CHITRADURGA NEWS | 11 JUNE 2026
ಚಿತ್ರದುರ್ಗ: ಒಂದು ಆಸ್ಪತ್ರೆಗೆ ವೈದ್ಯರ ಸೇವೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ಶುಶ್ರೂಷಕರ (ನರ್ಸ್) ಸೇವೆ. ನಮ್ಮ ಸಂಸ್ಥೆಯ ಬೆನ್ನೆಲುಬಾಗಿ ನಿಂತು ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರು ನಮ್ಮ ಹೆಮ್ಮೆ ಎಂದು ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಪಾಲಾಕ್ಷಯ್ಯ ಹೇಳಿದರು.
ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ನೇಮಕಾತಿ | ಅರ್ಜಿ ಅಹ್ವಾನ
ನಗರದ ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಫ್ಲಾರೆನ್ಸ್ ನೈಟಿಂಗೇಲ್ ರವರ 206ನೇ ಜನ್ಮದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಶುಶ್ರೂಷಕ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಗುರುಕಲ್ ಮಠದ ಶ್ರೀ ಶಾಂತವೀರ ಮಾತನಾಡಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಸ್ಥಾಪಿಸಿದ ಈ ವಿದ್ಯಾಪೀಠವು ಸೂರ್ಯ-ಚಂದ್ರರಿರುವವರೆಗೂ ಶಾಶ್ವತವಾಗಿರುವಂತಹ ಜ್ಞಾನದ ಪೀಠವಾಗಿದೆ. ಎಲ್ಲ ವ್ಯವಸ್ಥೆಗೂ ನಾಶವಿದೆ, ಆದರೆ ಜ್ಞಾನರತ್ನಕ್ಕೆ ನಾಶವಿಲ್ಲ.
ವೈದ್ಯಕೀಯ ರಂಗದಲ್ಲಿರುವವರು ಸದಾ ಹಸನ್ಮುಖಿಗಳಾಗಿರಬೇಕು. ನಗುವಿಗಿಂತ ದೊಡ್ಡ ಔಷಧಿ ಮತ್ತೊಂದಿಲ್ಲ. ಬಸವಣ್ಣನವರ ವಚನದಂತೆ ಜಪ-ತಪ ಎಂದರೆ ನ್ಯಾಯ ಮತ್ತು ವಿನಯತೆ ಇರಬೇಕು. ರೋಗಿಗಳು ಬಂದಾಗ ಅಸಹ್ಯ ಪಡದೇ ನಗುಮುಖದಿಂದ ಸೇವೆ ಮಾಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ
ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಬಿ.ಗುಡಸಿ ಮಾತನಾಡಿ, ನಮ್ಮ ಸಂಸ್ಥೆಯ ಪ್ರತಿಯೊಬ್ಬ ಶುಶ್ರೂಷಕರೂ ಒಬ್ಬೊಬ್ಬ ನೈಟಿಂಗೇಲ್ ಇದ್ದಂತೆ. ಇಂದಿನ ಜಂಜಾಟದ ಜೀವನದಲ್ಲಿ ರೋಗಿಗಳು ನಿಮ್ಮ ಮೇಲಿಟ್ಟಿರುವ ನಂಬಿಕೆಯಿಂದ ನೋವನ್ನು ತೋಡಿಕೊಳ್ಳುತ್ತಾರೆ. ವಿಭಿನ್ನ ಹಿನ್ನೆಲೆಯಿಂದ ಬರುವ ರೋಗಿಗಳನ್ನು ಸಹನೆಯಿಂದ ಉಪಚರಿಸಬೇಕು.
ಮೊದಲು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಇನ್ನು ಮುಂದೆ ನೈಟಿಂಗೇಲ್ ರವರ ಭಾವಚಿತ್ರದೊಂದಿಗೆ ಮಾನವೀಯತೆಯ ಮೂರ್ತಿಗಳಾದ ಮದರ್ ತೆರೇಸಾ ಮತ್ತು ಮೇರಿ ಕ್ಯುರಿ ರವರ ಫೋಟೋಗಳನ್ನೂ ಇಡಿ. ಪ್ರತಿಯೊಬ್ಬರೂ ರಿಸರ್ಚ್ ಮೈಂಡ್ (ಸಂಶೋಧನಾ ಮನೋಭಾವ) ಬೆಳೆಸಿಕೊಳ್ಳಿ, ಅದಕ್ಕೆ ನಮ್ಮ ಸಂಸ್ಥೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
ಡಿನ್ ಎಮ್.ಎಸ್.ಡಾ.ರಾಜೇಶ್, ಶುಶ್ರೂಷಕ ಅಧೀಕ್ಷಕರಾದ ಹಾಲಸ್ವಾಮಿ ಕೆ.ಎಮ್.ಜಿ, ಡಾ.ಸವಿತಾ, ಡಾ.ನಾಗೇಂದ್ರಗೌಡ, ಡಾ.ವಾಗೀಶ್ ಕುಮಾರ್ ಮಾತನಾಡಿದರು.
ಸಂಸ್ಥೆಯ ಪ್ರಥಮ ಡೀನ್ ಆಗಿ ಸೇವೆ ಸಲ್ಲಿಸಿ, ಇತ್ತೀಚೆಗಷ್ಟೇ ನಿಧನರಾದ ಕಂಠೀರವ ಅವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದನ್ನೂ ಓದಿ: ಛಲವಾದಿ ಮಠದ ಜಮೀನು ಟ್ರಸ್ಟ್‌ಗೆ ಹಸ್ತಾಂತರ
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 25 ವರ್ಷ ಸೇವೆ ಸಲ್ಲಿಸಿದ ಡಿ-ಗ್ರೂಪ್ ನೌಕರರಿಗೆ ಸನ್ಮಾನಿಸಲಾಯಿತು.
ಡಾ.ನಾರಾಯಣ ಮೂರ್ತಿ, ಡಾ.ಗೀತಾ, ಡಾ.ಯೋಗಿಂದ್ರ, ಡಾ.ರುದ್ರಯ್ಯ, ಡಾ.ರಾಮು, ಡಾ.ಸಂತೋಷ್, ಸತ್ಯನಾರಾಯಣ್, ಪವಿತ್ರ ಸುರೇಶ್ ಬಾಬು, ಆನಂದ್ ಪಾಟೀಲ್, ಬಸವಕುಮಾರ್, ಗುರುಮೂರ್ತಿ, ಪ್ರಶಾಂತ್, ದಿನೇಶ್ ಕುಮಾರ್, ಟಿ.ಕಿರಣ್, ಸಿದ್ದಗಂಗಮ್ಮ, ಹೇಮಲತಾ, ಭರತ್, ಕೆ.ಟಿ. ಶಿವಪ್ರಸಾದ್, ವಿ.ಪಾಲಾಕ್ಷ ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
