ಅಡಕೆ ಧಾರಣೆ
ಅಡಿಕೆ ಧಾರಣೆ | ಜನವರಿ 29 | ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹಾವು-ಏಣಿ ಆಟ

CHITRADURGA NEWS | 29 JANUARY 2024
ಚಿತ್ರದುರ್ಗ: ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಹಾವು-ಏಣಿ ಆಟವಾಡುತ್ತಿದೆ. ಕಳೆದ ವಾರ ಏರಿಕೆಯ ಹಾದಿಯಲ್ಲಿದ್ದ ಅಡಿಕೆ ಧಾರಣೆ ಈ ವಾರ ತುಸು ನಿರಾಸೆ ಮೂಡಿಸಿದೆ.
ರಾಶಿ ಅಡಿಕೆ ಧಾರಣೆ 50 ಸಾವಿರ ದಾಟಿ ಮುಂದೆ ಸಾಗಿತ್ತು. ಆದರೆ, ಮತ್ತೆ ಇಳಿಕೆಯ ಹಾದಿ ಹಿಡಿದಿದ್ದು, ಚನ್ನಗಿರಿ ಮಾರುಕಟ್ಟೆಯಲ್ಲಿ ಸೋಮವಾರದ ಮಾರುಕಟ್ಟೆಯಲ್ಲಿ 49200 ರೂ. ತಲುಪಿದೆ.

ಇದನ್ನೂ ಓದಿ: ಜನವರಿ 26 ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್
ಇತ್ತೀಚೆಗೆ ಬೇರೆ ಬೇರೆ ಮಾರ್ಗಗಳಲ್ಲಿ ವಿದೇಶಿ ಅಡಿಕೆ ಭಾರತಕ್ಕೆ ಕಳ್ಳ ಸಾಗಾಣೆ ಆಗುತ್ತಿದ್ದು, ಇದು ದೇಶಿ ಅಡಿಕೆಯ ಧಾರಣೆ ಮೇಲೆ ಪರಿಣಾಮ ಬೀರಬಹುದು ಎಂದು ಪ್ರಮುಖ ಮಾರುಕಟ್ಟೆ ಸಂಸ್ಥೆ ಕ್ಯಾಂಪ್ಕೋ ಆತಂಕ ವ್ಯಕ್ತಪಡಿಸಿದ್ದನ್ನು ಇಲ್ಲಿ ಗಮನಿಸಬಹುದು.

ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 47939 48389
ರಾಶಿ 47429 47869
ಬೆಟ್ಟೆ 37119 37559
ಕೆಂಪುಗೋಟು 30600 31000
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 47312 49200
ಬೆಟ್ಟೆ 30629 37000
