CHITRADURGA NEWS | 12 JUNE 2026
ಚಿತ್ರದುರ್ಗ: ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅಭೂತಪೂರ್ವ ಗೆಲುವು ಸಾಧಿಸಿದ ಯೋಗಗುರು ಕೆಂಚವೀರಪ್ಪ ಅವರನ್ನು ಧವಳಗಿರಿ ನಾಗರಿಕರು ಹಾಗೂ ಪತಂಜಲಿ ಯೋಗ ಪರಿವಾರದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದನ್ನೂ ಓದಿ: ಶುಶ್ರೂಷಕಿಯರು ಆಸ್ಪತ್ರೆಯ ಬೆನ್ನೆಲುಬು | ಡಾ.ಪಾಲಾಕ್ಷಪ್ಪ
ನಗರದ ಹೊಳಲ್ಕೆರೆ ರಸ್ತೆಯ ಜ್ಞಾನಭಾರತಿ ಶಾಲೆಯ ಯೋಗ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಯೋಗ ಬಂಧುಗಳು ಒಗ್ಗೂಡಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಜೆ.ಎಸ್. ಗುರುಮೂರ್ತಿ ಅವರು, ಕೆಂಚವೀರಪ್ಪನವರ ಸರಳತೆ, ಸ್ನೇಹಪರತೆ ಹಾಗೂ ಸಮಾಜಕ್ಕೆ ಶ್ರಮಿಸುವ ಅರ್ಪಣಾ ಮನೋಭಾವವೇ ಅವರ ಈ ಯಶಸ್ಸಿಗೆ ಕಾರಣ ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಂಚವೀರಪ್ಪನವರು, ನನಗೆ ಸಿಕ್ಕಿರುವ ಈ ಅಧಿಕಾರ, ಜಯ ಹಾಗೂ ಸನ್ಮಾನಗಳಿಗಿಂತಲೂ ಯೋಗ ಬಂಧುಗಳೊಂದಿಗೆ ನಾನು ಹೊಂದಿರುವ ಒಡನಾಟವೇ ಅತ್ಯಂತ ಅಮೂಲ್ಯವಾದುದು ಎಂದು ನುಡಿದರು.
ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ನೇಮಕಾತಿ | ಅರ್ಜಿ ಅಹ್ವಾನ
ಈ ಸಂದರ್ಭದಲ್ಲಿ ಶಶಿಕಿರಣ್, ಜಿ.ಎಮ್. ಲವಕುಮಾರ್, ಕಾಂತಣ್ಣ, ರಂಗನಾಯಕ್, ಹೇಮಣ್ಣ, ಯೋಗ ರಘು, ಶ್ರೀಕಾಂತ್, ಜಯಣ್ಣ, ಹರೀಶ್ ಹಾಗೂ ಮಹಿಳಾ ಮುಖಂಡರಾದ ಮಾಲಾ, ವಿಜಯಲಕ್ಷ್ಮೀ, ಲತಾ, ರತ್ನಮ್ಮ, ಸುಧಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
