ಮುಖ್ಯ ಸುದ್ದಿ
ನಾಲ್ಕು ಲೋಕಸಭಾ ಕ್ಷೇತ್ರಗಳ ಕ್ಲಸ್ಟರ್‍ಗೆ ಕೆ.ಎಸ್.ನವೀನ್ ಉಸ್ತುವಾರಿ

CHITRADURGA NEWS | 29 JANUARY 2024
ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಸಂಘಟನಾತ್ಮಕ ಕ್ಲಸ್ಟರ್ ರಚಿಸಿಕೊಂಡಿದೆ.
ಈ ರೀತಿಯಲ್ಲಿ ರಚಿಸಿರುವ ಒಂದು ಕ್ಲಸ್ಟರ್‍ಗೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರನ್ನು ಪ್ರಮುಖರಾಗಿ ನಿಯುಕ್ತಿ ಮಾಡಲಾಗಿದೆ.

ಈ ಹಿಂದೆ ಮೂರು, ನಾಲ್ಕು ಜಿಲ್ಲೆಗಳನ್ನು ಸೇರಿಸಿ ವಿಭಾಗಗಳನ್ನು ಮಾಡಿ, ವಿಭಾಗ ಪ್ರಭಾರಿಗಳು, ಸಹ ಪ್ರಭಾರಿಗಳು ಎಂದು ನೇಮಕ ಮಾಡಲಾಗುತ್ತಿತ್ತು. ಆದರೆ, ಈಗ ವಿಭಾಗಗಳ ಬದಲಾಗಿ ಲೋಕಸಭಾ ಚುನಾವಣೆ ಹಾಗೂ ಸಂಘಟನಾತ್ಮಕವಾಗಿ ಕ್ಲಸ್ಟರ್‍ಗಳನ್ನು ರಚಿಸಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಶಾಸಕ ಚನ್ನಬಸಪ್ಪ ಹಾಗೂ ಎಸ್.ಲಿಂಗಮೂರ್ತಿ ಉಸ್ತುವಾರಿ

ಎರಡು, ಮೂರು, ನಾಲ್ಕು ಜಿಲ್ಲೆಗಳನ್ನು ಸೇರಿಸಿ ಒಂದೊಂದು ಕ್ಲಸ್ಟರ್ ರಚಿಸಿ, ಆ ಕ್ಲಸ್ಟರ್‍ಗಳಿಗೆ ಒಬ್ಬೊಬ್ಬರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಧಾರವಾಡ, ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗ(ಎಸ್ಸಿ) ಮೀಸಲು ಲೋಕಸಭಾ ಕ್ಷೇತ್ರಗಳನ್ನು ಸೇರಿಸಿದ ಕ್ಲಸ್ಟರ್‍ಗೆ ಎಂಎಲ್ಸಿ ಕೆ.ಎಸ್.ನವೀನ್ ಪ್ರಮುಖರಾಗಿದ್ದಾರೆ.
ಈಗಾಗಲೇ ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎಸ್.ನವೀನ್ ಅವರಿಗೆ ನಾಲ್ಕು ಲೋಕಸಭೆ ಕ್ಷೇತ್ರಗಳ ಹೊಣೆಯನ್ನು ಹೊರಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕವಾದ ನಂತರ ಸಂಘಟನೆಯಲ್ಲಿ ಕೆಲ ಬದಲಾವಣೆಗಳನ್ನು ತರುತ್ತಿದ್ದು, ಕ್ಲಸ್ಟರ್‍ಗಳ ರಚನೆ ಇದರಲ್ಲಿ ಒಂದಾಗಿದೆ.
