Connect with us

    ಹಿಮಾಲಯದ ತಪ್ಪಲಲ್ಲಿ ಭಗೀರಥ ಜಯಂತಿ ಆಚರಿಸಿದ ಕನ್ನಡದ ಮಠಾಧೀಶರು

    ಹಿಮಾಲಯದ ತಪ್ಪಲಲ್ಲಿ ಕನ್ನಡದ ಮಠಾಧೀಶರಿಂದ ಭಗೀರಥ ಜಯಂತಿ ಆಚರಣೆ

    ಮುಖ್ಯ ಸುದ್ದಿ

    ಹಿಮಾಲಯದ ತಪ್ಪಲಲ್ಲಿ ಭಗೀರಥ ಜಯಂತಿ ಆಚರಿಸಿದ ಕನ್ನಡದ ಮಠಾಧೀಶರು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 14 MAY 2024

    ಚಿತ್ರದುರ್ಗ: ಹಿಮಾಲಯದ ತಪ್ಪಲಿನಲ್ಲಿ ನಡೆದ ರಾಜ ಋಷಿ ಭಗೀರಥ ಮಹರ್ಷಿಗಳ ಜಯಂತೋತ್ಸವದಲ್ಲಿ, ಕನ್ನಡದ ಮಠಾಧೀಶರು ಭಾಗವಹಿಸಿ ಭಗೀರಥ ಜಯಂತಿ ಆಚರಿಸಿದರು.

    ಇದನ್ನೂ ಓದಿ: ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ವಧು-ವರರ ಸಮಾವೇಶ | ಸರ್ವಧರ್ಮಿಯ ವಧು,ವರರು ಭಾಗವಹಿಸಲು ಅವಕಾಶ

    ಶ್ರೀ ರಾಜ ಋಷಿ ಭಗೀರಥ ಮಹರ್ಷಿಗಳ ಜಯಂತಿಯ ಶುಭಾಶಯಗಳು,ಕಠಿಣ ತಪಸ್ಸಿನ ಮೂಲಕ ದೇವಗಂಗೆ, ಬ್ರಹ್ಮದೇವ, ಪರಮೇಶ್ವರರನ್ನು ಒಲಿಸಿಕೊಂಡು ದೇವಗಂಗೆಯನ್ನು ಧರೆಗಿಳಿಸಿ ಸಗರ ಮಹಾಚಕ್ರವರ್ತಿಯ 60000 ಮಕ್ಕಳನ್ನು ಅಂದರೆ ತನ್ನ ಪೂರ್ವಜರಿಗೆ ಮುಕ್ತಿಗೊಳಿಸಿ ಶಾಪ ವಿಮೋಚನೆಗೊಳಿಸಿದ ಮಹಾ ತಪಸ್ವಿ,

    ಶ್ರೀ ಭಗೀರಥ ಮಹರ್ಷಿಗಳು ಸಕಲ ಜೀವಕೋಟಿ ಹಾಗೂ ಮನುಕುಲದ ಉದ್ದಾರ ಮಾಡಿದ ಮಹರ್ಷಿಗಳ ಅನುಗ್ರಹ ಆಶೀರ್ವಾದ ಸಕಲ ಭಕ್ತರಿಗೂ ಸಿಗಲೆಂದು, ಭೀಕರ ಬರಗಾಲ ಇರುವುದರಿಂದ ಮಳೆ ಬೆಳೆ ಸಮೃದ್ಧಿ ದೊರೆಯಲೆಂದು ಕರ್ನಾಟಕದ ಈ ಎಲ್ಲಾ ಮಠದೀಶರು ಹಿಮಾಲಯದ ಶ್ರೇಣಿಯ ಪುಣ್ಯಕ್ಷೇತ್ರದಲ್ಲಿ ಪ್ರಾರ್ಥಿಸಿ, ಸಕಲ ಭಕ್ತರಿಗೂ ಶುಭಾಶಯಗಳನ್ನು ಹಾರೈಸಿದರು

    ಇದನ್ನೂ ಓದಿ: ತಪ್ಪಿದ ಭಾರೀ ಅನಾಹುತ | 49 ಪ್ರಯಾಣಿಕರ ಜೀವ ಉಳಿಸಿದ ಐರಾವತ ಬಸ್ ಚಾಲಕ

    ಭಗಿರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಮಹಾ ಸ್ವಾಮಿಜೀ, ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾ ಸ್ವಾಮಿಜೀ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾ ಸ್ವಾಮಿಜೀ,ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಜೀ, ಮಡಿವಾಳ ಗುರು ಪೀಠದ ಶ್ರೀ ಬಸವ ಮಾಚಿದೇವ ಸ್ವಾಮಿಜೀ,

    ಇದನ್ನೂ ಓದಿ: ಶ್ರೀ ರಾಜಾ ಉತ್ಸವಾಂಭ ಉಚ್ಚಂಗೆಲ್ಲಮ್ಮ ದೇವಿಗೆ ಬಂಗಾರದ ಮುಖಪದ್ಮ

    ನಾರಾಯಣ ಗುರುಪೀಠದ ಶ್ರೀ ರೇಣುಕಾನಂದ ಮಹಾಸ್ವಾಮಿಜೀ, ಕುಂಬಾರ ಗುರು ಪೀಠದ ಶ್ರೀ ಕುಂಬಾರಗುಂಡಯ್ಯ ಮಹಾಸ್ವಾಮಿಜೀ, ಹಡಪದ ಗುರುಪೀಠದ ಶ್ರೀ ಅನ್ನದಾನಿ ಭಾರತೀಯ ಅಪ್ಪಣ್ಣ ಸ್ವಾಮಿಜೀ, ವೇದಾರ ಗುರು ಪೀಠದ ಶ್ರೀ ಕೇತೇಶ್ವರ ಮಹಾಸ್ವಾಮಿಜೀ, ಪಾರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಜೀ, ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮಿಜೀ, ಶಿಕಾರಿಪುರದ ಶ್ರೀ ಚನ್ನಬಸವ ಮಹಾಸ್ವಾಮಿಜೀ, ಇರುಕಲ್ಲ ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top