CHITRADURGA NEWS | 12 JUNE 2026
ಚಿತ್ರದುರ್ಗ: ಮಕ್ಕಳಲ್ಲಿ ಭಾಷಾ ಕೌಶಲ್ಯಗಳಲ್ಲಿ ಸಾಮರ್ಥ್ಯ ಬೆಳೆಸಿದಾಗ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಚಿತ್ರದುರ್ಗ ಡಯಟ್(ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ) ಉಪನ್ಯಾಸಕ ಎಸ್.ಬಸವರಾಜು ಹೇಳಿದರು.
ಇದನ್ನೂ ಓದಿ: ಛಲವಾದಿ ಮಠದ ಜಮೀನು ಟ್ರಸ್ಟ್‌ಗೆ ಹಸ್ತಾಂತರ
ಸಿರಿಗೆರೆಯ ಸರ್ಕಾರಿ ಹಿ.ಪ್ರಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಬಾಲಕರ ಶಾಲೆಗೆ ಬುಧವಾರ ಭೇಟಿ ನೀಡಿ ದ್ವಿಭಾಷಾ ತರಗತಿ ಬೋಧನೆ ನಿರ್ವಹಣೆ, ಶಾಲಾ ಶೈಕ್ಷಣಿಕ ಯೋಜನೆ, ವೇಳಾಪಟ್ಟಿ ಪರಿಶೀಲಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿ ಬೋಧನೆ ಪ್ರಾರಂಭಿಸಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಭಾಷಾ ಕೌಶಲ್ಯಗಳಲ್ಲಿ (ಆಲಿಸುವಿಕೆ, ಮಾತು, ಓದು ಮತ್ತು ಬರವಣಿಗೆ) ಸಾಮರ್ಥ್ಯ ಬೆಳೆಸಬೇಕು.
ಭಾಷೆಯಲ್ಲಿ ಪರಿಣಿತಿ ಪಡೆದರೆ ಇತರೆ ವಿಷಯಗಳನ್ನು ಸುಲಭವಾಗಿ ಕಲಿಯುತ್ತಾರೆ. ಭವಿಷ್ಯದ ಉನ್ನತ ಶಿಕ್ಷಣ ಪಡೆಯಲು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇದು ನೆರವಾಗುತ್ತದೆ. ಈ ಹಂತದಲ್ಲಿ ಶಿಕ್ಷಕರು ದ್ವಿಭಾಷಾ ತರಗತಿ ಬೋಧನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಅಭಿವ್ಯಕ್ತಿ ಸಾಮರ್ಥ್ಯ, ಸಂವಹನಾ ಸಾಮರ್ಥ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜೂನ್ 11 | ಹತ್ತಿ ರೇಟ್ ಎಷ್ಟಿದೆ?
ಮುಖ್ಯ ಶಿಕ್ಷಕಿ ಎಸ್. ಜ್ಯೋತಿಲಕ್ಷ್ಮಿ ಮಾತನಾಡಿ, ಎಲ್ಲ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಪೂರ್ವ ಪರೀಕ್ಷೆ ನಡೆಸಲಾಗಿದೆ. ವಿದ್ಯಾರ್ಥಿಗಳ ಪೂರ್ವ ಪರೀಕ್ಷೆ ಫಲಿತಾಂಶದ ಆಧಾರದಲ್ಲಿ ಎ ಮತ್ತು ಬಿ ಶ್ರೇಣಿಯನ್ನು ಗುರುತಿಸಿಕೊಳ್ಳಲಾಗಿದೆ. ಬಿ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ಮೂಲಕ ಕಲಿಕಾ ಸಾಮರ್ಥ್ಯ ಬೆಳೆಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಬಾಲಕರ ಸ.ಪ್ರಾ.ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಟಿ.ಕೆ.ಕಲ್ಪನಾ, ಬಾಲಕಿಯರ ಸ.ಹಿ.ಪ್ರಾ.ಶಾಲೆಯ ಅಧ್ಯಕ್ಷ ಮನ್ಸೂರ್, ಸದಸ್ಯರಾದ ಕವಿತಾ, ಕೆಂಚಮ್ಮ, ಮುಖ್ಯ ಶಿಕ್ಷಕಿ ಕೆ.ಜಿ ಕಲ್ಪನಾ, ಶಿಕ್ಷಕರಾದ ಎಸ್.ಜೆ.ಮಧು, ಎಂ.ಎಸ್.ಸೌಭಾಗ್ಯ, ಗಿರಿಜಾ, ರೇಣುಕಾ, ಶಿವಮಂಗಳಮ್ಮ, ವಿಜಯಕಲಾ, ಪುಷ್ಪಲತಾ, ಅತಿಥಿ ಶಿಕ್ಷಕರಾದ ಮಮತ, ತನುಜ ಮತ್ತಿತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
