಆಸಕ್ತ ಬೋಧಕರು ಹಾಗು ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿ ಸಾಧಿಸಲು CMCRI ಪ್ರೋತ್ಸಾಹ ನೀಡುತ್ತದೆ.
-ಡಾ.ಬಿ.ವೈ.ಯುವರಾಜ್, ಸಂಸ್ಥೆಯ ನಿರ್ದೇಶಕರು ಹಾಗೂ ಮೆಡಿಕಲ್ ಕಾಲೇಜು ಡೀನ್.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
