
CHITRADURGA NEWS | 12 JUNE 2026
ಹೊಸದುರ್ಗ: ಇಲ್ಲಿನ ಸಾಣೇಹಳ್ಳಿ ಮಠದ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ 2026-27ನೇ ಸಾಲಿನ ರಂಗಶಿಕ್ಷಣ ಡಿಪ್ಲೋಮಾಗೆ ಅರ್ಜಿ ಅಹ್ವಾನಿಸಲಾಗಿದೆ.
ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ನೇಮಕಾತಿ | ಅರ್ಜಿ ಅಹ್ವಾನ
ಕನಿಷ್ಟ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಉತ್ತಿರ್ಣರಾಗಿರಬೇಕು, ಪದವೀಧರರಿಗೆ ಆದ್ಯತೆ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
ಭಾರತೀಯ ರಂಗಭೂಮಿ, ಪಾಶ್ಚಾತ್ಯ ರಂಗಭೂಮಿ, ಕನ್ನಡ ರಂಗಭೂಮಿ, ಸಾಹಿತ್ಯ ಪರಂಪರೆ, ಅಭಿನಯ, ಆಹಾರ್ಯ ಮತ್ತು ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ಪ್ರಸಿದ್ಧ ರಂಗತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ನಡೆಯುವವು.
ಕಳರಿ, ಯೋಗ, ಕಥಕ್ಕಳಿ, ಯಕ್ಷಗಾನ, ಕಂಸಾಳೆ, ಹೆಜ್ಜೆಮೇಳ, ವೀರಗಾಸೆ, ಪ್ರಸಾಧನ, ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸ ಮುಂತಾದ ಕಾರ್ಯಾಗಾರಗಳ ಜೊತೆಗೆ ಕಾವ್ಯ, ಸಿನಿಮಾ, ಚಿತ್ರಕಲೆ, ವಚನ ಸಾಹಿತ್ಯ ಕುರಿತಾದ ಕಮ್ಮಟಗಳು ಮತ್ತು ನಾಲ್ಕರಿಂದ ಐದು ನಾಟಕಗಳ ಅಭ್ಯಾಸ ಪ್ರದರ್ಶನ ನಡೆಯುವವು.
ಇದನ್ನೂ ಓದಿ: ಛಲವಾದಿ ಮಠದ ಜಮೀನು ಟ್ರಸ್ಟ್‌ಗೆ ಹಸ್ತಾಂತರ
ರಂಗಶಿಕ್ಷಣದ ಎರಡನೆಯ ವರ್ಷದ ಮುಂದುವರಿಕೆಯ ಹಂತವಾಗಿ ಒಂದು ವರ್ಷದ ಶಿವಸಂಚಾರ ತಿರುಗಾಟದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುತ್ತದೆ.
ಆಸಕ್ತರು www.theatreschoolsanehalli.in ಈ ವೆಬ್ ಸೈಟ್ ವಿಳಾಸದಲ್ಲಿ ಪ್ರವೇಶ ಅರ್ಜಿಗಳನ್ನು ಡೌನ್ ಲೋಡ್ ಮಾಡಿ, ಜೂನ್ 25 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರು ಜೂನ್ 29 ಮತ್ತು 30 ರಂದು ಸಾಣೇಹಳ್ಳಿಯಲ್ಲಿ ನಡೆಯುವ ಸಂದರ್ಶನಲ್ಲಿ ಭಾಗವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ 9448398144, 9880872740, 9480282791 ಗೆ ಸಂಪರ್ಕಿಸಬಹುದು ಎಂದು ರಂಗಶಾಲೆಯ ಪ್ರಾಚಾರ್ಯ ರಾಘು ಪುರಪ್ಪೆಮನೆ ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

