
CHITRADURGA NEWS | 31 AUGUST 2025
ಹೊಸದುರ್ಗ: ಸಮ್ಮೇಳನಗಳಲ್ಲಿ ಮಿತವ್ಯಯ ಅಳವಡಿಸಿಕೊಂಡು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಸಾಣೇಹಳ್ಳಿ ಪಂಡಿತರಾಧ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಫಕೃದ್ದೀನ್ ಸಾವು | ಮೀಟರ್ ಬಡ್ಡಿ ದಂಧೆ, ಚಿಟ್ ಫಂಡ್ ವಿರುದ್ಧ ಜನಾಕ್ರೋಶ

ಸಾಣೇಹಳ್ಳಿ ಮಠದಲ್ಲಿ ಜರುಗಿದ ಸಮ್ಮೇಳನದ ಖರ್ಚುವೆಚ್ಚದ ಸಭೆಯಲ್ಲಿ ಮಾತನಾಡಿದರು.
2024 ರ ಫೆಬ್ರವರಿ 2 ಮತ್ತು 3 ರಂದು ಜರುಗಿದ ಮೊದಲ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನೆರವೇರಿತು. ಸಮ್ಮೇಳದ ವಿಷಯದಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಎಲ್ಲವೂ ಅಚ್ಚುಕಟ್ಟಾಗಿ ಜರುಗಿತು. ನಮ್ಮನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದ್ದರಿಂದ ವೈಯುಕ್ತಿಕವಾಗಿ ಮುಜುಗರವಾಯಿತು.
ಆದರೆ ಗೋಷ್ಠಿಗಳು, ಹಾಗೂ ಆಯೋಜನೆ ಉತ್ತಮವಾಗಿತ್ತು. ಆದಾಯ ಮತ್ತು ಖರ್ಚುಗಳ ಪಟ್ಟಿಯನ್ನು ಗಮನಿಸಿದ್ದೇನೆ. ಒಂದಷ್ಟು ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಬೇಕು.
ಸಮ್ಮೇಳನದಲ್ಲಿ ಖರ್ಚು ಹೆಚ್ಚಾಗಿ ಆದಾಯದ ಮೂಲಗಳು ಕಡಿಮೆಯಾಗಿದ್ದು, ಹಣದ ಕೊರತೆಯಾಗಿರುವುದು ಕಂಡುಬಂದಿದೆ. ಅಂತಿಮವಾಗಿ ಎಲ್ಲಾ ಖರ್ಚುಗಳನ್ನು ಸರಿದೂಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮಲ್ಲಿಗೆ ಹೂವು ಮುಡಿಯುವುದು ಆರೋಗ್ಯಕ್ಕೆ ಪರಿಣಾಮಕಾರಿಯಂತೆ
ಸಮ್ಮೇಳನದ ಕೋಶಾಧ್ಯಕ್ಷ ಎ.ಸಿ.ಚಂದ್ರಪ್ಪ ಮಾತನಾಡಿ, ಸಮ್ಮೇಳನದಲ್ಲಿನ ಖರ್ಚುವೆಚ್ಚಗಳನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಲಾಗಿದೆ. ಆದರೆ ಕೊರತೆಯಾಗಿದ್ದರಿಂದ ಲೆಕ್ಕ ಪತ್ರಗಳನ್ನು ನೀಡುವುದು ತಡವಾಗಿದೆ. ಕೊರತೆಯಾಗಿದ್ದ ಹಣವನ್ನು ದಾನಿಗಳು ನೀಡಿದ್ದಾರೆ.
ಈ ಸಮ್ಮೇಳನದಲ್ಲಿ ಅಚ್ಚುಕಟ್ಟಾದ ಗೋಷ್ಠಿಗಳು, ಊಟದ ವ್ಯವಸ್ಥೆಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಸಮ್ಮೇಳನಾಧ್ಯಕ್ಷರಾಗಿದ್ದ ಪಂಡಿತಾರಾದ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಸಮ್ಮೇಳನ ಯಶಸ್ವಿಯಾಗಿದೆ. ಯಶಸ್ಸಿಗೆ ಕಾರಣರಾದ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ದಾನಿಗಳಿಗೆ ವಿಶೇಷವಾಗಿ ಅಭನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಇದನ್ನೂ ಓದಿ: ಹಲ್ಲುನೋವಿಗೆ ಇಂಗು ಪ್ರಯೋಜನಕಾರಿಯೇ?
ಚಿತ್ರದುರ್ಗ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಕೋಶಾಧ್ಯಕ್ಷರಾದ ಆರ್.ಮಲ್ಲಿಕಾರ್ಜುನಯ್ಯ, ಎ.ಸಿ.ಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ, ಕಡೂರು ಕಸಾಪ ಅಧ್ಯಕ್ಷ ಪರಮೇಶ್, ಹೊಸದುರ್ಗ ಕಸಾಪ ಮಾಜಿ ಅಧ್ಯಕ್ಷ ಬಿ.ಪಿ.ಓಂಕಾರಪ್ಪ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
